ಇತ್ತೀಚಿನ ಸುದ್ದಿ
ಕೂಡ್ಲಿಗಿ: ನಾಗರ ಚೌತಿ ಪ್ರಯುಕ್ತ ಮನೆ ಮನೆಗಳಲ್ಲಿ, ದೇಗುಲಗಳಲ್ಲಿ ನಾಗರ ಮೂರ್ತಿಗೆ ಹಾಲೆರೆದ ಭಕ್ತರ ದಂಡು
01/08/2022, 20:30

ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ
info.reporterkarnataka@gmail.com
ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದಲ್ಲಿ ನಾಗರ ಚೌತಿ ಪ್ರಯುಕ್ತ ನಾಗರ ಮೂರ್ತಿಗೆ ಆಸ್ತಿಕರು ಹಾಲೆರೆಯೋ ಮೂಲಕ ತಮ್ಮ ಭಕ್ತಿ ಸಮರ್ಪಿಸಿದರು.
ಪಟ್ಟಣದ ಶ್ರೀಬಸವಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿರುವ ಶ್ರೀ ನಾಗದೇವತೆಯ ಮೂರ್ತಿಗೆ ಭಕ್ತರು ಹಾಲೆರದು ಭಕ್ತಿ ಮೆರೆದರು. ಹಲವರು ತಮ್ಮ ಮನೆಯ ದೇವರ ಜಗುಲಿಯಲ್ಲಿ ನಾಗರ ದೇವರ ಮೂರ್ತಿ ಪ್ರತಿಷ್ಠಾಪಿಸಿ, ನಾಗರ ಮೂರ್ತಿಗೆ ಭಕ್ತಿಯಿಂದ ಹಾಲೆರು ಹಬ್ಬ ಆಚರಿಸಿದರು. ಕೆಲವರು ನಾಗರ ಚೌತಿಯಂದು ಹಾಲೆರದು ಹಬ್ಬ ಆಚರಿಸಿದೆರೆ ಉಳಿದವರು ನಾಗ ಪಂಚಮಿಯಂದು ಹಾಲೆರೆದು ಹಬ್ಬ ಆಚರಿಸುತ್ತಾರೆ. ಕುಟುಂಬ ಸಮೇತರಾಗಿ ಬಂಧು ಬಳಗದೊಂದಿಗೆ ಸಾಮೂಹಿಕವಾಗಿ ಹಾಲೆರೆಯೋ ಸಾಂಪ್ರದಾಯ, ಅವಿಭಕ್ತ ಕುಟುಂಬದಲ್ಲಿ ಈಗಲೂ ಕಾಣಬಹುದಾಗಿದೆ. ಅವಿಭಕ್ತ ಕುಟುಂಬ ಕಾಣೆಯಾಗೋ ಸಂದರ್ಭದಲ್ಲಿ, ವಿಭಕ್ತ ಕುಟುಂಬದ ಸದಸ್ಯರು ಮನೆಯಲ್ಲಿಯೆರ ನಾಗದೇವರ ಆರಾಧನೆ ಮಾಡೋದು ಇತ್ತೀಚೆಗೆ ಸಮಾನ್ಯವಾಗಿದೆ. ನಾಗರ ಪಂಚಮಿ ಪ್ರಯುಕ್ತ ಪಟ್ಟಣ ಸೇರಿದಂತೆ ,ತಾಲೂಕಿನೆಲ್ಲೆಡೆ ನಾಗ ದೇವರಾಧನೆ ಜರುಗಿದೆ. ಮಕ್ಕಳು, ಯುವಕ ಯುವತಿಯರು, ಮಹಿಳೆಯರು, ನಾಗರ ಪಂಚಮಿಯನ್ನು ಬಹಳ ಅರ್ಥಪೂರ್ಣವಾಗಿ ಆಚರಿಸಿದರು. ಅಂತೆಯೇ ಪಟ್ಟಣದ ಶ್ರೀಬಸವ ಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಪ್ರತಿಷ್ಠಾಪಿಸಿರುವ ನಾಗ ಪ್ರತಿಮೆಗೆ, ಹಾಗೂ ತಮ್ಮ ಮನೆಯ ದೇವರ ಜಗುಲಿಯಲ್ಲಿರುವ ನಾಗ ಪ್ರತಿಮೆಗೆ. ಪುಟಾಣಿ ಅರಣಿ ತನ್ನ ತಾಯಿ ರೇಣುಕಾ ಹಾಗೂ ಸಹೋದರ ವಿನಾಯಕನೊಂದಿಗೆ ನಾಗದೆವತೆಗೆ ಶಾಸ್ತ್ರೋಕ್ತವಾಗಿ ಪೂಜೆಗೈದು ಶ್ರದ್ಧಾ ಭಕ್ತಿಯಿಂದ ಹಾಲೆರದು, ತಮ್ಮ ಭಕ್ತಿ ಸಮರ್ಪಿಸಿ ಹಬ್ಬಕ್ಕೆ ಮತ್ತಷ್ಟು ಮೆರೆಗುತಂದಿದ್ದಾಳೆ.