4:17 PM Thursday16 - January 2025
ಬ್ರೇಕಿಂಗ್ ನ್ಯೂಸ್
ಬಾಲಿವುಡ್ ನಟ ಸೈಫ್ ಅಲಿಖಾನ್ ಗೆ 6 ಬಾರಿ ಚಾಕು ಇರಿತ: ಮುಂಜಾನೆ… ಗರೋಡಿ ಜಾತ್ರೆಗೂ ಊರವರಿಗೆ ನೀರಿಲ್ಲ!: 5 ದಿನಗಳಿಂದ ನೋ ವಾಟರ್!!; ಮೇಯರ್ ಅವರೇ… ಹಸುಗಳ ಕೆಚ್ಚಲು ಕೊಯ್ದ ಪ್ರಕರಣ: ಸಚಿವ ಜಮೀರ್‌ ಭಾವಚಿತ್ರಕ್ಕೆ ಸಗಣಿ ಬಳಿದು ಬಿಜೆಪಿ… ಕೆಚ್ಚಲು ಕೊಯ್ದ ಪ್ರಕರಣ: ದನದ ಮಾಲೀಕನ ತಾಯಿಗೆ 3 ಹಸು ಕೊಡಿಸಿದ ಸಚಿವ… 5 ವರ್ಷದ ಕಂದಮ್ಮನ ಮೇಲೆ ಅತ್ಯಾಚಾರ: ಆರೋಪಿಯ ತಕ್ಷಣ ಬಂಧಿಸಲು ಆಗ್ರಹಿಸಿ ಎಐಎಂಎಸ್ಎಸ್… ಕಾಡಾನೆಯ ಚಿತ್ರೀಕರಣ ಮಾಡಲು ಹೋದ ಯೂಟ್ಯೂಬರ್ ಮೇಲೆ ಸಲಗ ದಾಳಿ: ಕೂದಲೆಳೆ ಅಂತರದಲ್ಲಿ… ವಿಕಲಚೇತನ ಉದ್ಯೋಗಿಗಳ ಜತೆ ಸಂಕ್ರಾಂತಿ ಹಬ್ಬ ಆಚರಿಸಿಕೊಂಡ ಕೇಂದ್ರ ಸಚಿವ ಕುಮಾರಸ್ವಾಮಿ ಶಬರಿಮಲೆ: ಆಕಾಶದತ್ತ ಮುಖ ಮಾಡಿ ಕಾಯುತ್ತಿದ್ದ ಭಕ್ತರಿಗೆ ಮಕರ ಜ್ಯೋತಿ ದರ್ಶನ: ಪುನೀತರಾದ… ನಂಜನಗೂಡು: ಶಿವಶರಣ ಶ್ರೀ ಸಿದ್ದರಾಮೇಶ್ವರ ರ ಜಯಂತಿ ಆಚರಣೆ ಜಿಹಾದಿ ಮನಸ್ಥಿತಿಯನ್ನು ಪೋಷಿಸಿ ಬೆಳೆಸುತ್ತಿರುವ ಸಿದ್ದರಾಮಯ್ಯ ಸರಕಾರ: ಸಂಸದ ಕ್ಯಾ ಬ್ರಿಜೇಶ್ ಚೌಟ…

ಇತ್ತೀಚಿನ ಸುದ್ದಿ

ಲಸಿಕೆ ಇಲ್ಲದೆ ಪರೀಕ್ಷೆ ಬೇಡ, ಶುಲ್ಕದಲ್ಲಿ ಶೇ. 50 ವಿನಾಯಿತಿ ನೀಡಿ: ಸರಕಾರಕ್ಕೆ ಎನ್ ಎಸ್ ಯುಐ ಆಗ್ರಹ

27/05/2021, 20:09

ಮಂಗಳೂರು(reporterkarnataka news):  ಕೊರೊನಾ ಹಿನ್ನೆಲೆಯಲ್ಲಿ ಎನ್ ಎಸ್ ಯುಐ ಮೂರು ಪ್ರಮುಖ ಬೇಡಿಕೆಗಳನ್ನು ಸರಕಾರದ ಮುಂದಿಟ್ಟಿದೆ. ಲಸಿಕೆ ಇಲ್ಲದೇ ಪರೀಕ್ಷೆ ಬೇಡ, ವಿದ್ಯಾರ್ಥಿಗಳ ಶುಲ್ಕದಲ್ಲಿ ಶೇ.50 ರಷ್ಟು ರಿಯಾಯಿತಿ ನೀಡಬೇಕು ಹಾಗೂ ಕೊರೊನಾ ಸೋಂಕಿನಿಂದ ಪೋಷಕರನ್ನು ಕಳೆದುಕೊಂಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣವನ್ನು ನೀಡಬೇಕು ಎಂಬ ಈ  ಮೂರು ಬೇಡಿಕೆಗಳನ್ನು ಈಡೇರಿಸುವಂತೆ ಎನ್ ಎಸ್ ಯುಐ ಜಿಲ್ಲಾಧ್ಯಕ್ಷ ಸವಾದ್ ಸುಳ್ಯ ಸರಕಾರವನ್ನು  ಆಗ್ರಹಿಸಿದ್ದಾರೆ.

ಗುರುವಾರ ನಗರದ ಮಲ್ಲಿಕಟ್ಟೆ ಕಾಂಗ್ರೆಸ್ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ಮೂರನೇ ಅಲೆಯ ಮುನ್ಸೂಚನೆ ಇದ್ದು, ವಿದ್ಯಾರ್ಥಿ ಮತ್ತು ಪೋಷಕರಲ್ಲಿ ಭಯವನ್ನುಂಟು ಮಾಡಿದೆ. ಇದರ ನಡುವೆ ಪರೀಕ್ಷೆಯನ್ನು ಮಾಡುವುದಾರೆ ವಿದ್ಯಾರ್ಥಿಗಳಿಗೆ  ಪ್ರಥಮ ಆದ್ಯತೆ ನೀಡಿ ವ್ಯಾಕ್ಸಿನನ್ನು ನೀಡಬೇಕು ಅಥವಾ ಪರೀಕ್ಷೆಯನ್ನೇ ರದ್ದುಗೊಳಿಸಬೇಕು. ಸತತವಾಗಿ ಒಂದು ವರ್ಷದಿಂದ ಕೊರೊನಾ ಮಹಾಮಾರಿ ತಾಂಡವವಾಡುತ್ತಿದ್ದು. ಲಾಕ್ ಡೌನ್ ಆಗಿರಬಹುದು, ಸಾಕಷ್ಟು ಕಾಲೇಜುಗಳು ಬಂದಾಗಿರುವುದರಿಂದ ಸರ್ಕಾರದಿಂದ ಸಿಗಬೇಕಾಗಿದ್ದ ವಿದ್ಯಾರ್ಥಿ ವೇತನ, ಶೈಕ್ಷಣಿಕ ಸಾಲ ವಿದ್ಯಾರ್ಥಿಗಳಿಗೆ ಲಭಿಸಿಲ್ಲ. ಕೇವಲ ಆನ್ ಲೈನ್ ತರಗತಿ ಮುಖಾಂತರ ಕ್ಲಾಸ್ ಗಳು ನಡೆಯುತ್ತಿದ್ದು,  ವಿದ್ಯಾರ್ಥಿಗಳ ಶುಲ್ಕದಲ್ಲಿ ಯಾವುದೇ ರಿಯಾಯಿತಿಯನ್ನು ಖಾಸಗಿ ಶಿಕ್ಷಣ ಸಂಸ್ಥೆಗಳು ಮಾಡಲಿಲ್ಲ. ಆದ್ದರಿಂದ ಪೂರ್ಣ ಪ್ರಮಾಣದ ಶುಲ್ಕವನ್ನು ಪಾವತಿಸಲು ಪೋಷಕರಿಗೆ ತೊಂದರೆಯಾಗಲಿದ್ದು,  ವಿದ್ಯಾರ್ಥಿ ಶುಲ್ಕದಲ್ಲಿ ಶೇ.50 ರಷ್ಟು ರಿಯಾಯಿತಿ ನೀಡಬೇಕು ಅಲ್ಲದೆ, ಕೋವಿಡ್ 19 ನಿಂದ ಅದೆಷ್ಟೋ  ವಿದ್ಯಾರ್ಥಿಗಳು ತಮ್ಮ ಆಧಾರ ಸ್ತಂಭವಾದ ಪೋಷಕರು, ಕುಟುಂಬಸ್ಥರನ್ನು  ಕಳೆದುಕೊಂಡು ಬೀದಿ ಪಾಲಾಗಿದ್ದಾರೆ. ಅವರ ಮುಂದಿನ ಸಂಪೂರ್ಣ ಶಿಕ್ಷಣವನ್ನು ಸರಕಾರ ವಹಿಸಿಕೊಳ್ಳಬೇಕು. ಅಂತಹ ವಿದ್ಯಾರ್ಥಿಗಳ ಕೆಜಿ-ಪಿಜಿ ವರೆಗಿನ ಶಿಕ್ಷಣವನ್ನು ಸರಕಾರ ಭರಿಸಬೇಕು  ಎಂದು ಒತ್ತಾಯಿಸಿದರು.

ವಿಟಿಯು ಉಸ್ತುವಾರಿ ಅನ್ವೀತ್ ಕಟೀಲ್ ಮಾತನಾಡಿ,  ಆಫ್ ಲೈನ್ ಪರೀಕ್ಷೆ ಮಾಡುವ ಮೊದಲು ಆಫ್ ಲೈನ್  ತರಗತಿಗಳನ್ನು  45 ದಿನಗಳ ಕಾಲ ನಡೆಸಬೇಕು. ಆನ್ಲೈನ್ ನಲ್ಲಿ ಶಿಕ್ಷಣ ಕೊಟ್ಟು ಆಫ್ಲೈನ್ ಪರೀಕ್ಷೆ  ನಡೆಸುತ್ತಿದ್ದು, ಇದರಿಂದ ವಿದ್ಯಾರ್ಥಿಗಳ ಫಲಿತಾಂಶಗಳಲ್ಲಿ  ವ್ಯತ್ಯಾಸ ಆಗುತ್ತಿದೆ. ವಿದ್ಯಾರ್ಥಿಗಳು ಅನುತ್ತೀರ್ಣರಾಗುತ್ತಿದ್ದಾರೆ. ಇಂತಹ ಶಿಕ್ಷಣ  ವ್ಯವಸ್ಥೆ ವಿದ್ಯಾರ್ಥಿಗಳಿಗೆ ತುಂಬಾ ನೋವುಂಟು ಮಾಡಿದೆ. ಆದುದರಿಂದ ವಿದ್ಯಾರ್ಥಿಗಳು ಕ್ಯಾರಿ ಓವರ್ ಪದ್ಧತಿಯನ್ನು  ಕೇಳುತ್ತಿದ್ದಾರೆ. ಹಿಂದಿನ ಸೆಮಿಸ್ಟರ್ ಪರೀಕ್ಷೆ  ಇನ್ನು ಮುಗಿದಿಲ್ಲ ಆದರೆ ಕಾಲೇಜುಗಳು ಮುಂದಿನ ಸೆಮಿಸ್ಟರ್ ತರಗತಿಗಳ್ಳನ್ನು ಆನ್ಲೈನ್ ಮೂಲಕ ಪ್ರಾರಂಭ  ಮಾಡಿದ್ದಾರೆ. ಒಬ್ಬ ವಿದ್ಯಾರ್ಥಿ ಒಂದೇ ಸೆಮಿಸ್ಟರ್ ನಲ್ಲಿ ಎಲ್ಲಾ ಸಬ್ಜೆಕ್ಟ್ ಗಳನ್ನು  ಓದುವುದು ಹೇಗೆ ಎಂದು ಪ್ರಶ್ನಿಸಿದರು.


ಈ ಸಂದರ್ಭದಲ್ಲಿ ಜಿಲ್ಲಾ ಎನ್ ಎಸ್ ಯುಐ ಉಪಾಧ್ಯಕ್ಷರಾದ ಆಸ್ಟನ್ ಸ್ವಿಕ್ವೇರಾ, ಅಂಕುಶ್ ಶೆಟ್ಟಿ, ನಿಕಿಲ್ ಪೂಜಾರಿ, ಮುಖಂಡರಾದ ಪವನ್ ಸಾಲ್ಯಾನ್, ಶಫೀಕ್, ರಿಲ್ವಾನ್ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು