ಇತ್ತೀಚಿನ ಸುದ್ದಿ
ಲೋಕಸಭೆ ಚುನಾವಣೆ: ಕಾಂಗ್ರೆಸ್ ಮೊದಲ ಪಟ್ಟಿ ಶೀಘ್ರ ಬಿಡುಗಡೆ; ಉಡುಪಿ- ಚಿಕ್ಕಮಗಳೂರಿನಿಂದ ಜಯಪ್ರಕಾಶ್ ಹೆಗ್ಡೆ, ಮೈಸೂರಿನಿಂದ ಡಾಲಿ ಧನಂಜಯ್ ಬಹುತೇಕ ಫೈನಲ್
04/03/2024, 12:01

ಬೆಂಗಳೂರು(reporterkarnataka.com): ಮುಂಬರುವ ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮೊದಲ ಪಟ್ಟಿ ಅಂತಿಮವಾಗಿದ್ದು, ಉಡುಪಿ- ಚಿಕ್ಕಮಗಳೂರು ಸಂಸತ್ ಕ್ಷೇತ್ರಕ್ಕೆ ಮಾಜಿ ಸಚಿವ ಕೆ. ಜಯಪ್ರಕಾಶ್ ಹೆಗ್ಡೆ ಹಾಗೂ ಮೈಸೂರು ಕ್ಷೇತ್ರದಿಂದ ಖ್ಯಾತ ನಟ ಡಾಲಿ ಧನಂಜಯ ಅಭ್ಯರ್ಥಿತನ ಬಹುತೇಕ ಫೈನಲ್ ಆಗಿದೆ ಎಂದು ಪಕ್ಷದ ಮೂಲಗಳಿಂದ ತಿಳಿದು ಬಂದಿದೆ.
ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಮಾರ್ಚ್ 10ರ ಒಳಗೆ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಈ ಮಧ್ಯೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ದೆಹಲಿಗೆ ತೆರಳಿ ಹೈಕಮಾಂಡ್ ಜತೆ ಚರ್ಚಿಸಲಿದ್ದಾರೆ.
ಸಿಎಂ, ಡಿಸಿಎಂ ಪ್ರತ್ಯೇಕ ಸರ್ವೆ ರಿಪೋರ್ಟ್ ಆಧಾರದ ಮೇಲೆ ಸಿದ್ದಪಡಿಸಿರುವ ಪ್ರತ್ಯೇಕ ಅಭ್ಯರ್ಥಿಗಳ ಪಟ್ಟಿಯನ್ನು ಈ ಸಂದರ್ಭದಲ್ಲಿ ಸಲ್ಲಿಸಲಿದ್ದಾರೆ.
ಮೊದಲ ಪಟ್ಟಿಯಲ್ಲಿ ಉಡುಪಿ- ಚಿಕ್ಕಮಗಳೂರು, ಮೈಸೂರು, ಮಂಡ್ಯ, ತುಮಕೂರು, ಬೆಂಗಳೂರು ಗ್ರಾಮಾಂತರ ಮುಂತಾದ ಕ್ಷೇತ್ರಗಳಿವೆ.
*ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ*
*ಉಡುಪಿ-ಚಿಕ್ಕಮಗಳೂರು – ಜಯಪ್ರಕಾಶ್ ಹೆಗ್ಡೆ.
“ಮೈಸೂರು – ಎನ್.ಲಕ್ಷ್ಮಣ/ಡಾಲಿ ಧನಂಜಯ್.
*ಮಂಡ್ಯ – ಸ್ಟಾರ್ ಚಂದ್ರು.
*ತುಮಕೂರು – ಎಸ್.ಪಿ.ಮುದ್ದಹನುಮೇಗೌಡ/ ಡಿ.ಸಿ.ಗೌರಿಶಂಕರ್.
*ಚಿಕ್ಕಬಳ್ಳಾಪುರ – ರಕ್ಷಾ ರಾಮಯ್ಯ.
*ಕೋಲಾರ – ಕೆ.ಎಚ್.ಮುನಿಯಪ್ಪ.
*ಚಿತ್ರದುರ್ಗ – ಬಿ.ಎನ್.ಚಂದ್ರಪ್ಪ.
*ಬೆಂಗಳೂರು ಗ್ರಾಮಾಂತರ – ಡಿ.ಕೆ.ಸುರೇಶ್.
*ಬೆಂಗಳೂರು ಸೆಂಟ್ರಲ್ – ರಿಜ್ವಾನ್ ಹರ್ಷದ್/ ಟಬೂ ಗುಂಡೂರಾವ್.
*ಬೆಂಗಳೂರು ಉತ್ತರ – ಕುಸುಮಾ ಹನುಮಂತರಾಯಪ್ಪ.
*ಬೆಂಗಳೂರು ದಕ್ಷಿಣ – ಸೌಮ್ಯ ರೆಡ್ಡಿ.
*ಉತ್ತರ ಕನ್ನಡ – ಅಂಜಲಿ ನಿಂಬಾಳ್ಕರ್