ಇತ್ತೀಚಿನ ಸುದ್ದಿ
ಕೂಡ್ಲಿಗಿ ಸಾರ್ವಜನಿಕ ಆಸ್ಪತ್ರೆಗೆ ಆರೋಗ್ಯ ಇಲಾಖೆಯ ಜಂಟಿ ನಿರ್ದೇಶಕ ಭೇಟಿ: ಕಡತಗಳ ಪರಿಶೀಲನೆ
26/01/2024, 20:42
ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ
info.reporterkarnataka@gmail.com
ವಿಜಯನಗರ ಜಿಲ್ಲೆ ಕೂಡ್ಲಿಗಿ ಆರೋಗ್ಯ ಇಲಾಖಾ ಜಂಟಿ ನಿರ್ಧೇಶಕರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.
ಜಂಟಿ ನಿರ್ದೇಶಕರಾದ ಡಾ. ಶಂಕ್ರಪ್ಪ ಅವರು, ತಾಲೂಕು ವೈದ್ಯಾಧಿಕಾರಿಗಳ ಸಮ್ಮುಖದಲ್ಲಿ, ಆಸ್ಪತ್ರೆಯನ್ನು ಕೂಲಂಕುಷವಾಗಿ ಪರಿಶೀಲನೆ ನಡೆಸಿದರು. ಕಡತ ಹಾಗೂ ದಾಖಲುಗಳನ್ನು ಪರಿವೀಕ್ಷಿಸಿದರು. ಅವರು ಹೆರಿಗೆ ಕೊಠಡಿಗೆ ಸಂಬಂಧಪಟ್ಟಂತೆ ಹಾಗೂ ಮಕ್ಕಳ ಕೊಠಡಿಗೆ ಸಂಬಂಧಪಟ್ಟಂತೆ ಮತ್ತು ಹೊರ ರೋಗಿಗಳ ಕೊಠಡಿಗಳನ್ನು ಹಾಗೂ ಸಲಕರಣೆಗಳ ಸ್ಥಿತಿ ಗತಿಯನ್ನು ವೀಕ್ಷಿಸಿದರು. ತಾಲೂಕು ವೈದ್ಯಾಧಿಕಾರಿ ಡಾ.ಪ್ರದೀಪ್ ಕುಮಾರ್, ಆಸ್ಪತ್ರೆ ಆಡಳಿತಾಧಿಕಾರಿ ಡಾ. ಮಧು, ಸ್ತ್ರೀರೋಗ ತಜ್ಞರಾದ ಜೆ.ಸಿ.ನಾಗರಾಜ್, ಮಕ್ಕಳ ತಜ್ಞರಾದ ಡಾ. ನಿರಂಜನ ಸೇರಿದಂತೆ ಆಸ್ಪತ್ರೆಯ ಇತರೆ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು. ಸಮಾಜ ಸೇವಕರಾದ ಕೆ.ಕೆ.ಹಟ್ಟಿ ರಾಜು,ಸುರೇಂದ್ರ, ಕಾಶಿನಾಥ ಮತ್ತಿತರರು ಉಪಸ್ಥಿತರಿದ್ದರು.