ಇತ್ತೀಚಿನ ಸುದ್ದಿ
ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದಲ್ಲಿ ಯೋಗ ಕಾರ್ಯಕ್ರಮ
07/03/2022, 12:36
ಕುಕ್ಕೆ ಸುಬ್ರಹ್ಮಣ್ಯ(reporterkarnataka.com): ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ ಸುಬ್ರಹ್ಮಣ್ಯ, ಐಕ್ಯೂಎಸಿ ಘಟಕ ಹಾಗೂ ಮಹಿಳಾ ಸಬಲೀಕರಣ ವೇದಿಕೆಯ ಆಶ್ರಯದಲ್ಲಿ ಯೋಗ ಕಾರ್ಯಕ್ರಮ ನಡೆಯಿತು.
ಯೋಗ ಕಾರ್ಯಕ್ರಮವನ್ನು ಯೋಗ ವಿಜ್ಞಾನ ದ ವಿದ್ಯಾರ್ಥಿನಿ ಸಂಗೀತ ನಾಯಕ್ ಅವರು ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಮಹಿಳಾ ಸಬಲೀಕರಣ ವೇದಿಕೆ ಯ ಸಂಯೋಜಕರಾದ ಲತಾ ಬಿ.ಟಿ., ಪುಷ್ಪಾ ಡಿ, ಸುಮಿತ್ರಾ ಕುಮಾರಿ ಮತ್ತು ಸ್ವಾತಿ ಕೆ. ಹಾಗೂ ವಿದ್ಯಾರ್ಥಿ ಪ್ರತಿನಿಧಿ ಸಿಂಧು ಶ್ರೀ ತೃತೀಯ ವಾಣಿಜ್ಯ ಅವರು ಉಪಸ್ಥಿತರಿದ್ದರು. ಉಪನ್ಯಾಸಕಿ ಪ್ರಮೀಳಾ ಸಹಕರಿಸಿದರು. ವಿದ್ಯಾರ್ಥಿ ಗಳಾದ ಶ್ರಾವ್ಯ ಸ್ವಾಗತಿಸಿದರು. ಸಿಂಚನ ವಂದಿಸಿದರು.