9:22 AM Wednesday25 - February 2026
ಬ್ರೇಕಿಂಗ್ ನ್ಯೂಸ್
ಸಿಎಂ, ಡಿಸಿಎಂ ಕುರ್ಚಿ ಕಾಳಗದಲ್ಲಿ ಬ್ಯುಸಿ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೊನ್ನಾರು ರಂಗೋತ್ಸವ: 26ರ ವರೆಗೆ ಕಲಾಸಕ್ತರಿಗೆ ನಾಟಕ ವೀಕ್ಷಿಸುವ ಸದಾವಕಾಶ ಇಬ್ಬರು ಅಂತರ್ ರಾಜ್ಯ ಗಾಂಜಾ ಮಾರಾಟಗಾರರ ಸಹಿತ 4 ಮಂದಿ ಬಂಧನ: 12… ಯುವ ಕಾಂಗ್ರೆಸ್ಸಿಗರು ಬೇಷರತ್ ಕ್ಷಮೆ ಕೇಳಲಿ: ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಧೀರಜ್… ಸಿದ್ದಾಪುರ: ವಾಹನಗಳ ಮೇಲೆ ಮುಂದುವರೆದ ಕಾಡಾನೆ ದಾಳಿ; ಕೂದಲು ಎಳೆ ಅಂತರದಲ್ಲಿ ಕಾರ್ಮಿಕರು… ಪಿರಿಯಾಪಟ್ಟಣದ ರಾಷ್ಟ್ರೀಯ ಹೆದ್ದಾರಿ 275 ನಲ್ಲಿ ಅರಣ್ಯ ಬೆಂಕಿಗೆ ಅಹುತಿ:ಅಪಾರ ಪ್ರಮಾಣದ ಬಿದಿರು… ಸಿದ್ದಾಪುರ ಸಮೀಪದ ಕರಡಿಗೋಡು ಗ್ರಾಮದಲ್ಲಿ ವಾಹನ ಡಿಕ್ಕಿ: ಕಾಡುಕೋಣ ಕಾಲು ಮುರಿತ ಐರ್ಲೆಂಡ್‌ನಲ್ಲಿ ಕಡಬ ಕುಟ್ರುಪಾಡಿಯ ಯುವಕ ನಿಗೂಢವಾಗಿ ಸಾವು: ನೇಣು ಬಿಗಿದ ಸ್ಥಿತಿಯಲ್ಲಿ ಶವ… Kodagu | ಸಿದ್ದಾಪುರ: ಟ್ರ್ಯಾಕ್ಟರ್ ಮಗುಚಿ ಬಾದಾಮಿಯ ಕಾರ್ಮಿಕ ದುರ್ಮರಣ Kodagu | ಸಿದ್ದಾಪುರ ಬಳಿ ಕಾರು ಮೇಲೆ ಕಾಡಾನೆ ದಾಳಿ: ಜಖಂ

ಇತ್ತೀಚಿನ ಸುದ್ದಿ

ಲಸಿಕೆ ಖರೀದಿಗೆ ಕಾಂಗ್ರೆಸ್ ನೀಡಲಿದೆ 100ಕೋಟಿ ರೂಪಾಯಿ : ಮಾಜಿ ಸಿಎಂ ಸಿದ್ಧರಾಮಯ್ಯ ಘೋಷಣೆ

14/05/2021, 16:20

ಬೆಂಗಳೂರು(Reporter Karnataka News)

ರಾಜ್ಯದಲ್ಲಿ ಕೊವಿಡ್ 19ರ ಎರಡನೇ ಅಲೆ ಆರ್ಭಟ ಜೋರಾಗಿದೆ. ಕೊರೋನಾ ಸೋಂಕಿನ ಆರ್ಭಟದ ನಡುವೆಯೂ ಲಸಿಕೆ ನೀಡುವುದಕ್ಕೂ ಕೊರತೆ ಉಂಟಾಗಿದೆ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ರಾಜ್ಯ ಸರ್ಕಾರಕ್ಕೆ ನೆರವಿನ ಸಹಾಯ ಹಸ್ತ ಚಾಚಿದೆ. ಕೊರೋನಾ ಲಸಿಕೆ ಖರೀದಿಗಾಗಿ 100 ಕೋಟಿ ಸಹಾಯ ನೀಡುವುದಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ಘೋಷಿಸಿದ್ದಾರೆ.

ಈ ಕುರಿತಂತೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದ ಜನರಿಗೆ ಕೊರೋನಾ ಲಸಿಕೆ ನೀಡೋದಕ್ಕಾಗಿ ಕಾಂಗ್ರೆಸ್ ನಿಂದ 100 ಕೋಟಿ ಸಹಾಯ ಧನ ನೀಡಲಾಗುತ್ತದೆ. 10 ಕೋಟಿ ಕರ್ನಾಟಕ ಕಾಂಗ್ರೆಸ್ ಪಾರ್ಟಿ ಫಂಡ್ ನಿಂದ ನೀಡಲಾಗುತ್ತಿದ್ದರೇ, ಮಿಕ್ಕುಳಿದ 90 ಕೋಟಿಯನ್ನು ಕಾಂಗ್ರೆಸ್ ಎಂ ಎಲ್ ಎ ಹಾಗೂ ಎಂ ಎಲ್ ಸಿ ಫಂಡ್ ನಿಂದ ನೀಡಲಾಗುತ್ತದೆ. ಈ ಹಣದಿಂದ ಕೊರೋನಾ ಲಸಿಕೆ ಖರೀದಿಸಲು ಬಳಸಿಕೊಳ್ಳುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು