5:07 AM Friday10 - October 2025
ಬ್ರೇಕಿಂಗ್ ನ್ಯೂಸ್
ಆಶ್ರಮ ಶಾಲೆಯಲ್ಲಿ ಬೆಂಕಿ ಅವಘಡ: ಮೃತ ವಿದ್ಯಾರ್ಥಿ ಪುಷ್ಪಕ್ ಕುಟುಂಬಕ್ಕೆ 5 ಲಕ್ಷ… ಕಾವೇರಿ ಸಂಕ್ರಮಣ: ಅ. 17ರಂದು ಕೊಡಗು ಜಿಲ್ಲೆಯಲ್ಲಿ ಸಾರ್ವತ್ರಿಕ ರಜೆ; ಮಧ್ಯಾಹ್ನ 1.44ಕ್ಕೆ… 2005ರ ಪೂರ್ವ ಅರಣ್ಯಭೂಮಿಯಲ್ಲಿ ಬದುಕು ಕಟ್ಟಿಕೊಂಡವರಿಗೆ ಭೂಮಿಯ ಹಕ್ಕು: ಮುಖ್ಯಮಂತ್ರಿ ಸಿದ್ದರಾಮಯ್ಯ ‘ನೀರಿದ್ದರೆ ನಾಳೆ – ವಾಟರ್ ಇಸ್ ಫ್ಯೂಚರ್’: ಯೋಜನೆಗೆ ಚಾಲನೆ’: ಬರುವ ಡಿಸೆಂಬರ್… ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ನಿರೀಕ್ಷಣಾ ಜಾಮೀನು ಅರ್ಜಿ ವಜಾ Chikkamagaluru | ಮೂಡಿಗೆರೆ: ‘PRESS’ ಎಂದು ಬರೆದ ಬೈಕ್ ನಲ್ಲಿ ಶ್ರೀಗಂಧ ಕಳ್ಳಸಾಗಣೆ;… ಸೋಮವಾರಪೇಟೆ ಹಂಡ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲೋಕಾಯುಕ್ತರ ಬಲೆಗೆ: 25 ಸಾವಿರ ಲಂಚ… ಇಂಗಾಲಮುಕ್ತ ಸರಕು ಸಾಗಣೆ ಪ್ರಧಾನಿ ಮೋದಿ ಅವರ ಕನಸು: ಕೇಂದ್ರ ಸಚಿವ ಕುಮಾರಸ್ವಾಮಿ ಮೈಸೂರು ಧರ್ಮಪ್ರಾಂತ್ಯ ಹೊಸ ಧರ್ಮಾಧ್ಯಕ್ಷರಾಗಿ ಡಾ. ಫ್ರಾನ್ಸಿಸ್ ಸೆರಾವೊ: ಧಾರ್ಮಿಕ ವಿಧಿ ವಿಧಾನ… ಮೂಡಿಗೆರೆಯಲ್ಲಿ ಭಯಾನಕ ಅಪಘಾತ | ಬೈಕ್ ಮೇಲೇರಿದ ಕ್ರೇನ್: ಮಹಿಳೆ ಸ್ಥಳದಲ್ಲೇ ಸಾವು;…

ಇತ್ತೀಚಿನ ಸುದ್ದಿ

5.79 ಲಕ್ಷಕ್ಕೂ ಅಧಿಕ ಸೂರ್ಯಘರ್‌ ಫಲಾನುಭವಿಗಳಿಗೆ ಸಾಲ ಸೌಲಭ್ಯ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

08/10/2025, 10:31

* ಬ್ಯಾಂಕ್‌ಗಳಿಂದ ₹10,907 ಕೋಟಿ ಸಾಲದ ಅರ್ಜಿಗಳಿಗೆ ಮಂಜೂರು

* ಕೇಂದ್ರ ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ಹೇಳಿಕೆ

ನವದೆಹಲಿ(reporterkarnataka.com): ಪಿಎಂ ಸೂರ್ಯಘರ್ ಯೋಜನೆಯಡಿ ಸಾರ್ವಜನಿಕ ವಲಯದ ಬ್ಯಾಂಕ್‌(ಪಿಎಸ್‌ಬಿ)ಗಳು 5.79 ಲಕ್ಷಕ್ಕೂ ಹೆಚ್ಚಿನ ಫಲಾನುಭವಿಗಳ ಸಾಲದ ಅರ್ಜಿಗಳನ್ನು ಮಂಜೂರು ಮಾಡಿವೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.
2025ರ ಸೆಪ್ಟೆಂಬರ್ ವೇಳೆಗೆ PSBಗಳು ಸೂರ್ಯಘರ್‌ ಯೋಜನೆ ಫಲಾನುಭವಿಗಳಿಗೆ ಒಟ್ಟಾರೆ ₹10,907 ಕೋಟಿ ಸಾಲ ಸೌಲಭ್ಯದ ಮೂಲಕ ಮೇಲ್ಛಾವಣಿ ಸೌರ ವ್ಯವಸ್ಥೆ ಸ್ಥಾಪನೆಗೆ ಆರ್ಥಿಕ ಬೆಂಬಲ ನೀಡಿವೆ ಎಂದು ಹೇಳಿದ್ದಾರೆ.
ಪ್ರಧಾನಮಂತ್ರಿ ಸೂರ್ಯಘರ್ ಮುಫ್ತ್ ಬಿಜ್ಲಿ ಯೋಜನೆ ಪ್ರತಿ ಮನೆಗಳನ್ನೂ ಶುದ್ಧ ಮತ್ತು ಕೈಗೆಟುಕುವ ಸೌರಶಕ್ತಿ ಮುಖೇನ ಸಬಲೀಕರಣಗೊಳಿಸುವಲ್ಲಿ ಮಹತ್ವದ ಮೈಲಿಗಲ್ಲು ಸಾಧಿಸುತ್ತಿದೆ ಎಂದಿದ್ದಾರೆ.

*ಜನಸಮರ್ಥ್ ಪೋರ್ಟಲ್ ಬೆಂಬಲ:* ಪಿಎಂ ಸೂರ್ಯಘರ್ ಯೋಜನೆಗೆ ಕಡಿಮೆ ಬಡ್ಡಿ ದರಗಳಲ್ಲಿ ಮೇಲಾಧಾರ-ಮುಕ್ತ ಕೈಗೆಟುಕುವ ಸಾಲ ಸೌಲಭ್ಯವನ್ನು PSBಗಳು ಸುಲಭಗೊಳಿಸಿವೆ. ಸರಳೀಕೃತ ಹಣಕಾಸು ಒದಗಿಸುವ ಮೂಲಕ ಸಕ್ರಿಯವಾಗಿ ಬೆಂಬಲ ನೀಡುತ್ತಿವೆ. ಸಾಲಗಳನ್ನು ಜನಸಮರ್ಥ್ ಪೋರ್ಟಲ್ ಮೂಲಕ ಸಂಸ್ಕರಿಸಲಾಗುತ್ತದೆ ಎಂದಿದ್ದಾರೆ.

*ಸ್ಪರ್ಧಾತ್ಮಕ ಬಡ್ಡಿದರದಲ್ಲಿ ಸಾಲ ಸೌಲಭ್ಯ:* ₹2 ಲಕ್ಷವರೆಗೆ ಮೇಲಾಧಾರವಿಲ್ಲದೆ ಸ್ಪರ್ಧಾತ್ಮಕ ಬಡ್ಡಿ ದರದಲ್ಲಿ ಸಾಲ ಒದಗಿಸಲಾಗುತ್ತಿದೆ. ಫಲಾನುಭವಿಗಳ ವಿದ್ಯುತ್ ವೆಚ್ಚ ಉಳಿತಾಯಕ್ಕೆ ಅನುಗುಣವಾಗಿ ಮರುಪಾವತಿಗೆ ದೀರ್ಘಾವಧಿ ಕಲ್ಪಿಸಿವೆ. ಅರ್ಜಿದಾರರಿಂದ ಸ್ವಯಂ ಘೋಷಣೆ ಆಧಾರದ ಮೇಲೆ ಡಿಜಿಟಲ್ ಮಂಜೂರಾತಿ ಪ್ರಕ್ರಿಯೆ ಸೇರಿದಂತೆ ಪ್ರಮುಖ ಪ್ರಯೋಜನಗಳನ್ನು ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಪಿಎಂ ಸೂರ್ಯಘರ್ ಯೋಜನೆಗಾಗಿ ರಾಷ್ಟ್ರೀಯ ಪೋರ್ಟಲ್ (pmsuryaghar.gov.in) ನೊಂದಿಗೆ ಸಂಯೋಜಿಸಲಾಗಿದೆ. ಇದು ಫಲಾನುಭವಿಗಳಿಗೆ ಕೊನೆವರೆಗೂ ತಡೆರಹಿತ ಡಿಜಿಟಲ್ ಅಪ್ಲಿಕೇಶನ್ ಪ್ರಕ್ರಿಯೆ, ಬಳಕೆದಾರ ಅನುಭವ ಮತ್ತು ಡೇಟಾ-ಚಾಲಿತ ನಿರ್ಧಾರಕ್ಕೆ ಉಪಯುಕ್ತವಾಗಿದೆ ಎಂದಿದ್ದಾರೆ.
ಹಣಕಾಸು ಸೇವೆಗಳ ಇಲಾಖೆ, ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ಸಹಯೋಗದೊಂದಿಗೆ ಸೂರ್ಯಘರ್‌ ಯೋಜನೆ ಸಾಲಗಳ ಪ್ರಗತಿಯನ್ನು ಸಕ್ರಿಯವಾಗಿ ಪರಿಶೀಲಿಸುತ್ತದೆ. ರಾಜ್ಯ ಮಟ್ಟದ ಬ್ಯಾಂಕರ್‌ಗಳ ಸಮಿತಿಗಳು ಮತ್ತು ಪ್ರಮುಖ ಜಿಲ್ಲಾ ವ್ಯವಸ್ಥಾಪಕರ ಸಹಯೋಗದೊಂದಿಗೆ ಯೋಜನೆ ಅನುಷ್ಠಾನವನ್ನು ಬಲಪಡಿಸುತ್ತದೆ. ಇದು ಯೋಜನೆ ವೇಗವನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದು ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು