8:19 PM Saturday9 - August 2025
ಬ್ರೇಕಿಂಗ್ ನ್ಯೂಸ್
ಅತ್ತೂರುಕೊಲ್ಲಿ ಅದಿವಾಸಿಗಳ ಪರ ಹೋರಾಟ: ನಟ ಚೇತನ್ ಅಹಿಂಸಾ ಸೇರಿ ಐವರ ವಿರುದ್ಧ… Bangalore | ಪ್ರಧಾನಿ ಮೋದಿ ನಾಳೆ ಬೆಂಗಳೂರಿಗೆ: ವಂದೇ ಭಾರತ್ ಎಕ್ಸ್ ಪ್ರೆಸ್… ರಾಹುಲ್‌ ಗಾಂಧಿಯದ್ದು ಠುಸ್‌ ಪಟಾಕಿ, ಮತದಾರರ ಪಟ್ಟಿ ತಯಾರಿಯಲ್ಲಿ ಪ್ರಧಾನಿ ಅಥವಾ ಬಿಜೆಪಿಯ… ಧರ್ಮಸ್ಥಳದಲ್ಲಿ ಯೂಟ್ಯೂಬರ್ ಗಳ ಮೇಲೆ ಹಲ್ಲೆ ಪ್ರಕರಣ: ಓರ್ವ ಆರೋಪಿಯ ಕೊಕ್ಕಡದಲ್ಲಿ ಬಂಧನ ಆಲಮಟ್ಟಿ ಡ್ಯಾಮ್ ಎತ್ತರ 524 ಮೀಟರ್‌ಗೆ ಹೆಚ್ಚಿಸುವುದು ಕರ್ನಾಟಕದ ಹಕ್ಕು: ಕೇಂದ್ರ ಜಲಶಕ್ತಿ… Chikkamagaluru | ಕಾಫಿನಾಡಲ್ಲಿ ನಿಲ್ಲದ ಕಾಡಾನೆ ಉಪಟಳ: ಹೆದ್ದಾರಿ, ಕಾಫಿ ತೋಟದಲ್ಲಿಯೂ ದಾಂಧಲೆ ಶ್ರೀರಂಗಪಟ್ಟಣ: ಕಾವೇರಿ ನದಿಯಲ್ಲಿ ಅಳಿವಿನoಚಿನಲ್ಲಿರುವ ನೀರು ನಾಯಿಗಳ ಕಳ್ಳಬೇಟೆ: ಪ್ರಾಣಿ ಪ್ರಿಯರಿಂದ ಕಾರ್ಯಾಚರಣೆ ಮುತ್ತಾಲಿಕ್ ಜತೆ ವೇದಿಕೆ ಹಂಚಿಕೊಂಡ ಕೈ ಶಾಸಕಿ: ನಯನಾ ಮೋಟಮ್ಮ ವಿರುದ್ಧ ಪ್ರಾಯಶ್ಚಿತ್ತ… ಮತದಾರರ ಹಕ್ಕು ರಕ್ಷಣೆ ರಾಜಕೀಯ ಪಕ್ಷಗಳ ಕರ್ತವ್ಯ: ಡಿಸಿಎಂ ಡಿ.ಕೆ. ಶಿವಕುಮಾರ್ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ‘ರಿದಂ ಆಫ್ ಬಿಎಲ್‌ಆರ್‌’: ವಿಶಿಷ್ಟ ಧ್ವನಿ ಗುರುತು…

ಇತ್ತೀಚಿನ ಸುದ್ದಿ

ಅಂತಾರಾಜ್ಯ ಮಟ್ಟದ ಕವಿಗೋಷ್ಠಿಗೆ ಚಾಲನೆ; ಪತ್ರಿಕೆಗಳಲ್ಲಿ‌ ಸಾಹಿತ್ಯದ ಕವಿತೆಗಳು ಪ್ರಕಟವಾಗಲಿ; ವಿ.ಬಿ.ಕುಳಮರ್ವ

09/08/2025, 19:53

ಪುತ್ತೂರು(reporterkarnataka.com): ಪತ್ರಿಕೆಗಳಲ್ಲಿ ಇತ್ತೀಚೆಗೆ ಸಾಹಿತ್ಯ ಬರಹಗಳು ಕಡಿಮೆಯಾಗುತ್ತಿವೆ. ಕಥೆ ಕವನಗಳು ಪ್ರಕಟವಾಗುವುದೇ ಇಲ್ಲ. ಸಾಹಿತ್ಯ ಓದುವ ಅಭಿರುಚಿ ಕುಂಠಿತವಾಗುತ್ತಿದೆ ಎಂದು ನಿವೃತ್ತ ಶಿಕ್ಷಕ, ಕವಿ ವಿ.ಬಿ. ಕುಳಮರ್ವ ಕಾಸರಗೋಡು ಹೇಳಿದರು. ಹಿರಿಯ ಕವಿ ಗುಣಾಜೆ ರಾಮಚಂದ್ರ ಭಟ್ ಶಿಕ್ಷಕ ಕವಿಗಳಿಗಾಗಿ ಏರ್ಪಡಿಸಿದ ಅಂತಾರಾಜ್ಯಮಟ್ಟದ ಆಚಾರ್ಯ ಕವಿಗೋಷ್ಠಿಗೆ ಚಾಲನೆ ನೀಡಿ ಕವಿತೆಗಳ ವಿವಿಧ ಪ್ರಕಾರಗಳ ಬಗ್ಗೆ ಮಾತನಾಡಿ ಬಳಿಕ ಸ್ವರಚಿತ ಏಳೆ ಛಂದಸ್ಸಿನ ಕವನ ವಾಚನ ಮಾಡಿದರು.


ನಿವೃತ್ತ ಪ್ರಾಚಾರ್ಯ ಗಝಲ್ ಕವಿ ಡಾ. ಸುರೇಶ ನೆಗಳಗುಳಿ ಮಾತನಾಡಿ, ಕವಿಗಳು ಭಾವಕ್ಕೆ ಬದ್ಧರಾಗಿ ತಮ್ಮದೇ ಚೌಕಟ್ಟಿನಲ್ಲಿ ಕವನ ರಚಿಸಿದರೆ ಭಾವಪೂರ್ಣವಾಗಿರುತ್ತದೆ ಎಂದು ಶುಭಹಾರೈಸಿ ಮಾತನಾಡಿದರು. ಹಿರಿಯ ಪತ್ರಕರ್ತ ರೆಮಂಡ್ ಡಿಕುನ್ಹ ತಾಕೊಡೆ, ಕವಿಗಳಾದ ಹಾ.ಮ. ಸತೀಶ ಬೆಂಗಳೂರು, ಕೆ. ಪುರಂದರ ಭಟ್ , ಜಯಪ್ರಕಾಶ್ ರಾವ್ ಉಪಸ್ಥಿತರಿದ್ದರು.
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಜಯಾನಂದ ಪೆರಾಜೆ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕ ಕವಿಗಳಾದ ಕವಿತಾ ಉಮೇಶ್ ಉಜಿರೆ, ಪುಷ್ಪಲತಾ ಎ.ವಿ. ಮಂಗಳೂರು, ಸುಜಾತ ರೈ ಪಾಲ್ತಾಡಿ, ಮಾಲತಿ ಬೆಂಗಳೂರು, ಲಕ್ಷ್ಮೀಭಟ್ ಮಂಗಳೂರು, ಜನಾರ್ದನ ದುರ್ಗ ಹಾರಾಡಿ, ಮಮತಾ ಕಿರಣ್ ಬಿ.ಸಿ.ರೋಡು, ಶ್ವೇತಾ ಡಿ. ಬಡಗಬೆಳ್ಳೂರು, ಗೀತಾ ಕೊಂಕೋಡಿ ಮಿತ್ತೂರು, ದಿಲೀಪ್ ವೇದಿಕ್ ಕಡಬ, ಕಿಶೋರಿ ವಿ. ಮಧ್ವ, ರತ್ನಾ ಕೆ. ಭಟ್ ತಲಂಜೇರಿ, ಜಯರಾಮ ಪಡ್ರೆ ಶಂಭೂರು, ಜಯಶ್ರೀ ಶೆಣೈ ಬಂಟ್ವಾಳ, ಹರಿಣಾಕ್ಷಿ ಪಿ. ಬೆಳ್ತಂಗಡಿ, ದೇವಕಿ ಜಯಾನಂದ ಉಪ್ಪಿನಂಗಡಿ, ರಮೇಶ್ ಮೆಲ್ಕಾರ್ ತುಂಬೆ, ರಾಜಗೋಪಾಲ ಎನ್. ಬಡಗನ್ನೂರು, ಪರಮೇಶ್ವರಿ ಪ್ರಸಾದ್ ಮಂಗಳೂರು, ಡಾ. ಮೈತ್ರಿ ಭಟ್ ವಿಟ್ಲ, ಮೆರ್ಲಿನ್ ಮೇಬಲ್ ಮಸ್ಕರೇನಸ್, ಫ್ಲಾವಿಯಾ ಅಲ್ಬುಕರ್ಕ್ , ಸಂಧ್ಯಾ ಕೆಯ್ಯೂರು, ದಿವ್ಯಾ ರೈ ಪೆರುವಾಜೆ ಕುಂಬ್ರ , ಸಂಜೀವ ಮಿತ್ತಳಿಕೆ ಓಜಾಲ, ಮುರಾರಿ ರಾವ್ ಹೊಸಬೆಟ್ಟು , ವಿದ್ಯಾಶ್ರೀ ಅಡೂರು, ಡಾ. ವಾಣಿಶ್ರೀ ಕಾಸರಗೋಡು, ಡಾ. ಶಾಂತಾ ಪುತ್ತೂರು, ರೋಹಿಣಿ ಆಚಾರ್ಯ ,ಮಲ್ಲಿಕಾ ಜೆ ರೈ ಪುತ್ತೂರು ಸ್ವರಚಿತ ಕವನಗಳನ್ನು ವಾಚಿಸಿದರು.
ಪುತ್ತೂರಿನ ರೋಟರಿ ಜಿ.ಎಲ್.ರೋಟರಿ ಸಭಾಭವನದಲ್ಲಿ
ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ದ.ಕ. ಜಿಲ್ಲೆ , ಕಥಾ ಬಿಂದು ಪ್ರಕಾಶನ ಮಂಗಳೂರು,ಸ್ವರ್ಣೋದ್ಯಮಿ ಜಿ.ಎಲ್.ಆಚಾರ್ಯ ಶತಮಾನೋತ್ಸವ ಸಮಿತಿ ಪುತ್ತೂರು ಇವರ ಸಂಯುಕ್ತ ಆಶ್ರಯದಲ್ಲಿ‌ ಆಚಾರ್ಯ ಕವಿಗೋಷ್ಠಿಯನ್ನು ಶಿಕ್ಷಕರಿಗಾಗಿ‌‌ ಏರ್ಪಡಿಸಲಾಗಿತ್ತು.

ಇತ್ತೀಚಿನ ಸುದ್ದಿ

ಜಾಹೀರಾತು