ಇತ್ತೀಚಿನ ಸುದ್ದಿ
ಲೋಕಸಭಾ ಚುನಾವಣೆಯಲ್ಲಿ ನಾರಿ ಶಕ್ತಿ ಪಾತ್ರ ನಿರ್ಣಾಯಕ: ಶಾಸಕ ಡಾ.ಭರತ್ ಶೆಟ್ಟಿ
22/03/2024, 21:28

ಕಾವೂರು(reporterkarnataka.com): ಲೋಕಸಭಾ ಚುನಾವಣೆಯಲ್ಲಿ ನಾರಿ ಶಕ್ತಿ ನಿರ್ಣಾಯಕ. ದೇಶ ನಡೆಸುವ ಹಾಗೂ ಮನೆ ನಡೆಸುವ ಎರಡೂ ಜಾವಾಬ್ದಾರಿಯನ್ನು ಮಹಿಳೆಯರು ನಿಭಾಯಿಸ ಬಲ್ಲರು.ಈ ಬಾರಿಯ ಲೋಕಸಭಾ ಚುನಾವಣೆಯಲ್ಲೂ ಮಹಿಳಾ ಮೋರ್ಚಾವು ಶ್ರಮ ವಹಿಸಿದರೆ ಗೆಲುವು ನಿಶ್ಚಿತ ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ. ಹೇಳಿದರು.
ಭಾರತೀಯ ಜನತಾ ಪಾರ್ಟಿ ಮಂಗಳೂರು ಉತ್ತರ ಮಂಡಲದ ಮಹಿಳಾ ಮೋರ್ಚಾದಿಂದ
ಏ. 26ರಂದು ನಡೆಯುವ ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಕಾವೂರಿನಲ್ಲಿ ನಡೆದ ಮಹಿಳಾ ಪ್ರಮುಖರ ಸಭೆಯಲ್ಲಿ ಮಾತನಾಡಿದರು.
ಸಭೆಯ ಅಧ್ಯಕ್ಷತೆಯನ್ನು ಮಹಿಳಾ ಮೋರ್ಚಾದ ಅಧ್ಯಕ್ಷರಾದ ರೇಖಾ ರಾಜೇಶ್ ವಹಿಸಿಕೊಂಡರು. ಜಿಲ್ಲಾ ಮಹಿಳಾ ಮೋರ್ಚಾದ ಅಧ್ಯಕ್ಷರಾದ ಮಂಜುಳಾ ರಾವ್ ಅವರು ಸಭೆಯನ್ನುದ್ದೇಶಿಸಿ ಸಮಯ ಪಾಲನೆ ಹಾಗೂ ಬೂತ್ ಮಟ್ಟದಲ್ಲಿ ಮಹಿಳೆಯರ ಸಂಘಟನೆ ಹಾಗೂ ಚುನಾವಣಾ ಪ್ರಕ್ರಿಯೆಯಲ್ಲಿ ಮಹಿಳೆಯರು ಯಾವ ರೀತಿ ತೊಡಗಿಸಿಕೊಳ್ಳಬೇಕು ಎಂಬುದನ್ನು ತಿಳಿಸಿದರು
ಜಿಲ್ಲಾ ಮಹಿಳಾ ಚುನಾವಣಾ ಸಂಚಾಲಕರಾದ ಕಸ್ತೂರಿ ಪಂಜ ಅವರು ಚುನಾವಣೆಗೆ ಸಂಘಟನಾತ್ಮಕವಾಗಿ ಮಹಿಳೆಯರ ಒಗ್ಗೂಡುವಿಕೆ ಹಾಗೂ ಲೋಕಸಭಾ ಚುನಾವಣಾ ಪ್ರಕ್ರಿಯೆಯಲ್ಲಿ ನಮ್ಮೆಲರ ಜವಾಬ್ದಾರಿ ಏನು ಎಂಬುದನ್ನು ತಿಳಿಸಿದರು. ಧನಲಕ್ಷ್ಮಿಗಟ್ಟಿ ಅವರು ಸ್ವಸಹಾಯ ಸಂಘದವರನ್ನು ಸೇರಿಸಿ ಬೂತ್ ಮಟ್ಟದಲ್ಲಿ ಯಾವ ರೀತಿ ಕಾರ್ನರ್ ಬೈಟೆಕ್ ಗಳನ್ನು ಮಾಡುವುದು ಎಂಬುದನ್ನು ತಿಳಿಸಿದರು. ಸಭೆಯಲ್ಲಿ ಮಂಡಲ ಅಧ್ಯಕ್ಷ ರಾಜೇಶ್ ಕೊಠಾರಿ, ಮಹಾನಗರ ಪಾಲಿಕೆಯ ಉಪ ಮಹಾಪೌರರಾದ ಸುನಿತಾ ಬೆಂಗ್ರೆ, ಜಿಲ್ಲಾ ಮಹಿಳಾ ಮೋರ್ಚಾ ಉಪಾಧ್ಯಕ್ಷರಾದ ಬಬಿತಾ ರವೀಂದ್ರ , ವಜ್ರಾಕ್ಷಿ, ಜಿಲ್ಲಾ ಮಹಿಳಾ ಮೋರ್ಚಾ , ಪ್ರಧಾನ ಕಾರ್ಯದರ್ಶಿಯಾದ ಲಿಖಿತಾ , ಜಿಲ್ಲಾ ಮಹಿಳಾ ಮೋರ್ಚಾ ಕಾರ್ಯದರ್ಶಿಯಾದ ಸುಮಾ ಶೆಟ್ಟಿ , ಮಹಾನಗರ ಪಾಲಿಕೆಯ ಸದಸ್ಯರು, ಪಂಚಾಯಿತಿನ ಸದಸ್ಯರು ಹಾಗೂ ಪಕ್ಷದ ಹಿರಿಯ ಕಾರ್ಯಕರ್ತರು ಉಪಸ್ಥಿತರಿದ್ದರು.
ಮಂಡಲ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿಗಳಾದ ಸ್ವಪ್ನಾ ಕಾರ್ಯಕ್ರಮದ ನಿರೂಪಣೆ ಮಾಡಿದರು. ಮಂಡಲ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿಗಳಾದ ಪವಿತ್ರಾ ನಿರಂಜನ್ ಸ್ವಾಗತಿಸಿದರು. ಸವಿತಾ ಅವರು ಧನ್ಯವಾದ ನೀಡಿದರು.