ಇತ್ತೀಚಿನ ಸುದ್ದಿ
ಕೂಡ್ಲಿಗಿಯಲ್ಲಿ ಗ್ಯಾಸ್ ಏಜೆನ್ಸಿಗಳಿಂದ ಹಗಲು ದರೋಡೆ: ಅಡುಗೆ ಅನಿಲ ಸಿಲಿಂಡರ್ ಗೆ 100 ರೂ. ಹೆಚ್ಚು ಹಣ ವಸೂಲಿ; ತಹಶೀಲ್ದಾರರಿಗೆ ದೂರು
18/01/2024, 10:29

ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ
info.reporterkarnataka@gmail.com
ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣ ಸೇರಿದಂತೆ ತಾಲೂಕಿನೆಲ್ಲೆಡೆಗಳಲ್ಲಿ, ಅಡಿಗೆ ಅನಿಲ ಸಿಲಿಂಡರ್ ವಿತರಕರು ಹಾಗೂ ಏಜೆಂಟರು ಅಡುಗೆ ಅನಿಲ ಸಿಲಿಂಡರ್ ಗ್ರಾಹಕರಿಂದ ವಿತರಣೆ ಸಂದರ್ಭದಲ್ಲಿ, ಸರ್ಕಾರ ನಿಗದಿ ಪಡಿಸಿದ ದರಕ್ಕಿಂತ 100 ಅಧಿಕ ಹಣ ವಸೂಲಿ ಮಾಡಲಾಗುತ್ತಿದ್ದಾರೆಂದು. ಅಂತಹ ವಿತರಕರ ವಿರುದ್ಧ ಹಾಗೂ ಏಜೆಂನ್ಸಿಯವರ ವಿರುದ್ಧ, ಕಾನೂನು ರೀತ್ಯ ಅಗತ್ಯ ಶಿಸ್ತು ಕ್ರಮ ಜರುಗಿಸಬೇಕೆಂದು ರಾಷ್ಟ್ರೀಯ ಮಾನವ ಹಕ್ಕುಗಳು ಮತ್ತು ಸಾಮಾಜಿಕ ನ್ಯಾಯ ಆಯೋಗ ಜಿಲ್ಲಾ ಘಟಕ ದೂರಿದೆ.
ಆಯೋಗದ ಜಿಲ್ಲಾ ಘಟಕದ ಉಪಾಧ್ಯಕ್ಷ ಗುನ್ನಳ್ಳಿ ಶ್ರೀಧರವರ ನೇತೃತ್ವದಲ್ಲಿ, ಆಯೋಗದ ಪದಾಧಿಕಾರಿಗಳು ತಹಶಿಲ್ದಾರರಾದ ಎಂ. ರೇಣುಕಮ್ಮ ಅವರಿಗೆ ತಪಿತಸ್ಥರ ವಿರುದ್ಧ ಸೂಕ್ತ ಶಿಸ್ಥು ಕ್ರಮಕ್ಕಾಗಿ ಒತ್ತಾಯಿಸಿ, ತಮ್ಮ ಹಕ್ಕೊತ್ತಾಯ ಪತ್ರ ನೀಡಿದ್ದಾರೆ. ಈ ಸಂದರ್ಭದಲ್ಲಿ ಗುಡ್ಡದ ರಾಜು, ಮಂಜು, ಸುರೇಂದ್ರ, ರಾಘವೇಂದ್ರ ಸೇರಿದಂತೆ ಮತ್ತಿತರರು ಇದ್ದರು.