4:36 AM Tuesday16 - December 2025
ಬ್ರೇಕಿಂಗ್ ನ್ಯೂಸ್
1600 ಪಿ.ಎಸ್.ಐ ಹುದ್ದೆಗಳ ನೇಮಕಾತಿಗೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ: ಗೃಹ ಸಚಿವ ಡಾ.ಜಿ.ಪರಮೇಶ್ವರ ಸಂಸತ್ ಅಧಿವೇಶನ | ರಾಜ್ಯಸಭೆಯಲ್ಲಿ ವೋಟ್‌ ಚೋರಿ ಚರ್ಚೆ; ಕಾಂಗ್ರೆಸ್‌ ವಿರುದ್ಧ ಗುಡುಗಿದ… Belagavi | ಶ್ಯಾಮನೂರು ಶಿವಶಂಕರಪ್ಪ ಅವರ ನಿಧನಕ್ಕೆ ಸದನದಲ್ಲಿ ಮುಖ್ಯಮಂತ್ರಿ ಸಂತಾಪ ಓಟ್ ಚೋರಿ ಸುಳ್ಳನ್ನು ಸತ್ಯ ಮಾಡಲು ಕಾಂಗ್ರೆಸ್ ಯತ್ನ: ಬಸವರಾಜ ಬೊಮ್ಮಾಯಿ ಆರೋಪ ಸರಪಾಡಿ: ಅಕ್ರಮ ಗೋಸಾಗಾಟ ಪ್ರಕರಣ; ಆರೋಪಿಯ ಮನೆ, ಕೊಟ್ಟಿಗೆ ಜಫ್ತಿ ತಪ್ಪು ಕಲ್ಪನೆಯಿಂದ ಬೆಡ್ತಿ ವರದಾ ನದಿ ಜೋಡಣೆಗೆ ವಿರೋಧ ಬೇಡ: ಮಾಜಿ ಸಿಎಂ… ಸಂವಿಧಾನ ಪ್ರತಿ ಹಿಡಿದು ಈಗದನ್ನೇ ಗಾಳಿಗೆ ತೂರುತ್ತಿದ್ದಾರೆ; ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ… ಮಹಿಳೆಯರು ಅನ್ಯಾಯದ ವಿರುದ್ದ ಕಿತ್ತೂರು ಚೆನ್ನಮ್ಮ, ದುರ್ಗಾದೇವಿ ಆಗಬೇಕು: ಮಾಜಿ ಸಿಎಂ ಬಸವರಾಜ… ಮಡಿಕೇರಿ ಆಂಟಿ ಹನಿಟ್ರ್ಯಾಪ್ ಗೆ ಸಿಕ್ಕಿಬಿದ್ದ ಮಂಡ್ಯದ ಯುವಕ: ರಾತ್ರಿಯಿಡೀ ಗೂಸಾ; ಹಣ್ಣಕ್ಕೆ… ಮಡಿಕೇರಿಯಲ್ಲಿ ಆಂಧ್ರದ ನಕಲಿ ಪೊಲೀಸರ ಓಡಾಟ: ಪ್ರಕರಣ ದಾಖಲು

ಇತ್ತೀಚಿನ ಸುದ್ದಿ

ಕುಕ್ಕುಟ ಕ್ಷೇತ್ರದಲ್ಲಿ ಇನ್ನಷ್ಟು ಸಂಶೋಧನೆ: ಐಸಿಎಆರ್-ಎನ್‍ಐಎಎನ್‍ಪಿ ಜತೆಗೆ ಕೆಪಿಎಫ್‍ಬಿಎ ಒಪ್ಪಂದಕ್ಕೆ ಸಹಿ

28/05/2023, 17:30

ಮಂಗಳೂರು(reporterkarnataka.com): ಭಾರತೀಯ ಕೃಷಿ ಸಂಶೋಧನಾ ಮಂಡಳಿ(ಐಸಿಎಆರ್)- ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅನಿಮಲ್ ನ್ಯೂಟ್ರಿಷನ್ ಮತ್ತು ಫಿಸಿಯಾಲಜಿ (ಎನ್‍ಐಎಎನ್‍ಪಿ) ಜತೆಗೆ ಶುಕ್ರವಾರ ಕರ್ನಾಟಕ ಪೌಲ್ಟ್ರಿ ಫಾರ್ಮರ್ಸ್ ಮತ್ತು ಬ್ರೀಡರ್ಸ್ ಅಸೋಸಿಯೇಷನ್ (ಕೆಪಿಎಫ್‍ಬಿಎ) ನೊಂದಿಗೆ ಕುಕ್ಕುಟ ಕ್ಷೇತ್ರದಲ್ಲಿ ಹೆಚ್ಚಿನ ಸಹಯೋಗದ ಸಂಶೋಧನೆಗಾಗಿ ತಿಳುವಳಿಕಾ ಒಪ್ಪಂದ(ಎಂಒಯು)ಗೆ ಸಹಿ ಹಾಕಲಾಯಿತು.

ಬೆಂಗಳೂರಿನ ಐಸಿಎಆರ್-ಎನ್‍ಐಎಎನ್‍ಪಿ ನಿರ್ದೇಶಕ ಡಾ.ರಾಘವೇಂದ್ರ ಭಟ್ ಮತ್ತು ಕೆಪಿಫ್‍ಬಿಎ ಅಧ್ಯಕ್ಷ ಡಾ.ಬಿ. ಸುಶಾಂತ್ ರೈ ಒಪ್ಪಂದಕ್ಕೆ ಸಹಿ ಹಾಕಿದರು.
ಕುಕ್ಕುಟೋದ್ಯಮ ಕ್ಷೇತ್ರವು ಅಗಾದ ಸವಾಲುಗಳನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ ಇಂತಹ ಸಂಸ್ಥೆಯ ಸಹಯೋಗದಿಂದ ಸಂಶೋಧನೆಯ ಅವಶ್ಯಕತೆ, ವಿಶೇಷವಾಗಿ ಕುಕ್ಕುಟಗಳ ಪೋಷಣೆ ಕ್ಷೇತ್ರದಲ್ಲಿ ಅಗುತ್ತಿರುವ ವಿಚಾರಗಳು, ಪೌಷ್ಠಿಕಾಂಶದ ಸವಾಲುಗಳನ್ನು ವೈಜ್ಞಾನಿಕ ರೀತಿಯಲ್ಲಿ ಎದುರಿಸಲು ಎರಡೂ ಸಂಸ್ಥೆಗಳು ತಾಂತ್ರಿಕ ಜ್ಞಾನವನ್ನು ವಿನಿಮಯ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಕುಕ್ಕುಟಗಳ ಆರೋಗ್ಯದ ಮಹತ್ವವನ್ನು ಒತ್ತಿಹೇಳುತ್ತವೆ ಮತ್ತು ಪರಿಣಾಮವಾಗಿ ಅಂತಿಮ ಗ್ರಾಹಕರಿಗೆ ಗುಣಮಟ್ಟದ ಉತ್ಪನ್ನಗಳನ್ನು ನೀಡಲು ಇದು ಸಹಕಾರಿಯಾಗುತ್ತದೆ.
ಐಸಿಎಆರ್-ಎನ್‍ಐಎಎನ್‍ಪಿ ನಿರ್ದೇಶಕ ಡಾ.ರಾಘವೇಂದ್ರ ಭಟ್ ಮಾತನಾಡಿ, ಇಂತಹ ಒಪ್ಪಂದ ಮೂಲಕ ಸಂಸ್ಥೆಯಲ್ಲಿ ಅಗುತ್ತಿರುವ ಸಂಶೋಧನೆಗಳು ಅದರಿಂದ ಸಿಗುವ ಜ್ಞಾನ ಕುಕ್ಕುಟ ಕ್ಷೇತ್ರದ ಬೆಳವಣಿಗೆ ಪೂರಕವಾಗಲಿದೆ ಎಂದರು.
ಕೆಪಿಎಫ್‍ಬಿಎ ಚಟುವಟಿಕೆಗಳ ಬಗ್ಗೆ ವಿವರ ನೀಡಿದ ಡಾ.ಸುಶಾಂಶ್ ರೈ, ಕರ್ನಾಟಕದಲ್ಲಿ ಕುಕ್ಕುಟ ಸಾಕಾಣಿಕೆ ಕ್ಷೇತ್ರವು ಸಂಘಟಿತ ಮತ್ತು ಅಸಂಘಟಿತವಾಗಿ ಬಹಳ ದೊಡ್ಡದಾಗಿದೆ ಮತ್ತು ಗುಣಮಟ್ಟದ ಉತ್ಪನ್ನಗಳನ್ನು ನೀಡುವುದಲ್ಲದೆ ವಿಶ್ವ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕವಾಗಿರಲು ಪೌಷ್ಠಿಕಾಂಶದ ಬಗ್ಗೆ ವೈಜ್ಞಾನಿಕ ಒಳಹರಿವಿನ ಅಗತ್ಯವಿದೆ. ಇದಕ್ಕೆ ಈ ಸಂಸ್ಥೆ ಜತೆಗಿನ ಒಪ್ಪಂದ ನೆರವಾಗಲಿದೆ ಎಂದರು.
ಕೆಪಿಎಫ್‍ಬಿಎ ಮಾಜಿ ಅಧ್ಯಕ್ಷ ಎಂ.ಸಿ.ಆರ್.ಶೆಟ್ಟಿ, ಕೆಪಿಎಫ್‍ಬಿಎ ತಾಂತ್ರಿಕ ಸಮಿತಿಯ ಅಧ್ಯಕ್ಷ ಡಾ.ಜಿ.ಬಿ.ಪುಟ್ಟಣ್ಣಯ್ಯ, ಪ್ರಧಾನ ಕಾರ್ಯದರ್ಶಿ ಡಾ.ಅಂಜನ್ ಗೋಸ್ವಾಮಿ, ಕೆಪಿಎಫ್‍ಬಿಎ ಕಾರ್ಯನಿರ್ವಾಹಕ ಕಾರ್ಯದರ್ಶಿ ಇನಾಯತ್ ಉಲ್ಲಾ ಖಾನ್, ಕೆಪಿಎಫ್‍ಬಿಎ ಹಿರಿಯ ವಿಜ್ಞಾನಿ ಡಾ.ಉಮಾಕಾಂತ ಬಿ. ಐಸಿಎಆರ್-ಎನ್‍ಐಎಎನ್‍ಪಿಯ ಪ್ರಧಾನ ವಿಜ್ಞಾನಿ ಡಾ.ಎ.ವಿ.ಇಳಂಗೋವನ್, ಪ್ರಧಾನ ವಿಜ್ಞಾನಿ ಡಾ.ಕೆ.ವಿ.ಎಚ್.ಶಾಸ್ತ್ರಿ, ಐ.ಸಿ ಪಿಎಂಇ ಡಾ.ಡಿ.ಟಿ.ಪಾಲ್ ಮತ್ತು ಐ.ಸಿ ಐಟಿಎಂಯು ಡಾ.ಅತುಲ್ ಪಿ ಕೋಲ್ಟೆ ಪ್ರತಿನಿಧಿಗಳಾಗಿ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು