ಇತ್ತೀಚಿನ ಸುದ್ದಿ
ಕುಕ್ಕೇಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ: ನೋಟು ಮತ್ತು ನಾಣ್ಯಗಳ ಬೃಹತ್ ಪ್ರದರ್ಶನ
15/03/2022, 12:16
ಸುಬ್ರಹ್ಮಣ್ಯ(reporterkarnataka.com): ಕುಕ್ಕೇಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ ದಲ್ಲಿ ಆಂತರಿಕ ಗುಣಮಟ್ಟ ಕೋಶ, ಇತಿಹಾಸ ವಿಭಾಗ, ರಕ್ಷಕ ಶಿಕ್ಷಕ ಸಂಘ, ಪ್ರಾಕ್ತನ ವಿದ್ಯಾರ್ಥಿ ಪರಿಷತ್ ಸಹಯೋಗದಲ್ಲಿ ನೋಟು ಮತ್ತು ನಾಣ್ಯಗಳ ಬೃಹತ್ ಪ್ರದರ್ಶನ ನೆರವೇರಿತು.
ಹರ್ಷಿತ್ ಎಚ್. (ಅಧ್ಯಕ್ಷರು, ಪ್ರಾಕ್ತ ನ ವಿದ್ಯಾರ್ಥಿ ಪರಿಷತ್) ಅವರು ಕಾರ್ಯಕ್ರಮ ಉದ್ಘಾಟಿಸಿದರು. ಅಜಯ್ ನಾರಾಯಣ ರಾವ್ (ನಾಣ್ಯ ಸಂಗ್ರಹಕಾರರು) ಪ್ರಾಸ್ತಾವಿಕ ಮಾತುಗಳನ್ನು ನುಡಿದರು. ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಗೋವಿಂದ ಎನ್.ಎಸ್ ಅಧ್ಯಕ್ಷತೆ ವಹಿಸಿದ್ದರು. ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ. ಪ್ರಸಾದ ಎನ್. ಸ್ವಾಗತಿಸಿದರು, ಉಪನ್ಯಾಸಕಿ ನಮಿತಾ ಎಂ. ಎ ಧನ್ಯವಾದ ಸಮರ್ಪಿಸಿದರು. ಸಂತೋಷ್ ದ್ವಿತೀಯ ಕಲಾ ವಿಭಾಗ, ರಕ್ಷಿತ ತೃತೀಯ ಕಲಾ ವಿಭಾಗ ಕಾರ್ಯಕ್ರಮ ನಿರೂಪಿಸಿದರು. ಪ್ರಾಕ್ತನ ವಿದ್ಯಾರ್ಥಿ ಪರಿಷತ್ತಿನ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.