ಇತ್ತೀಚಿನ ಸುದ್ದಿ
ಲಿಂಗಾಯಿತರ ಮತ ಬೇಕಾಗಿಲ್ಲ: ಸಿ.ಟಿ. ರವಿ ಹೇಳಿದ್ದಾರೆನ್ನಲಾದ ಹೇಳಿಕೆಗೆ ಮಾಜಿ ಸಿಎಂ ಯಡಿಯೂಪ್ಪ ನುಡಿದದ್ದೇನು?
16/03/2023, 15:12
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ಲಿಂಗಾಯಿತರ ಮತ ಬೇಡ ಎಂದು ಹೇಳಿದ್ದಾರೆ ಎನ್ನುವ ಕುರಿತು ಪ್ರತಿಕ್ರಿಯಿಸಿದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಯಾರೂ ಈ ರೀತಿಯ ಹೇಳಿಕೆ ನೀಡಬಾರದು. ಅದು ತಪ್ಪು ಎಂದು ಪ್ರತಿಕ್ರಿಯಿಸಿದ್ದಾರೆ.
ಮೂಡಿಗೆರೆಯಲ್ಲಿ ಗುರುವಾರ ಮಾಧ್ಯಮ ಜತೆ ಮಾತನಾಡಿದ ಯಡಿಯೂರಪ್ಪ ಅವರು,ಪಕ್ಷ ಅಧಿಕಾರಕ್ಕೆ ಬರಲು ಎಲ್ಲರೂ ಮುಖ್ಯ.
ಅವರನ್ನ ಕರೆಸಿ ಮಾತನಾಡುತ್ತೇನೆ, ಆ ರೀತಿ ಯಾರೂ ಮಾತಮಾಡಬಾರದು ಎಂದರು.ಮೂಡಿಗೆರೆ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟಗೊಂಡ ಬಗ್ಗೆ ಮಾತನಾಡಿದ ಅವರು, ಗೆಲ್ಲೋ ಪಕ್ಷದಲ್ಲಿ ಅವೆಲ್ಲಾ ಮಾಮೂಲಿ, ಎಲ್ಲಾ ಸರಿ ಮಾಡ್ತೀವಿ.
ಟಿಕೆಟ್ ಕೊಡೋದನ್ನ ಪಕ್ಷ ತೀರ್ಮಾನ ಮಾಡುತ್ತೆ.
ವಿಜಯ ಸಂಕಲ್ಪ ಯಾತ್ರೆಗೆ ಒಳ್ಳೆ ಪ್ರತಿಕ್ರಿಯೇ ಸಿಗುತ್ತಿದೆ. 140ಕ್ಕೂ ಹೆಚ್ಚು ಸ್ಥಾನ ಗೆದ್ದು ಸರ್ಕಾರ ರಚನೆ ಮಾಡುತ್ತೇವೆ ಎಂದು ನುಡಿದರು.














