ಇತ್ತೀಚಿನ ಸುದ್ದಿ
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಾರಿ ದುರಂತ: ಮನೆ ಮೇಲೆ ಗುಡ್ಡ ಕುಸಿತ; ಇಬ್ಬರು ಮಕ್ಕಳು ಮಣ್ಣಿನಡ್ಡಿ ಸಿಲುಕಿದ ಶಂಕೆ
01/08/2022, 22:39
ಅಶೋಕ್ ಕಲ್ಲಡ್ಕ ಮಂಗಳೂರು
ಅನುಷ್ ಪಂಡಿತ್ ಮಂಗಳೂರು
info.reporterkarnataka@gmail.com
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಾರೀ ಮಳೆಯಾಗುತ್ತಿದ್ದು, ವರುಣನ ಆರ್ಭಟಕ್ಕೆ ಕುಮಾರಧಾರ ಬಳಿಯ ಪರ್ವತಮುಖಿ ಎಂಬಲ್ಲಿ ಮನೆಯೊಂದರ ಮೇಲೆ ಗುಡ್ಡ ಜರಿದು ಬಿದ್ದು, ಮನೆ ಸಂಪೂರ್ಣವಾಗಿ ನಾಶಗೊಂಡಿದ್ದು, ಮಣ್ಣಿನಡ್ಡಿ ಇಬ್ಬರು ಮಕ್ಕಳು ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ಧಾರಾಕಾರ ಮಳೆಗೆ ಏಕಾಏಕಿ ಮನೆಯ ಹಿಂಬದಿಯ ಗುಡ್ಡ ಕುಸಿದು ಬಿದ್ದಿದೆ. ಗುಡ್ಡ ಕುಸಿತದ ವೇಳೆ ಒಂದು ಮಗುವಿನ ಜತೆ ತಾಯಿ
ಹೊರಗೆ ಓಡಿ ಬಂದಿದ್ದಾರೆ. ಇಬ್ಬರು ಮಕ್ಕಳು ಮನೆಯೊಳಗೆ ಓದುತ್ತಿರುವ ಕಾರಣ ಅವರು ಮಣ್ಣಿನಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಮಕ್ಕಳ ತಂದೆ ಕುಸುಮಾಧರ ಅವರು ಮನೆಯ ಪಕ್ಕದಲ್ಲೇ ಸಣ್ಣ ಗೂಡಂಗಡಿ ನಡೆಸುತ್ತಿದ್ದಾರೆ. ದುರಂತ ವೇಳೆ ಅವರು ಅಂಗಡಿಯಲ್ಲೇ ಇದ್ದರು ಎಂದು ತಿಳಿದು ಬಂದಿದೆ. ಜೇಸಿಬಿ ಮೂಲಕ ಮಣ್ಣಿನ ತೆರವು ಕಾರ್ಯಾಚರಣೆ ಆರಂಭವಾಗಿದೆ.