6:37 PM Monday1 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ಕೂಡ್ಲಿಗಿ: ಡಾ. ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯಲ್ಲಿ ಅಂಬೇಡ್ಕರ್ ಚಿಂತನೆ ಕಾರ್ಯಕ್ರಮ

29/12/2023, 17:29

ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ

info.reporterkarnataka@gmail.com

ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯಲ್ಲಿ ಶುಕ್ರವಾರ ಡಾ. ಬಿ.ಆರ್.ಅಂಬೇಡ್ಕರ್ ರವರ ಚಿಂತನೆ 2023ರ ಕಾರ್ಯಕ್ರಮ ಜರಗಿತು.
ಡಾ. ಬಿ.ಆರ್.ಅಂಬೇಡ್ಕರ್ ಸಂಘದ ತಾಲೂಕು ಅಧ್ಯಕ್ಷ ಗುಣಸಾಗರ ಎಚ್.ಕೃಷ್ಣಪ್ಪ ಮಾತನಾಡಿ, ಡಾ. ಬಿ. ಆರ್. ಅಂಬೇಡ್ಕರ್ ಅವರ ಚಿಂತನೆ ಆಲೋಚನೆಗಳು ಸಾಮಾಜಿಕ ಕಾಳಜಿಯುಳ್ಳವಾಗಿದ್ದವು. ಅವರು ಸಂವಿಧಾನ ಬರೆಯುವಾಗ, ಸುಮಾರು 300 ಹೆಚ್ಚು ಜನ ರಾಷ್ಟ್ರಕಂಡ ಮೇಧಾವಿಗಳ ಸಲಹೆಯನ್ನು ಪಡೆಯುತ್ತಾರೆ. ಅವರ ಸಲಹೆ ಸೂಚನೆಗಳನ್ನು ಪರಾಮರ್ಶಿಸಿ, ಸಂವಿಧಾನವನ್ನು ಯೋಚಿಸಿ ಚಿಂತನೆ ಮಾಡಿ ನಿರ್ಣಯಿಸಿ ಸಂವಿಧಾನ ರಚನೆ ಮಾಡುತ್ತಾರೆ. ಡಾ. ಬಿ.ಆರ್.ಅಂಬೇಡ್ಕರ್ ರವರು ಶಿಕ್ಷಣಕ್ಕೆ ಹೆಚ್ಚಿನ ಹೊತ್ತನ್ನು ನೀಡುತ್ತಾರೆ. ಅದರಲ್ಲಿ ಹೆಣ್ಣು ಮಕ್ಕಳಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಬ್ರಿಟಿಷರ ಕಾಲದಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣಕ್ಕೆ ಅಷ್ಟು ಪ್ರಾಧಾನ್ಯತೆ ನೀಡುತ್ತಿರಲಿಲ್ಲ, ಅಂಬೇಡ್ಕರ್ ರವರು ಹೆಣ್ಣು ಮಕ್ಕಳಿಗೆ ಶಿಕ್ಷಣಕ್ಕೆ ಹೆಚ್ಚು ಪ್ರಾಧಾನ್ಯತೆ ಕೊಡಬೇಕೆಂದು ಶಿಕ್ಷಣಕ್ಕೆ ಆದ್ಯತೆ ನೀಡಿದರು. ವಿದ್ಯಾರ್ಥಿಗಳು ಪಾಠ್ಯಕ್ರಮವನ್ನು ಆಲಿಸುವುದು ಮಾತ್ರವಲ್ಲ, ಎಲ್ಲಿ ಏಕೆ ಏನು ಎಂಬ ಪ್ರಶ್ನೆ ಮೂಡಬೇಕು. ಅಂದರೆ ಮಕ್ಕಳಲ್ಲಿ ಪ್ರೆಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಯಾವುದೇ ವಿಷಯದ ಬಗ್ಗೆ ಕುರಿತು ಕುತೂಹಲ ಮುಖ್ಯ, ವಿಷಯಕ್ಕೆ ಸಂಬಂಧಿಸಿದಂತೆ ವೈಚಾರಿಕತೆ ಜ್ಞಾನದ ಹಸಿವು ಹೊಂದಿರಬೇಕಿದೆ. ಯಾವುದನ್ನೇ ಆಗಲಿ ಪ್ರಶ್ನಿಸದೇ ಒಪ್ಪಬಾರದು, ವಿಷಯದ ಕುರಿತು ಪರಿಪೂರ್ಣ ಮಾಹಿತಿ ಹೊಂದುವ ಕಾತುರತೆ ವಿದ್ಯಾರ್ಥಿಗಳು ಬೆಳಸಿಕೊಳ್ಳಬೇಕಿದೆ. ವಿದ್ಯಾಭ್ಯಾಸ ಮಾಡುವಾಗ ಚಿಂತನೆ ಮುಖಾಂತರ ಮಕ್ಕಳು ಪ್ರಶ್ನೆ ಆಲೋಚನೆ ಮಾಡುತ್ತಾ ವಿದ್ಯಾಭ್ಯಾಸ ಮಾಡಿದರೆ, ಮುಂದೆ ಒಂದು ದೊಡ್ಡ ಹುದ್ದೆಯನ್ನು ಪಡೆಯಬಹುದು ಅನ್ನೋದು ಡಾ. ಬಿ.ಆರ್.ಆಂಬೇಡ್ಕರ್ ರವರ ವಿಚಾರಧಾರೆಯಾಗಿತ್ತುವ ಎಂದರು.
ವಸತಿ ಶಾಲೆಯ ಪ್ರಾಧ್ಯಾಪಕ ಜಯಪ್ರಕಾಶ್ ಮಾತನಾಡಿ, ಡಾ. ಬಿ.ಆರ್.ಅಂಬೇಡ್ಕರ್ ರವರ ತತ್ವ ಆದರ್ಶಗಳು, ಬುದ್ಧ ಬಸವ ಗಾಂಧೀಯವರ ತತ್ವಾಧಾರಿತಗಳಾಗಿವೆ. ಅವರು ಸಮಾಜದಲ್ಲಿ ಸಮಾನತೆ ಮೂಡಿಸುವ ಹರಿಕಾರರಾಗಿದ್ದರು ಎಂದರು. ವಸತಿ ಶಾಲೆಯ ಪ್ರಾಂಶುಪಾಲರಾದ ಶೋಭಾ ರವರು ಮಾತನಾಡಿ, ಮಕ್ಕಳು ನಿಷ್ಠೆಯಿಂದ ವಿದ್ಯಾಭ್ಯಾಸ ಮಾಡಿ ಉತ್ತಮ ಸಾಧನೆ ಮಾಡಬೇಕಿದೆ, ಈ ಮೂಲಕ ವಸತಿ ಶಾಲೆಗೆ ಕೀರ್ತಿ ತರಬೇಕಿದೆ. ಜೊತೆಗೆ ಸನ್ನಡತೆ ಹೊಂದಿ ಉತ್ತಮ ಸಾಸದನೆ ಮಾಡಿ ಹಾಗೂ ಉತ್ತಮ ಹುದ್ದೆಯನ್ನು ಹೊಂದಿ, ನಾಡಿಗೆ ಮತ್ತು ಸಮಾಜಕ್ಕೆ ಉತ್ತಮ ಪ್ರಜೆಯಾಗಬೇಕಿದೆ. ಈ ಮೂಲಕ ವಸತಿ ಶಾಲೆಯ ಹೆಸರನ್ನು ಹೆತ್ತವರ ಹೆಸರನ್ನು ಉನ್ನತ ಸ್ಥಾನಕ್ಕೆ ಕೊಂಡ್ಯೋಯ್ಯಬೇಕಿದೆ. ಊರಿಗೆ ತಮ್ಮ ತಂದೆ ತಾಯಿಗಳಿಗೆ ಒಳ್ಳೆಯ ಮಕ್ಕಳಾಗಿದ್ದುಕೊಂಡು, ವಿದ್ಯಾರ್ಥಿಗಳು ತಮ್ಮ ಸಾಧನೆಯನ್ನು ಮಾಡಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಮುಖ್ಯ ಅತಿಥಿಗಳಾಗಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಜಗದೀಶ ದಿಂಡೂರು, ದಲಿಯ ಯುವ ಮುಖಂಡ ಸುರೇಶ್, ಪತ್ರಕರ್ತರು ಹಾಗೂ ಕಸಾಪ ಅಧ್ಯಕ್ಷರಾದ ಅಂಗಡಿ ವೀರೇಶ್, ಪತ್ರಕರ್ತ ಹಾಗೂ ವಂದೇ ಮಾತರಂ ಜಾಗೃತಿ ವೇದಿಕೆ ಕಾರ್ಯದರ್ಶಿ ಜೂಗುಲರ ಸೊಲ್ಲೇಶ, ಡಾ. ಬಿ.ಆರ್.ಅಂಬೇಡ್ಕರ್ ಸಂಘದ ಉಪಾಧ್ಯಕ್ಷರಾದ ಬಂಡೆ ರಾಘವೇಂದ್ರ, ದಲಿತ ಯುವ ಮುಖಂಡ ಎಸ್.ಸುರೇಶ್ ಭಾಗವಹಿಸಿದ್ದರು. ಸಿ.ಎಂ.ಶಾಲಿನಿ ನಿರೂಪಿಸಿದರು, ವೀರೇಶ್ ಸ್ವಾಗತಿಸಿದರು. ಸುಂದರ್ ಗೌಡ ವಂದಿಸಿದರು. ಕಾರ್ಯಕ್ರಮದ ವೇದಿಕೆಯಲ್ಲಿದ್ದ ಗಣ್ಯಮಾನ್ಯರನ್ನು, ವಸತಿ ಶಾಲೆಯ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.

ಇತ್ತೀಚಿನ ಸುದ್ದಿ

ಜಾಹೀರಾತು