ಇತ್ತೀಚಿನ ಸುದ್ದಿ
ಕೂಡ್ಲಿಗಿ: ಜ16ರಂದು ಮೊರಬ ಶ್ರೀವೀರಭದ್ರೇಶ್ವರ ರಥೋತ್ಸವ ಸಂಭ್ರಮ; 12ರಂದು ಕಂಕಣಧಾರಣೆ
04/01/2024, 22:51

ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ
info.reporterkarnataka@gmail.com
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಮೊರಬ ಶ್ರೀವೀರಭದ್ರೇಶ್ವರ ರಥೋತ್ಸವ ಜ16ರಂದು ಜರುಗಲಿದೆ.
ಜ. 12ರಿಂದ16ರವರೆಗೆ ರಥೋತ್ಸವದ ಧಾರ್ಮಿಕ ನಿಯಮಾನುಸಾರ, ಕಾರ್ಯಕ್ರಮಗಳು ಜರುಗಲಿವೆ. ಜ.12 ರಂದು ಕಂಕಣಧಾರಣೆ, ಜ.13ರಂದು ತುರುಗ ವಾಹನೋತ್ಸವ, ಜ.14ರಂದು ಗಜವಾಹನೋತ್ಸವ, ಜ. 15ರಂದು ಹಲಗೆ ಮತ್ತು ಬಸವನ ಉತ್ಸವ ಜ.16ರಂದು ಮಹಾ ರಥೋತ್ಸವ ಜರುಗಲಿದ್ದು, ನಂತರದ ಮೂರು ದಿನಗಳು ಜಾತ್ರೆ ಉತ್ಸವ ಜರುಗಲಿದೆ. ಪ್ರಯುಕ್ತ ಜ1ರಂದು ರಥದ ಗಡ್ಡೆಯನ್ನು ಧಾರ್ಮಿಕ ವಿದಿವಿಧಾನದಂತೆ, ದೇವಸ್ಥನದ ಸೇವಾ ಸಮಿತಿ ಹಾಗೂ ಸಮಸ್ತ ದೈವಸ್ಥರ ಸಮಕ್ಷಮ ರಥದ ಗಡ್ಡೆಯನ್ನು ಹೊರ ತೆಗೆದು ಪೂಜಿಸಲಾಯಿತು.