ಇತ್ತೀಚಿನ ಸುದ್ದಿ
ಕುದುರೆಮುಖ ಘಟ್ಟ ಪ್ರದೇಶದಲ್ಲಿ ಅವ್ಯಾಹತ ಮಳೆ: ಭದ್ರಾ ನದಿಯಲ್ಲಿ ಒಳ ಹರಿವು ಹೆಚ್ಚಳ: ಪ್ರವಾಹದ ಭೀತಿ
05/07/2023, 18:32

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಕುದುರೆಮುಖದ ಘಟ್ಟ ಪ್ರದೇಶದಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ ಭದ್ರಾ ನದಿಯ ಒಳ ಹರಿವಿನಲ್ಲಿ ಹೆಚ್ಚಳವಾಗಿದ್ದು, ಪ್ರವಾಹದ ಭೀತಿ ಉಂಟಾಗಿದೆ.
ಎರಡು ದಿನಗಳಿಂದ ಕುದುರೆಮುಖ ಭಾಗದಲ್ಲಿ ಅವ್ಯಾಹತವಾಗಿ ಮಳೆ ಸುರಿಯುತ್ತಿದೆ. ಹೆಬ್ಬಾಳೆ ಸೇತುವೆ ಸಮೀಪ ಭದ್ರಾನದಿ ಹರಿವು ಹೆಚ್ಚಳ ಉಂಟಾಗಿದೆ.
ನಿರಂತರ ಮಳೆಯಾದರೆ ಆಪಾಯದ ಮಟ್ಟದಲ್ಲಿ ಭದ್ರಾ ನದಿ ಹರಿಯಲಿದೆ. ಮಲೆನಾಡಿನಾದ್ಯಂತ ಮಳೆ ಚುರುಕುಗೊಂಡಿದೆ. ಕಳಸ ತಾಲೂಕಿನ ಹಲವೆಡೆ ಬೆಳಗ್ಗೆಯಿಂದ ಭಾರೀ ಮಳೆಯಾಗುತ್ತಿದೆ.