ಇತ್ತೀಚಿನ ಸುದ್ದಿ
ಲಾರಿ ಮಾಲಕರ ಸಂಕಷ್ಟಕ್ಕೆ ಸರಕಾರ ಸ್ಪಂದಿಸಬೇಕಿದೆ : ಶಾಸಕ ಡಾ. ವೈ. ಭರತ್ ಶೆಟ್ಟಿ
03/11/2023, 19:24

ಮಂಗಳೂರು(reporterkarnataka.com): ಉದ್ಯಮ ವಲಯ ಚೇತರಿಸುತ್ತಿದ್ದರೂ ಲಾರಿ ಮಾಲಕರು ಇನ್ನೂ ಸಂಕಷ್ಟದಲ್ಲಿಯೇ ಇರುವುದು ವಿಪರ್ಯಾಸ. ಲಾರಿ ವ್ಯವಹಾರ ನಷ್ಟದಲ್ಲಿಯೇ ಮುಂದುವರಿಯಬಾರದು. ಸರಕಾರ ಲಾರಿ ಮಾಲಕರ ಸಂಕಷ್ಟಗಳಿಗೆ ಸ್ಪಂದಿಸಬೇಕಿದೆ ಎಂದು ಶಾಸಕ ಡಾ. ವೈ. ಭರತ್ ಶೆಟ್ಟಿ ಹೇಳಿದರು.
ಅವರು ಕುಳಾಯಿಯಲ್ಲಿ ದಕ್ಷಿಣ ಕನ್ನಡ ಟ್ರಕ್ ಓನರ್ಸ್ ಅಸೋಸಿಯೇಷನ್ (ರಿ.) ಇದರ ನೂತನ ಕಚೇರಿ ಉದ್ಘಾಟಿಸಿ ಮಾತನಾಡಿದರು.
ಜಿಂದಾಲ್ ಮಂಗಳೂರು ಕಲ್ಲಿದ್ದಲು ಘಟಕ ಮುಖ್ಯಸ್ಥ ಎಲ್. ರಾಮನಾಥನ್,ಸಂಘದ ಅಧ್ಯಕ್ಷ ಸುಶಾಂತ್ ಶೆಟ್ಟಿ , ಪಣಂಬೂರು ಉಪ ಪೊಲೀಸ್ ಆಯುಕ್ತ ಮನೋಜ್ ಕುಮಾರ್ ನಾಯ್ಕ್, ಸಾರಿಗೆ ಉದ್ಯಮಿ ನಿತ್ಯಾನಂದ ಶೆಟ್ಟಿ, ಉದ್ಯಮಿ ಹಾಗೂ ಸಂಘದ ಗೌರವಾಧ್ಯಕ್ಷ ಸುಜಿತ್ ಆಳ್ವ, ಸಂಘದ ಸಲಹೆಗಾರ ಬಿ.ಎಸ್. ಚಂದ್ರು ಮಾತನಾಡಿ ಶುಭ ಹಾರೈಸಿದರು.
ಪ್ರಧಾನ ಕಾರ್ಯದರ್ಶಿ ಸುನಿಲ್ ಡಿಸೋಜಾ ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ಹಾರಿಸ್ ಹೊಸ್ಮಾರ್ ನಿರೂಪಿಸಿ ವಂದಿಸಿದರು.