ಇತ್ತೀಚಿನ ಸುದ್ದಿ
ಕುಳಾಯಿ ಫೌಂಡೇಶನ್ ವತಿಯಿಂದ ಬಡವರಿಗೆ 100 ಆಹಾರ ಕಿಟ್ ವಿತರಣೆ
22/05/2021, 20:00
ಮಂಗಳೂರು(reporterkarnataka news): ಕೊರೊನಾ 2ನೇ ಅಲೆಯ ಹಿನ್ನೆಲೆಯಲ್ಲಿ ಲಾಕ್ ಡೌನ್ ವಿಧಿಸಿರುವುದರಿಂದ ಬಡವರು ಹಾಗೂ ನಿರ್ಗತಿಕರ ಸಂಕಷ್ಟಕೊಳಗಾಗಿದ್ದು, ಕುಳಾಯಿ ಫೌಂಡೇಶನ್ ವತಿಯಿಂದ ಬಡವರಿಗೆ 100 ಆಹಾರ ಕಿಟ್ ವಿತರಿಸಲಾಯಿತು.
ಫೌಂಡೇಶನ್ ಅಧ್ಯಕ್ಷೆ ಪ್ರತಿಭಾ ಕುಳಾಯಿ, ಕುಳಾಯಿ ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘ ಅಧ್ಯಕ್ಷ ಪ್ರಭಾಕರ ಕುಳಾಯಿ, ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ರಾಜೇಶ್ ಕುಳಾಯಿ, ಸುರತ್ಕಲ್ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಜೈಸನ್, ಫೌಂಡೇಶನ್ ಕೋಶಾಧಿಕಾರಿ ವಿಜಯ ಆಚಾರ್ಯ ಹೊಸಸಬೆಟ್ಟು ಮೊದಲಾದವರು ಉಪಸ್ಥಿತರಿದ್ದರು.