ಇತ್ತೀಚಿನ ಸುದ್ದಿ
ಕುಲಶೇಖರ ಹೋಲಿ ಕ್ರಾಸ್ ಚರ್ಚ್ ಶತಮಾನೋತ್ತರ ಸುವರ್ಣ ಮಹೋತ್ಸವ ಮತ್ತು ಚರ್ಚ್ನ ಸಂಸ್ಥಾಪಕ ಫಾ. ಅಲೆಕ್ಸಾಂಡರ್ ಡುಬೋಯ್ ಅವರ 146ನೇ ಪುಣ್ಯತಿಥಿ: ಹೊರೆ ಕಾಣಿಕೆ ಮೆರವಣಿಗೆ
10/12/2023, 23:56

ಮಂಗಳೂರು(reporterkarnataka.com): ಮಂಗಳೂರಿನ ಕುಲಶೇಖರದ ಕೋರ್ಡೆಲ್ ನ ಹೋಲಿ ಕ್ರಾಸ್ ಚರ್ಚ್ನ ಶತಮಾನೋತ್ತರ ಸುವರ್ಣ ಮಹೋತ್ಸವ ಹಾಗೂ ಚರ್ಚ್ನ ಸಂಸ್ಥಾಪಕ ಫಾ. ಅಲೆಕ್ಸಾಂಡರ್ ಡುಬೋಯ್ ಅವರ 146 ನೇ ಪುಣ್ಯತಿಥಿ ಆಚರಣೆ ಹಾಗೂ ಅನ್ನ ಸಂತರ್ಪಣೆ ಡಿಸೆಂಬರ್ 11ರಂದು ಸೋಮವಾರ ನಡೆಯಲಿದ್ದು, ಆ ಪ್ರಯುಕ್ತ ಹೊರಕಾಣಿಕೆ ಮೆರವಣಿಗೆಯು ಭಾನುವಾರ ನಡೆಯಿತು.
ಬಿಕರ್ನಕಟ್ಟೆಯ ಬಾಲಯೇಸು ಪುಣ್ಯ ಕ್ಷೇತ್ರದ ಆವರಣದಿಂದ ಹೊರಟ ಹೊರೆ ಕಾಣಿಕೆ ಮೆರವಣಿಗೆಯಲ್ಲಿ 11 ವಲಯಗಳ ತಲಾ 4 ವಾರ್ಡ್ ಗಳ ಸಹಸ್ರಾರು ಮಂದಿ ಭಕ್ತರು ಭಾಗವಹಿಸಿದ್ದರು.
ಕುಲ್ಯರ್ದ ಅಜ್ಜೆರ್ ಎಂದೇ ಖ್ಯಾತಿವೆತ್ತ ಫಾ. ಅಲೆಕ್ಸಾಂಡರ್ ಡುಬೋಯ್ ಅವರ 146ನೇ ಪುಣ್ಯಸ್ಮರಣೆಯ ಪ್ರಯುಕ್ತ ಡಿಸೆಂಬರ್ 11ರಂದು ಸೋಮವಾರ ಸಂಜೆ 5.30ಕ್ಕೆ ಪವಿತ್ರ ಬಲಿ ಪೂಜೆ ನಡೆಯಲಿದೆ. ಬಿಷಪ್ ಅತೀ ವಂದನೀಯ ಡಾ. ಪೀಟರ್ ಪೌಲ್ ಸಲ್ಡಾನ್ಹಾ ಅವರು ನೇತೃತ್ವ ವಹಿಸುವರು. ಸಂಜೆ 7.00 ಗಂಟೆಗೆ ಪರಮ ಪ್ರಸಾದದ ಮೆರವಣಿಗೆ ನಡೆಯಲಿದೆ. ಬಳಿಕ ಎಲ್ಲ ಭಕ್ತರಿಗೆ ಅನ್ನಸಂತರ್ಪಣೆ ನಡೆಯಲಿದೆ ಎಂದು ಕುಲಶೇಖರ ಚರ್ಚಿನ ಪ್ರಕಟನೆ ತಿಳಿಸಿದೆ.