ಇತ್ತೀಚಿನ ಸುದ್ದಿ
ಕುಕ್ಕೆ ಮಹಾವಿದ್ಯಾಲಯ ಸಮಾಜ ಶಾಸ್ತ್ರ ವಿಭಾಗದ ವತಿಯಿಂದ ಜೀವನ ದಾರಿ ಆಶ್ರಮಕ್ಕೆ ಶೈಕ್ಷಣಿಕ ಭೇಟಿ
25/03/2022, 22:55
ಸುಬ್ರಹ್ಮಣ್ಯ(reporterkarnataka.com): ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾ ವಿದ್ಯಾಲಯ ಸಮಾಜ ಶಾಸ್ತ್ರ ವಿಭಾಗದ ವತಿಯಿಂದ ವಿಕಾಸ ಜನ ಸೇವಾ ಟ್ರಸ್ಟ್ ಕೊಡಗಿನ ಕುಶಾಲನಗರ ತಾಲೂಕು ಜೀವನ ದಾರಿ ಆಶ್ರಮಕ್ಕೆ ಶೈಕ್ಷಣಿಕ ಭೇಟಿಯನ್ನು ಹಮ್ಮಿಕೊಳ್ಳಲಾಯಿತು.
ಈ ಟ್ರಸ್ಟ್ ನ ಅಧ್ಯಕ್ಷ ರಮೇಶ್ ಎಚ್. ಕೆ. ಆಶ್ರಮದ ಕಾರ್ಯ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು. ಪ್ರಥಮ ದ್ವಿತೀಯ ಹಾಗೂ ತೃತೀಯ ಸಮಾಜ ಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ಈ ಅಧ್ಯಯನ ಭೇಟಿಯ ಪ್ರಯೋಜನವನ್ನು ಪಡೆದುಕೊಂಡು ಆಶ್ರಮವಾಸಿಗಳಿಗೆ ಹಣಕಾಸು ಹಣ್ಣು-ಹಂಪಲು ತರಕಾರಿ ಇತ್ಯಾದಿಗಳನ್ನು ನೀಡಿ ಸಹಕರಿಸಿದರು.
ವಿದ್ಯಾರ್ಥಿಗಳು ಪ್ರಜ್ಞಾ ಅವರ ನಾಯಕತ್ವದಲ್ಲಿ ಹಲವಾರು ಆಟೋಟ ಸ್ಪರ್ಧೆಗಳನ್ನು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಶ್ರಮವಾಸಿಗಳಿಗೆ ಏರ್ಪಡಿಸಿದರು. ಸಮಾಜ ಶಾಸ್ತ್ರ ವಿಭಾಗದ ಮುಖ್ಯಸ್ಥ ಮನೋಹರ ಹಾಗೂ ಉಪನ್ಯಾಸಕಿ ಆರತಿ.ಕೆ ಮಾರ್ಗದರ್ಶನವನ್ನು ನೀಡಿದರು.