3:12 AM Tuesday6 - January 2026
ಬ್ರೇಕಿಂಗ್ ನ್ಯೂಸ್
ಇನ್ಫೋಸಿಸ್ ನಿಂದ 53.5 ಎಕರೆ ಭೂಮಿ ರಿಯಲ್ ಎಸ್ಟೇಟ್ ಸಂಸ್ಥೆಗೆ ಮಾರಾಟ: ತನಿಖೆಗೆ… ಕ್ವಾಂಟಮ್ ತಂತ್ರಜ್ಞಾನ ಮತ್ತು ಸೆಮಿಕಂಡಕ್ಟರ್ ಸಹಭಾಗಿತ್ವಕ್ಕೆ ಪೆನಾಂಗ್ ಉಪಮುಖ್ಯಮಂತ್ರಿ ಒಲವು ಲಾರಿ- ಬೈಕ್ ಡಿಕ್ಕಿ: ಗಾಯಾಳು ಬೈಕ್ ಸವಾರ ಗೋಣಿಕೊಪ್ಪಲು ಲೋಪಮುದ್ರ ಆಸ್ಪತ್ರೆಯಲ್ಲಿ ಸಾವು ಸುದೀರ್ಘ ಅವಧಿಗೆ ಸಿಎಂ ಎಂಬ ದಾಖಲೆ ಜನರ ಆಶೀರ್ವಾದಿಂದ ಸಾಧ್ಯವಾಗಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಕಲೆ ರಾಜ್ಯದ ಸಂಸ್ಕೃತಿಯ ಕನ್ನಡಿ; ಕಲಾವಿದರು,ಕಲಾಸಕ್ತರಿಗೆ ಚಿತ್ರಸಂತೆ ವೇದಿಕೆ ಕಲ್ಪಿಸಿದೆ: ಮುಖ್ಯಮಂತ್ರಿ Kodagu | ಸಾರ್ವಜನಿಕವಾಗಿ ಬಂದೂಕು ಪ್ರದರ್ಶನ: 3 ಮಂದಿ ಆರೋಪಿಗಳ ಬಂಧನ ಸೋಶಿಯಲ್ ಮೀಡಿಯಾ ಪವರ್: 60 ವರ್ಷದ ವೃದ್ದನನ್ನು ಕುಟುಂಬದೊಂದಿಗೆ ಮತ್ತೆ ಒಂದಾಗಿಸಿದ ರೀಲ್ಸ್! ಜಗತ್ತಿನ 3ನೇ ಅತಿ ಎತ್ತರದ ಮೌಂಟ್ ಕೆನ್ಯಾ ಪರ್ವತ ಏರಿದ ಮಂಗಳೂರು ಮೂಲದ… Bangalore | ವಿಶ್ವಗುರು ಬಸವಣ್ಣ ಜೀವವೈವಿಧ್ಯ ಉದ್ಯಾನಕ್ಕೆ ಸಂಪುಟದ ಸಮ್ಮತಿ: 153 ಎಕರೆ… ಬಳ್ಳಾರಿ ಫೈಯರಿಂಗ್ | ಕೊಲೆ ಪ್ರಕರಣ ದಾಖಲಿಸಿ ಶಾಸಕರ ಕೂಡಲೇ ಬಂಧಿಸಿ: ಆರ್.ಅಶೋಕ್…

ಇತ್ತೀಚಿನ ಸುದ್ದಿ

ಕೂಡ್ಲಿಗಿ ಪಟ್ಟಣ ಪಂಚಾಯಿತಿ: ಬ್ರೋಕರ್ ಹಾವಳಿ ತಪ್ಪಿಸಲು ಖಾತಾ ನಕಲು ವಿತರಣಾ ಅಭಿಯಾನ

09/11/2023, 10:40

ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ

info.reporterkarnataka@gmail.com

ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣ ಪಂಚಾಯ್ತಿ ಅಧಿಕಾರಿಗಳ ಹೆಸರು ದುರ್ಬಳಕೆ ಮಾಡಿ, ಹಣ ಮಾಡುವ ಮಧ್ಯವರ್ತಿಗಳ ಹಾವಳಿ ತಪ್ಪಿಸುವ ಉದ್ದೇಶದಿಂದ ವಿಜಯನಗರ ಜಿಲ್ಲೆಯ ಜಿಲ್ಲಾಧಿಕಾರಿಗಳ ಆದೇಶದಂತೆ ಕೂಡ್ಲಿಗಿ ಪಟ್ಟಣ ಪಂಚಾಯತಿ ವತಿಯಿಂದ ಇಂದು ಮುಖ್ಯಾಧಿಕಾರಿಗಳು , ಕಂದಾಯ ನಿರೀಕ್ಷಕರು ಹಾಗೂ ಸಂಬಂಧಪಟ್ಟ ವಾರ್ಡನ ಕರವಸೂಲಿಗಾರರ ನೇತೃತ್ವದಲ್ಲಿ ಮನೆ ಮನೆಗೆ ತೆರಳಿ ಖಾತಾ ನಕಲು ವಿತರಣಾ ಅಭಿಯಾನ ಪ್ರಾರಂಭಿಸಲಾಯಿತು.
ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಕೂಡ್ಲಿಗಿ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಫಿರೋಜ್ ಖಾನ್ ಮಾತನಾಡಿ, ಖಾತಾ ನಕಲು (ಫಾರ್ಮ್ -3) ಪಡೆಯಲು ಬಂದ ಸಾರ್ವಜನಿಕರು ಸಕಾಲದಲ್ಲಿ ಅರ್ಜಿ ಸಲ್ಲಿಸಿದಲ್ಲಿ ಅದರ ನಿಯಮ ಪಾಲನೆ ಮಾಡಿ ಕೊಡಲು 7 ದಿನದ ಸಮಯ ಇರುತ್ತದೆ, ತೆರಿಗೆ ಕಟ್ಟಿದ ರಸೀದಿ ಪ್ರತಿಗಳು ಸೇರಿದಂತೆ ಹಕ್ಕು ನಿರೂಪಿಸುವ ದಾಖಲಾತಿಗಳು ಸರಿ ಇದ್ದಲ್ಲಿ ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಖಾತಾ ನಕಲು ನೀಡಲಾಗುವುದು. ಸಾರ್ವಜನಿಕರು ಖಾತಾ ನಕಲು ಪಡೆಯಲು ನೇರವಾಗಿ ಬಂದು ಅಧಿಕಾರಿಗಳಲ್ಲಿ ಇದರ ಮಾಹಿತಿ ಪಡೆದುಕೊಳ್ಳುವುದು ಒಳ್ಳೆಯದು. ಯಾರೋ ಮಧ್ಯವರ್ತಿಗಳ ನಡುವೆ ಹೆಚ್ಚಿನ ಹಣ ಕೊಟ್ಟು ಅಧಿಕಾರಿಗಳ ಹೆಸರು ಸಹ ಈ ವಿಚಾರದಲ್ಲಿ ದುರ್ಬಳಕೆ ಮಾಡಿ ಹಣ ವಸೂಲಿ ಮಾಡುವುದನ್ನು ಅರಿತು ವಿಜಯನಗರ ಜಿಲ್ಲಾಧಿಕಾರಿಯವರು ಪಪಂ ಅಧಿಕಾರಿಗಳ ಸಭೆ ಕರೆದು ಅದರಲ್ಲಿ ಖಾತಾ ನಕಲು ವಿತರಣೆ ಅಭಿಯಾನ ಮಾಡಿ ಮನೆಮನೆಗೆ ತೆರಳಿ ಫಾರ್ಮ್ 3 ವಿತರಣೆ ಮಾಡುವಂತೆ ಆದೇಶಿಸಿದಂತೆ ಮಧ್ಯವರ್ತಿಗಳ ಹಾವಳಿ ತಪ್ಪಿಸಿ ನೇರವಾಗಿ ಬಡವರ ಮನೆ ಸೇರುವಲ್ಲಿ ಈ ಅಭಿಯಾನದಿಂದ ಉತ್ತಮ ಕಾರ್ಯವಾಗಿದೆ ಎಂದರು.
ಅಭಿಯಾನದಿಂದಾಗುವ ಅನುಕೂಲಗಳು : ಈ ಅಭಿಯಾನದಿಂದ ಮಧ್ಯವರ್ತಿಗಳ ಹಾವಳಿ ತಪ್ಪುತ್ತದೆ, ಹಣ ಪಾವತಿ ಮಾಡಿ ತೆರಿಗೆ ಕಟ್ಟಿದ ರಸೀದಿ ಪ್ರತಿಗಳಿದ್ದಲ್ಲಿ ಹಾಗೂ ಹಕ್ಕು ನಿರೂಪಿಸುವ ದಾಖಲಾತಿಗಳಿದ್ದಲ್ಲಿ ಬಡವರ ಮನೆಗೆ ನೇರವಾಗಿ ಖಾತಾ ನಕಲು ಪ್ರತಿ ತಲುಪುತ್ತದೆ, ಹಣ ಮಾಡುವ ಉದ್ದೇಶದಲ್ಲಿ ಮದ್ಯವರ್ತಿಗಳು ಅಧಿಕಾರಿಗಳ ಹೆಸರು ದುರ್ಬಳಕೆ ಮಾಡುವುದು ದೂರವಾಗುತ್ತದೆ, ಕಚೇರಿ ಅಲೆದಾಟ ತಪ್ಪುತ್ತದೆ ಅಲ್ಲದೆ ಇತರೆ ಅನುಕೂಲತೆಗಳು ಸಾರ್ವಜನಿಕರಿಗೆ ಈ ಅಭಿಯಾನದಿಂದ ಸಿಗಬೇಕು ಎನ್ನುವ ನಿಟ್ಟಿನಲ್ಲಿ ವಿಜಯನಗರ ಜಿಲ್ಲಾಧಿಕಾರಿಗಳು ಆದೇಶಿಸಿದಂತೆ ಈ ಅಭಿಯಾನವನ್ನು ಇಂದಿನಿಂದಲೇ ಪ್ರಾರಂಭಮಾಡಿರುವುದಾಗಿ ಮುಖ್ಯಾಧಿಕಾರಿ ಫಿರೋಜ್ ಖಾನ್ ತಿಳಿಸಿದರು.
ಈ ಸಂದರ್ಭದಲ್ಲಿ ಮುಖ್ಯಾಧಿಕಾರಿಗಳು , ಕಂದಾಯ ನಿರೀಕ್ಷಕರು ಹಾಗೂ ಸಂಬಂಧಪಟ್ಟ ವಾರ್ಡನ ಕರವಸೂಲಿಗಾರರು ಇದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು