ಇತ್ತೀಚಿನ ಸುದ್ದಿ
ಕೂಡ್ಲಿಗಿ: ಲಕ್ಷ್ಮೀಪೂಜೆಯೊಂದಿಗೆ ದೀಪಾವಳಿ ಆಚರಣೆ; ಎಲ್ಲೆಡೆ ಭಾರಿ ಸಂಭ್ರಮಾಚರಣೆ
25/10/2022, 20:27
ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ
info.reporterkarnataka@gmail.com
ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತವ ದೀಪಾವಳಿ ಹಬ್ಬವನ್ಜು ಬಹು ಅರ್ಥಪೂರ್ಣವಾಗಿ ಆಚರಿಸಲಾಯಿತು. ನಾಗರೀಕರು ಹಾಗೂ ಆಸ್ತಿಕರು ತಮ್ಮ ಮನೆಗಳಲ್ಲಿ, ವಿಧಿವತ್ತಾಗಿ ಲಕ್ಷ್ಮೀದೇವಿಯನ್ನು ಪ್ರತಿಷ್ಠಾಪಿಸಿ ಶ್ರದ್ಧಾಭಕ್ತಿಯಿಂದ ಆರಾಧಿಸಿ ಪೂಜಿಸಿ ಹಬ್ಬ ಆಚರಿಸಿದರು. ಲಕ್ಷ್ಮೀದೇವಿಯನ್ನು ವಿಧಿವತ್ತಾಗಿ ಪೂಜೆ ಮಾಡಿ ಧಾರ್ಮಿಕ ಹಾಗೂ ಸಾಂಪ್ರದಾಯಿಕ ಪದ್ಧತಿಯಂತೆ, ನೆರೆ ಹೊರೆಯ ಸುಮಂಗಲಿಯರನ್ನು ಹಾಗೂ ಯುವತಿಯರನ್ನ ಆಹ್ವಾನಿಸಿ ಅವರಿಂದ ಲಕ್ಷ್ಮೀದೇವಿಗೆ ಆರತಿ ಬೆಳಗಿಸಿ ಅವರಿಗೆ ಉಡಿತುಂಬಿ ಹಾರೈಸುವುದು ವಾಡಿಕೆಯಿದೆ. ಹಬ್ಬದ ಪ್ರಯುಕ್ತ ಹೋಳಿಗೆ ಸೇರಿದಂತೆ ಬಗೆ ಬಗೆ ಖಾಧ್ಯಗಳನ್ನು ಲಕ್ಷ್ಮೀದೇವಿಗೆ ಅರ್ಪಿಸಿ,ನಂತರ ಎಲ್ಲರೂ ಒಟ್ಟಾಗಿ ಹಬ್ಬದೂಟ ಸವಿಯೋದು ಹಬ್ಬದ ವಿಶೇಷವಾಗಿದೆ. ದೀಪಾವಳಿ ಎಂದರೆ ಪಟಾಕಿ. ಪಟಾಕಿ ಎಂದರೆ ದೀಪಾವಳಿ ಎಂದರ್ಥ, ಅಂತೆಯೇ ಮಕ್ಕಳು ಮಹಿಳೆಯರು ದೀಪವನ್ನು ಬೆಳಗುತ್ತಾರೆ ಮತ್ತು ಪಟಾಕಿ ಸಿಡಿಸಿ ದೀಪಾವಳಿ ಆಚರಿಸಿ ಸಂಭ್ರಮಿಸುತ್ತಾರೆ. ಅಂತೆಯೇ ಕೂಡ್ಲಿಗಿ ಪಟ್ಟಣದಲ್ಲಿ ದೀಪಾವಳಿಯನ್ನು ನಾಗರೀಕರು ಬಹು ವಿಜೃಂಭಣೆಯಿಂದ ಆಚರಿಸಿದರು.
2ನೇ ವಾರ್ಡಿನವಾಸಿ ರೇಣುಕಾ ಷಣ್ಮುಖಪ್ಪರವರ ಮನೆಯಲ್ಲಿ ದೀಪಾವಳಿಯನ್ನು ಬಹು ಅರ್ಥಪೂರ್ಣವಾಗಿ, ಮಹಿಳೆಯರು ಹಾಗೂ ಮಕ್ಕಳಾದಿಯಾಗಿ ಸಕ್ರೀಯವಾಗಿ ಪಾಲ್ಗೊಂಡಿದ್ದರು. ಈ ಮೂಲಕ ಸಾಂಪ್ರದಾಯಿಕವಾಗಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ, ಲಕ್ಷ್ಮೀದೇವಿಯನ್ನ ಆರಾಧಿಸಿ ಪೂಜಿಸಿ ದೀಪಾವಳಿ ಹಬ್ಬ ಆಚರಿಸಿದರು.