ಇತ್ತೀಚಿನ ಸುದ್ದಿ
ಆಳ್ವಾಸ್ ನಲ್ಲಿ ಫೈನಾನ್ಸಿಯಲ್ ಇನ್ಕ್ಲೂಷನ್ ಮತ್ತು ಡಿಜಿಟಲ್ ಬ್ಯಾಂಕಿಂಗ್ ಕುರಿತು ಉಪನ್ಯಾಸ ಕಾರ್ಯಕ್ರಮ
08/08/2025, 22:30

ಮೂಡುಬಿದರೆ(reporterkarnataka.com):ಆಳ್ವಾಸ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ (ಅಟೋನೋಮಸ್ )ಕಾಲೇಜಿನ ಎಂಬಿಎ ವಿಭಾಗದಲ್ಲಿ ಫೈನಾನ್ಸಿಯಲ್ ಇನ್ಕ್ಲೂಷನ್ ಮತ್ತು ಡಿಜಿಟಲ್ ಬ್ಯಾಂಕಿಂಗ್ ಎಂಬ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮ ಜರುಗಿತು.
ಮಂಗಳೂರಿನ ವಿವಿ ಕಾಲೇಜಿನ ಪ್ರೊ. ಡಾ.ಯತೀಶ್ ಕುಮಾರ್ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿ,
ಯಾವುದೇ ಆರ್ಥಿಕತೆ ಪ್ರಬಲವಾಗಿರಬೇಕಾದರೆ ಅದರ ಬ್ಯಾಂಕಿಂಗ್ ವ್ಯವಸ್ಥೆ ದೃಢವಾಗಿರಬೇಕು ಮತ್ತು ಫೋನ್ ಬ್ಯಾಂಕಿಂಗ್‌ನಿಂದ ಡಿಜಿಟಲ್ ಬ್ಯಾಂಕಿಂಗ್‌ಗೆ ಆಗಿರುವ ಪರಿವರ್ತನೆಯಿಂದ ಆರ್ಥಿಕತೆಗೆ ಪುಷ್ಟಿ ಸಿಕ್ಕಿದೆ ಎಂದು ಅವರು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿದರು.
ಕಾರ್ಯಕ್ರಮದಲ್ಲಿ ಎಂಬಿಎ ವಿಭಾಗ ಮುಖ್ಯಸ್ಥ ಡಾ. ಕ್ಯಥೇ ರಿನ್
ಮತ್ತು ಶ್ರೀ ರುಚಿರ್ ಆನಂದ್ ಉಪಸ್ಥಿತರಿದ್ದರು.
ಪ್ರಥಮ ವರುಷದ ಎಂಬಿಎ ವಿಭಾಗದ 150 ವಿದ್ಯಾರ್ಥಿಗಳು ಭಾಗವಹಿಸಿದರು.