8:22 AM Saturday4 - April 2026
ಬ್ರೇಕಿಂಗ್ ನ್ಯೂಸ್
ವಾರ್ ಎಫೆಕ್ಟ್‌‌ | ಇವಿಗೆ ಹೆಚ್ಚಿದ ಡಿಮ್ಯಾಂಡ್: ತಿಂಗಳಲ್ಲಿ 29 ಸಾವಿರಕ್ಕೂ ಅಧಿಕ… ಗೋಪಾಲಪುರದ ಸಂತ ಅಂತೋಣಿ ಚರ್ಚ್ ನಲ್ಲಿ ಗುಡ್ ಫ್ರೈಡೆಯನ್ನು ಶಿಲುಬೆಟ್ಟದಲ್ಲಿ ಶ್ರದ್ದಾ ಭಕ್ತಿಯಿಂದ… ವಿರಾಜಪೇಟೆಯಲ್ಲಿ ಸಂಭ್ರಮದ ಹನುಮ ಜಯಂತಿ ಆಚರಣೆ: ಸಹಸ್ರಾರು ಸಂಖ್ಯೆಯಲ್ಲಿ ಸಮಾಗಮ ಪಾಟೀಲ್ – ಯತ್ನಾಳ್ ವಾಕ್ಸಮರ | ಒಂದು ದಿನ ಅವರೇ ಅಪ್ಪ-ಮಕ್ಕಳನ್ನು ಕೈಬಿಟ್ಟು… ದಾವಣಗೆರೆ ಉಪ ಚುನಾವಣೆ: ಕೆಂಡ ತುಳಿದು ಭಕ್ತಿ ಸಮರ್ಪಿಸಿದ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್‌ ಸಿದ್ದಗಂಗಾ ಮಠಕ್ಕೆ ಬಂದಿದ್ದು ನನ್ನ ಜೀವನದ ಸೌಭಾಗ್ಯ: ರಾಷ್ಟ್ರಪತಿ ದ್ರೌಪದಿ ಮುರ್ಮು ದಾವಣಗೆರೆ, ಬಾಗಲಕೋಟೆಯಲ್ಲಿ ಸಚಿವ ಜಮೀರ್ ಪ್ರಚಾರ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ತಮಿಳುನಾಡಿನಿಂದ ರೈಲಿನಲ್ಲಿ ಬಂದು ಕೆಂಜಾರು ದೇಗುಲದ ಹುಂಡಿ ಕಳ್ಳತನ: ಅಂತಾರಾಜ್ಯ ಕಳ್ಳನ ಬಂಧನ ಯಡಿಯೂರಪ್ಪ, ಬೊಮ್ಮಾಯಿ ಸರ್ಕಾರ ಬರೀ ಲೂಟಿ ಮಾಡಿದ್ದು ಬಿಟ್ಟರೆ ಅಭಿವೃದ್ಧಿ ಮಾಡಲಿಲ್ಲ: ಸಿಎಂ… ಸಿದ್ದರಾಮಯ್ಯ ಕಳ್ಳಮತಗಳಿಂದ ನನ್ನ ವಿರುದ್ಧ ಬಾದಾಮಿಯಲ್ಲಿ ಗೆದ್ದರು: ಶ್ರೀರಾಮುಲು ಆರೋಪ

ಇತ್ತೀಚಿನ ಸುದ್ದಿ

ಲಾಕ್ ಡೌನ್ ನಿಯಮ ಉಲ್ಲಂಘಿಸಿ 4 ಮದುವೆ: ಸುತ್ತಲಿದೆಯೇ ಪಾಲಿಕೆ ಆರೋಗ್ಯಾಧಿಕಾರಿ ಕೊರಳು ?

21/06/2021, 20:30

ಮಂಗಳೂರು(reporterkarnataka news): ಲಾಕ್ ಡೌನ್ ಗೈಡ್ ಲೈನ್ಸ್ ಗಾಳಿಗೆ ತೂರಿ ನಗರದ ಮಂಗಳಾದೇವಿಯಲ್ಲಿ ಭಾನುವಾರ ನಡೆದ ಅದ್ದೂರಿ ಮದುವೆ ಸಮಾರಂಭ ಮಂಗಳೂರು ಮಹಾನಗರಪಾಲಿಕೆಯ ಆರೋಗ್ಯಾಧಿಕಾರಿ

ಅವರ ಕೊರಳಿಗೆ ಸುತ್ತುವ ಎಲ್ಲ ಲಕ್ಷಣಗಳಿವೆ.

ಕೋವಿಡ್ ಗೈಡ್ ಲೈನ್ಸ್ ಪ್ರಕಾರ ಮನೆ ಬಿಟ್ಟು ಹೊರಗಡೆ ದೇವಸ್ಥಾನ, ಹಾಲ್ , ಛತ್ರಗಳಲ್ಲಿ ವಿವಾಹ ನಡೆಸಲು ಅವಕಾಶವಿಲ್ಲ. ಮನೆಯಲ್ಲಿ ಕೂಡ 25 ಮಂದಿ ಭಾಗವಹಿಸಲು ಮಾತ್ರ ಅವಕಾಶವಿದೆ. ವಾಸ್ತವಾಂಶ ಹೀಗಿರುವಾಗ ಮಂಗಳೂರು ಮಹಾನಗರಪಾಲಿಕೆ ಯಾವ ನೆಲೆಯಲ್ಲಿ ಮಂಗಳಾದೇವಿ ದೇಗುಲದ ಸಭಾಂಗಣದಲ್ಲಿ ಮದುವೆ ನಡೆಸಲು ಅವಕಾಶ ನೀಡಿತು ಎಂಬ ಪ್ರಶ್ನೆ ಉದ್ಬವಿಸಿದೆ. ಅದಲ್ಲದೆ 4 ಮದುವೆಯಲ್ಲಿ 200ಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು. ಪಾಲಿಕೆಯ ಆರೋಗ್ಯ ನಿರೀಕ್ಷಕರು ಹೇಗೆ ಕ್ಲಿಯರೆನ್ಸ್ ಸರ್ಟಿಫಿಕೇಟ್ ನೀಡಿದರು. ಯಾರು ಪ್ರಭಾವ ಬೀರಿ ಸರಕಾರದ ಮಾರ್ಗಸೂಚಿಯನ್ನು ಉಲ್ಲಂಘಿಸಿದರು ಎನ್ನುವ ಕುರಿತು ತನಿಖೆ ನಡೆಯಲಿದೆ.

ಮಂಗಳೂರು ಮಹಾನಗರಪಾಲಿಕೆಯ ನಾಮನಿರ್ದೇಶನ ಸದಸ್ಯ ಬಿಜೆಪಿಯ ಭಾಸ್ಕರಚಂದ್ರ ಶೆಟ್ಟಿ ಅವರ ಪುತ್ರಿಯ ಮದುವೆ ಸೇರಿದಂತೆ ಒಟ್ಟು ನಾಲ್ಕು ಜೋಡಿ ವಿವಾಹ

ನಡೆದಿತ್ತು. ಮಂಗಳಾದೇವಿ ದೇವಸ್ಥಾನದ ಅಂಗಣದಲ್ಲಿರುವ ಸಭಾಂಗಣದಲ್ಲಿ ವಿವಾಹ ಸಮಾರಂಭ ಏರ್ಪಟ್ಟಿತ್ತು. ಬೆಳಗ್ಗೆ 10 ಗಂಟೆಯಿಂದ 200ಕ್ಕೂ ಹೆಚ್ಚು ಮಂದಿ ವಿವಿಧ ವಾಹನಗಳಲ್ಲಿ ಆಗಮಿಸಿದ್ದರು. ಒಂದು ಸಂದರ್ಭದಲ್ಲಿ ಟ್ರಾಫಿಕ್ ಜಾಮ್ ಕೂಡ ಅಲ್ಲಿ ಉಂಟಾಗಿತ್ತು. ಕೊಂಬು ಕಹಳೆ ಮಂಗಳವಾದ್ಯ ಮೊಳಗಿತ್ತು. ಈ ಕುರಿತು ಸ್ಥಳೀಯ ನಿವಾಸಿಗಳೇ ದೂರು ನೀಡಿದ್ದರು. ಮಂಗಳೂರು ಅಸಿಸ್ಟೆಂಟ್ ಕಮಿಷನರ್ ಮದನ್ ಮೋಹನ್, ಪಾಲಿಕೆ ಉಪ ಆಯುಕ್ತ ಬಿನಾಯ್ ನಂಬಿಯಾರ್ ನೇತೃತ್ವದಲ್ಲಿ ಮುಜರಾಯಿ ಇಲಾಖೆಯ ಅಧಿಕಾರಿಗಳ ತಂಡ ದಾಳಿ ನಡೆಸಿತ್ತು.

ಇತ್ತೀಚಿನ ಸುದ್ದಿ

ಜಾಹೀರಾತು