ಇತ್ತೀಚಿನ ಸುದ್ದಿ
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾಷಷ್ಠಿ ಮಹೋತ್ಸವ ಸಂಪನ್ನ: ಭಕ್ತ ಸಾಗರದ ನಡುವೆ ಮಹಾರಥೋತ್ಸವ
07/12/2024, 12:35

ಕುಕ್ಕೆ ಸುಬ್ರಹ್ಮಣ್ಯ(reporterkarnataka.com): ದೇಶದ ಪವಿತ್ರ ಯಾತ್ರಾ ಸ್ಥಳಗಳಲ್ಲೊಂದಾದ
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಇಂದು ಚಂಪಾಷಷ್ಠಿ ಮಹೋತ್ಸವ ಸಂಪನ್ನಗೊಂಡಿತು.
ದೇಗುಲದಲ್ಲಿ ಇಂದು ಮುಂಜಾನೆ 6:57ರ ವೃಶ್ಚಿಕ ಲಗ್ನ ಮುಹೂರ್ತದಲ್ಲಿ ಬ್ರಹ್ಮ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಸುಬ್ರಹ್ಮಣ್ಯ ದೇವರು ಬ್ರಹ್ಮರಥಾರೋಹಣರಾಗಿ, ಮಹಾರಥೋತ್ಸವ ಭಕ್ತಿ- ಶ್ರದ್ದೆಯಿಂದ ಜರುಗಿತು. ದೇಗುಲದ ಚಿಕ್ಕ ರಥದಲ್ಲಿ ಉಮಾಮಹೇಶ್ವರ ದೇವರು ಆಸೀನರಾಗಿ ಚಿಕ್ಕ ರಥೋತ್ಸವವೂ ಸಂಭ್ರಮ- ಸಡಗರದಲ್ಲಿ ನಡೆಯಿತು.
ಆರಂಭದಲ್ಲಿ ಸುವರ್ಣ ವೃಷ್ಠಿ ಮಾಡಲಾಯಿತು. ಚಿಕ್ಕ ರಥೋತ್ಸವ ನೆರವೇರಿದ ಬಳಿಕ ಚಂಪಾಷಷ್ಠಿ ಮಹಾರಥೋತ್ಸವ ಜರುಗಿತು. ನಂತರ ಷಷ್ಠಿ ಕಟ್ಟೆ ಮತ್ತು ಒಳಾಂಗಣದ ಕಟ್ಟೆಯಲ್ಲಿ ಸುಬ್ರಹ್ಮಣ್ಯ ದೇವರು ಮತ್ತು ಉಮಾಮಹೇಶ್ವರ ದೇವರಿಗೆ ಪೂಜೆ ನಡೆಯಿತು. ಈ ದೃಶ್ಯವನ್ನು ಸಹಸ್ರ ಸಹಸ್ರ ಕಣ್ಣುಗಳು ತುಂಬಿಕೊಂಡವು.