ಇತ್ತೀಚಿನ ಸುದ್ದಿ
ಖ್ಯಾತ ಗಾಯಕಿ, ಪದ್ಮಭೂಷಣ ಪುರಸ್ಕೃತೆ ವಾಣಿ ಜಯರಾಂ ನಿಗೂಢ ಸಾವು: ಚೆನ್ನೈ ನಿವಾಸದಲ್ಲಿ ಶವಪತ್ತೆ
04/02/2023, 20:56

ಚೆನ್ನೈ(reporterkarnataka.com): ತನ್ನ ಕಂಠದಿಂದ ಕೋಟಿಗಟ್ಟಲೆ ಜನರ ಮನಗೆದ್ದ ಪದ್ಮಭೂಷಣ ಪುರಸ್ಕೃತೆ, ಖ್ಯಾತ ಗಾಯಕಿ ವಾಣಿ ಜಯರಾಂ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ತಮಿಳುನಾಡಿನ ಚೆನ್ನೈನ ನಿವಾಸದಲ್ಲಿ ವಾಣಿ ಜಯರಾಂ(77) ಅವರ ಶವ ಪತ್ತೆಯಾಗಿದೆ.
ಕನ್ನಡ, ತೆಲುಗು,ತಮಿಳು, ಹಿಂದಿ, ಮಲಯಾಳಂ ಸೇರಿದಂತೆ ಹಲವು ಭಾಷೆಗಳಲ್ಲಿ 10,000ಕ್ಕೂ ಹೆಚ್ಚು ಹಾಡುಗಳನ್ನು ವಾಣಿ ಜಯರಾಂ ಹಾಡಿ ಸಂಗೀತ ಪ್ರೇಮಿಗಳ ಮನಸೂರೆಗೊಂಡಿದ್ದರು. 2023ರ ಗಣರಾಜ್ಯೋತ್ಸವದ ದಿನದಂದು ಭಾರತ ಸರ್ಕಾರ ವಾಣಿ ಜಯರಾಂ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿತ್ತು.