ಇತ್ತೀಚಿನ ಸುದ್ದಿ
ಕುದ್ರೋಳಿ ದಸರಾ: ಇಂದು ಸಂಜೆ 4 ಗಂಟೆಗೆ ಪೂರ್ವಭಾವಿ ಸಭೆ: ಕ್ಷೇತ್ರದ ಹರಿಕಾರ ಜನಾರ್ಧನ ಪೂಜಾರಿ ಉಪಸ್ಥಿತಿ
18/09/2022, 12:09

ಮಂಗಳೂರು(reporterkarnataka.com):ಕುದ್ರೋಳಿ ಶ್ರೀ ಗೋಕರ್ಣ ನಾಥ ಕ್ಷೇತ್ರದ ದಸರಾ ಮಹೋತ್ಸವದ ಅಂಗವಾಗಿ ಪೂರ್ವಭಾವಿ ಸಭೆ ಸೆ.18ರಂದು ಸಂಜೆ 4 ಗಂಟೆಗೆ ಕುದ್ರೋಳಿ ದೇಗುಲದ ಜಯ.ಸಿ ಸುವರ್ಣ ಸಭಾಂಗಣದಲ್ಲಿ
ನಡೆಯಲಿದೆ.
ಕ್ಷೇತ್ರದ ವತಿಯಿಂದ ಸೆ.26 ಅ 5ರ ವರೆಗೆ ದಸರಾ ಉತ್ಸವ ವ್ಯವಸ್ಥಿತವಾಗಿ ನಡೆಯಲು ತೀರ್ಮಾನಿಸಲಾಗಿದ್ದು, ಪೂರ್ವಭಾವಿ ಸಭೆ ಕ್ಷೇತ್ರದ ಅಭಿವೃದ್ಧಿಯ ಹರಿಕಾರ ಕೇಂದ್ರ ಮಾಜಿ ಸಚಿವ ಬಿ. ಜನಾರ್ಧನ ಪೂಜಾರಿ ಅವರ ನೇತೃತ್ವದಲ್ಲಿ ಜರುಗಲಿದೆ.
ಸೆ.18 ರಂದು ಸಂಜೆ 4 ಗಂಟೆಗೆ ಕುದ್ರೋಳಿ ಜಯ.ಸಿ ಸುವರ್ಣ ಸಭೆ ಸಭಾಂಗಣದಲ್ಲಿ ಭಕ್ತರ ಸಭೆ ನಡೆಯಲಿದೆ.ಎಲ್ಲಾ ಸಂಘ- ಸಂಸ್ಥೆಗಳ ಪದಾಧಿಕಾರಿಗಳು, ಭಕ್ತರು ಭಾಗವಹಿಸಬೇಕು ಎಂದು ಆಡಳಿತ ಸಮಿತಿ ತಿಳಿಸಿದೆ.