ಇತ್ತೀಚಿನ ಸುದ್ದಿ
ಲೋರಟ್ಟೋ ಪದವು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎನ್ನೆಸ್ಸೆಸ್ ವಾರ್ಷಿಕ ವಿಶೇಷ ಶಿಬಿರ
21/01/2023, 12:49
ಬಂಟ್ವಾಳ(reporterkarnataka.com): ಲೋರಟ್ಟೋ ಪದವು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯುತ್ತಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜು ಬಂಟ್ವಾಳ ಇದರ ಎನ್ನೆಸ್ಸೆಸ್ ಘಟಕದ ವಾರ್ಷಿಕ ವಿಶೇಷ ಶಿಬಿರದ ಶೈಕ್ಷಣಿಕ ಕಾರ್ಯಕ್ರಮ ದಲ್ಲಿ ಸಂಸ್ಕೃತಿ ಚಿಂತಕ ಶ್ರೀ ಚಂದ್ರಹಾಸ ಕಣಂತೂರು ‘ತುಳುವರ ಜೀವನಾನುಭವ ಗಾದೆಗಳು ಹಾಗೂ ಮಂಡೆ ಕಥೆಗಳು’ ವಿಷಯದ ಬಗ್ಗೆ ಉಪನ್ಯಾಸ ನೀಡಿದರು. ಮುಖ್ಯ ಅತಿಥಿ ಸೋರ್ನಾಡು ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಐಸಾಕ್ ವಾಸ್ ಶಿಬಿರಾರ್ಥಿಗಳಿಗೆ ಶುಭ ಕೋರಿದರು. ರಾಷ್ಟ್ರೀಯ ಸೇವಾ ಯೋಜನಾ ಘಟಕದ ಯೋಜನಾಧಿಕಾರಿ ಪ್ರೊ. ಹೈದರಾಲಿ ಅಧ್ಯಕ್ಷತೆ ವಹಿಸಿದರು. ಶಿಬಿರಾರ್ಥಿ ಧನರಾಜ್ ವಂದಿಸಿದರು