11:51 PM Monday22 - September 2025
ಬ್ರೇಕಿಂಗ್ ನ್ಯೂಸ್
ಮುಂದಿನ ಒಲಂಪಿಕ್ಸ್ ಪದಕ ವಿಜೇತರಿಗೆ ಸರ್ಕಾರದಿಂದ 6 ಕೋಟಿ ನಗದು ಬಹುಮಾನ: ಮುಖ್ಯಮಂತ್ರಿ… ಜಿಎಸ್ ಟಿ ಜಾರಿ ಮಾಡಿದ್ದೂ ಮೋದಿ, ಜಿಎಸ್ ಟಿ ಹೆಚ್ಚೆಚ್ಚು ವಿಧಿಸಿದ್ದೂ ಮೋದಿಯವರೇ,… ಅಂತಾರಾಷ್ಟ್ರೀಯ ಬಾಲ್ಯ ಕ್ಯಾನ್ಸರ್ ಜಾಗೃತಿ: ಬೆಂಗಳೂರು ಇಸ್ಕಾನ್ ದೇವಾಲಯಕ್ಕೆ ಚಿನ್ನದ ಬಣ್ಣದ ಬೆಳಕು ನವೆಂಬರ್ ನಿಂದ ಮಾಹಿತಿ ಹಕ್ಕು ಅದಾಲತ್: ಮಾಹಿತಿ ಹಕ್ಕು ಅರ್ಜಿಗಳನ್ನು ಶೂನ್ಯಕ್ಕಿಳಿಸಲು ಗುರಿ ಪಿಡಿಒ ಜೇಷ್ಠಾತಾ ಪಟ್ಟಿ ನ್ಯಾಯಸಮ್ಮತವಾಗಿ ಅಂತಿಮಗೊಳಿಸಲು ಸೂಕ್ತ ಕ್ರಮ: ಸಚಿವ ಪ್ರಿಯಾಂಕ್‌ ಖರ್ಗೆ ಮಂಗಳೂರಿನಲ್ಲಿ ಧರ್ಮದ ಹೆಸರಲ್ಲಿ ಜೈಲಿಗೆ ಹೋದವರು, ಕೊಲೆ ಆದವರೆಲ್ಲಾ ಹಿಂದುಳಿದವರೇ ಆಗಿದ್ದಾರೆ: ಸಿಎಂ… ವಿರಾಜಪೇಟೆ ಆರೆಂಜ್ ಸ್ಪಾ -ಬ್ಯೂಟಿ ಪಾರ್ಲರ್ ದಾಳಿ ಪ್ರಕರಣ: ನಾಲ್ವರು ಪ್ರಮುಖ ಆರೋಪಿಗಳ… Kodagu | ಕುಶಾಲನಗರ: ಕಾವೇರಿ ನದಿಯಲ್ಲಿ ಮುಳುಗಿ ಕಾಡಾನೆ ದಾರುಣ ಸಾವು ಮಡಿಕೇರಿ ನಗರಸಭೆಯ ಮೇಲೆ ಲೋಕಾಯುಕ್ತ ದಿಢೀರ್ ದಾಳಿ: ಸಾರ್ವಜನಿಕರ ದೂರಿಗೆ ಸ್ಪಂದನೆ ಮೈಸೂರು ದಸರಾ ಉದ್ಘಾಟನೆಗೆ ಬಾನು ಮುಸ್ತಾಕ್: ತಡೆ ಕೋರಿ ಸಲ್ಲಿಸಿದ ಅರ್ಜಿ ಸುಪ್ರೀಂಕೋರ್ಟ್…

ಇತ್ತೀಚಿನ ಸುದ್ದಿ

ಕೂಡ್ಲಿಗಿ: ಅಡುಗೆ ಅನಿಲ ಸಿಲಿಂಡರ್ ಅಕ್ರಮ ದಾಸ್ತಾನು ಮಾರಾಟ ಅಡ್ಧೆ ಮೇಲೆ ದಾಳಿ; ತುಂಬಿದ 140 ಸಿಲಿಂಡರ್ ವಶಕ್ಕೆ?

23/01/2024, 20:08

ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ

info.reporterkarnataka@gmail.com

ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದ ಹೊರ ವಲಯದಲ್ಲಿ, ಅಕ್ರಮವಾಗಿ ಅನಿಲ ಸಿಲಿಂಡರ್ ದಾಸ್ತಾನು ಮಾಡುತ್ತಿದ್ದ ವೇಳೆ ಅನಿಲ ತುಂಬಿದ ಸಿಲಿಂಡರ್ ಗಳಿದ್ದ ವಾಹನ ಸಮೇತ, ಸಿಕ್ಕಿ ಹಾಕಿ ಕೊಂಡಿರುವ ಘಟನೆ ನಡೆದಿದೆ.


ಹೋರಾಟಗಾರರು ಅಗತ್ಯ ವೀಡಿಯೋಗಳು ಹಾಗೂ ಸಾಕ್ಷ್ಯಾಧಾರಗಳ ಸಮೇತ ಮಾಹಿತಿ ನೀಡಿದ್ದಾರೆ. ಕೂಡ್ಲಿಗಿ ತಾಲೂಕಿನ ಬಣವೀಕಲ್ಲು ಗ್ರಾಮದಲ್ಲಿರುವ “ಚಿತ್ತಪ್ಪ ಎಚ್.ಪಿ. ಗ್ಯಾಸ್ ಏಜೆನ್ಸಿ” ಗ್ರಾಮೀಣ ವಿತರಕ, ವ್ಯವಸ್ಥಾಪಕರು ಜಿ. ಮಂಜುಳಾ ವಿಳಾಸಕ್ಕೆ ಸಂಬಂಧಿಸಿದ 140 ಅನಿಲ ತುಂಬಿದ ಸಿಲಿಂಡರ್ ಗಳ ಸಮೇತ ಕೂಡ್ಲಿಗಿ ಪಟ್ಟಣದ ಹೊರವಲಯದಲ್ಲಿ, ಅಂಗಡಿಯೊಂದರಲ್ಲಿ ಅಕ್ರಮ ದಾಸ್ತಾನು ಮಾಡುತ್ತಿರುವ ಸಂದರ್ಭದಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಹಾಗೂ ಸಾಮಾಜಿಕ ನ್ಯಾಯ ಆಯೋಗ ಹಾಗೂ ಆಹಾರ ಇಲಾಖೆ ಜಂಟಿಯಾಗಿ ದಾಳಿ ಮಾಡಲಾಗಿದೆ. ಅನಿಲ ತುಂಬಿದ 140ಕ್ಕೂ ಹೆಚ್ಚು ಸಿಲಿಂಡರ್ ಗಳಿರುವ ವಾಹನವನ್ನು ಜಪ್ತಿ ಮಾಡಲಾಗಿತ್ತು, ದಾಳಿ ವೇಳೆ ರಾಷ್ಟ್ರೀಯ ಮಾನವ ಹಕ್ಕುಗಳ ಮತ್ತು ಸಾಮಾಜಿಕ ನ್ಯಾಯ ಆಯೋಗದ, ವಿಜಯನಗರ ಜಿಲ್ಲೆ ಉಪಾಧ್ಯಕ್ಷ ಗುನ್ನಳ್ಳಿ ಶ್ರೀಧರ ಹಾಗೂ ಕೆ.ಕೆ.ಹಟ್ಟಿ ಜಿ.ರಾಜು ರವರ ನೇತೃತ್ವದಲ್ಲಿ ಆಹಾರ ಇಲಾಖಾಧಿಕಾರಿಗಳೊಂದಿಗೆ. ಅನಿಲ ಅಕ್ರಮ ದಾಸ್ತಾನು ಮಳಿಗೆಯಲ್ಲಿ ತುಂಬಿದ ಅನಿಲ ಸಿಲಿಂಡರ್ ಗಳನ್ಹು ದಾಸ್ತಾನು ಮಾಡುವಾಗ ದಾಳಿ ನಡೆಸಿ ಸಮೇತವಾಹನ ಜಪ್ತಿ ಮಾಡಲಾಗಿದೆ.
*ಅನಿಲ ತುಂಬಿದ 120 ಸಿಲಿಂಡರ್ ಗಳು ನಾಪತ್ತೆ.!?-ಆರೋಪ*: ಅಕ್ರಮ ದಾಸ್ತಾನು ಮಳಿಗೆ ಬಳಿ ದಾಳಿ ನಡೆಸಿದ ವೆೇಳೆ ,140ಕ್ಕೂ ಹೆಚ್ಚು ಅನಿಲ ತುಂಬಿದ್ದ ಸಿಲಿಂಡರ್ ಗಳುಳ್ಳ ವಾಹನ ಸಮೆತ ಆಹಾರ ಇಲಾಖಾಧಿಕಾರಿ ತಮ್ಮ ವಶಕ್ಕೆ ಪಡಿದಿದ್ದು. ಪ್ರಕರಣ ದಾಖಲು ಮಾಡಬೇಕಾಗಿರುವ ಆಹಾರ ಇಲಾಖಾಧಿಕಾರಿಗಳು, ಸಂಜೆ ಸಮಯವಾದರೂ ಯಾವುದೇ ಕಾನೂನು ಕ್ರಮ ಜರುಗಿಸದೇ ನಿರ್ಲಕ್ಷ್ಯ ಧೋರಣೆ ತಾಳಿದ್ದಾರೆಂದು ಆಯೋಗದ ಮುಖಂಡರು ದೂರಿದ್ದಾರೆ. ಅಲ್ಲದೇ ಆಹಾರ ಇಲಾಖಾಧಿಕಾರಿಗಳು ನಮ್ಮ ಸಮಕ್ಷಮದಲ್ಲಿಯೇ, 140 ತುಂಬಿರುವ ಅನಿಲ ಸಿಲಿಂಡರ್ ಗಳುಳ್ಳ ವಾಹನವನ್ನೂ ವಶಕ್ಕೆ ಪಡೆಯಲಾಗಿತ್ತು. ಆದರೆ ಯಾವುದೇ ಕಾನೂನು ಕ್ರಮ ಜರುಗಿಸಿಲ್ಲ. ಬದಲಿಗೆ ಸಂಜೆ ಸಮಯಕ್ಕೆ ಆಹಾರ ಇಲಾಖಾಧಿಕಾರಿಗಳು, ತಮ್ಮ ಬಳಿ ಕೇವಲ 20 ಅನಿಲ ಸಿಲಿಂಡರ್ ಗಳಿರುವುದಾಗಿ ತೋರಿಸಲಾಗುತ್ತಿದ್ದಾರೆ. ಇದು ಆಹಾರ ಇಲಾಖಾಧಿಕಾರಿಗಳ ಭ್ರಷ್ಟಾಚಾರಕ್ಕೆ ಸಾಕ್ಷಿಯಾಗಿದೆ, ಅನಿಲ ಸಿಲಿಂಡರ್ ಅಕ್ರಮ ಸಾಗಾಣಿಕೆಯಲ್ಲಿ ಕೂಡ್ಲಿಗಿ ಆಹಾರ ಇಲಾಖಾಧಿಕಾರಿಗಳು ನೇರವಾಗಿ ಭಾಗಿಯಾಗಿರುವುದನ್ನು ಸಾಬೀತು ಪಡಿಸಿದೆ ಎಂದು ಆಯೋಗದ ಮುಖಂಡರು ಆರೋಪಿಸಿದ್ದಾರೆ.
*ಅನ್ಯಾಯ ಅಕ್ರಮಗಳ ವಿರುದ್ಧ ಹೋರಾಟ ನಿಲ್ಲದು*- ತಾವು ಅಕ್ರಮ ಹಾಗೂ ಅಕ್ರಗಳ ವಿರುದ್ಧ ಹೋರಾಟ ಮಾಡುತ್ತಿದ್ದು, ಇವುಗಳ ಹಿಂದೆ ಯಾರೇ ಇದ್ದರೂ ಯಾವುದೇ ಕಾರಣಕ್ಕೆ ಹೋರಾಟದಿಂದ ಹಿಂದೆ ಸರಿಯಲ್ಲ. ವಶಕ್ಕೆ ಪಡೆದಿದ್ದ ಅನಿಲ ತುಂಬಿದ್ದ 140 ಸಿಲಿಂಡರ್ ಗಳಲ್ಲಿ, 120 ಅನಿಲ ತುಂಬಿದ್ದ ಸಿಲಿಂಡರ್ ನಾಪತ್ತೆಯಾಗಿರುವಲ್ಲಿ ಆಹಾರ ಇಲಾಖಾಧಿಕಾರಿ ನೇರ ಹೊಣೆಗಾರರಾಗಿದ್ದು, ಅನಿಲ ಸಿಲಿಂಡರ್ ಗಳ ಅಕ್ರಮದಲ್ಲಿ ಆಹಾರ ಇಲಾಖಾಧಿಕಾರಿ ನೇರ ಭಾಗಿಯಾಗಿರುವುದಕ್ಕೆ ಇದೇ ಸಾಕ್ಷಿಯಾಗಿದೆ. ಕಾರಣ ವಿಜಯನಗರ ಜಿಲ್ಲಾಧಿಕಾರಿಗಳಾದ ದಿವಾಕರವರು, ಪ್ರಾಮಾಣಿಕತೆಗೆ ಧಕ್ಷತೆಗೆ ಹೆಸರಾಗಿದ್ದು. ಈಗಾಗಲೇ ಜಿಲ್ಲಾಧಿಕಾರಿಗಳಿಗೆ ವಾಟ್ಸಾಪ್ ಮೂಲಕ, ಸಾಕ್ಷ್ಯಾಧಾರ ಗಳ ಸಮೇತ ಮಾಹಿತಿ ನೀಡಿದ್ದು, ದೂರವಾಣಿ ಮೂಲಕ ಮೌಖಿಕವಾಗಿ ದೂರು ನೀಡಲಾಗಿದೆ. ಮತ್ತು ನಿಯಮಾನುಸಾರ ಅಗತ್ಯ ದಾಖಲೆಗಳ ಸಮೇತ, ಆಯೋಗದ ಲೆಟರ್ ಲ್ಯಾಡ್ ನಲ್ಲಿ ಕ್ರಮಕ್ಕಾಗಿ ಮನವಿ ಮಾಡಲಾಗುವುದು. ಅದರ ಅನುಸಾರ ಜಿಲ್ಲಾಧಿಕಾರಿಗಳು, ಅನಿಲ ಸಿಲಿಂಡರ್ ಅಕ್ರಮದಲ್ಲಿ ನೇರವಾಗಿ ಭಾಗಿಯಾಗಿರುವವರ ವಿರುದ್ಧ. ಹಾಗೂ ಆಹಾರ ಇಲಾಖಾಧಿಕಾರಿಯ ವಿರುದ್ಧ, ಕಾನೂನು ರೀತ್ಯ ಶಿಸ್ಥು ಕ್ರಮ ಜರುಗಿಸಬೇಕಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಏಜೆನ್ಸಿ ರದ್ಧು ಮಾಡಬೇಕು. ಮತ್ತು ಭಾಗಿಯಾಗಿರುವ ಏಜೆನ್ಸಿದಾರರ ವಿರುದ್ಧ, ಕಾನೂನು ರೀತ್ಯ, ಅಗತ್ಯ ಶಿಸ್ಥು ಕ್ರಮ ಜರುಗಿಸಬೇಕೆಂದು ಹೋರಾಟಗಾರರು ಜಿಲ್ಲಾಧಿಕಾರಿಗಳಲ್ಲಿ ಒತ್ತಾಯಿಸಿದ್ದಾರೆ. ಈ ನಿಟ್ಟಿನಲ್ಲಿ ತಮ್ಮ ಹೋರಾಟ ನಿಲ್ಲದು, ಜಿಲ್ಲಾಧಿಕಾರಿಗಳು ತಮ್ಮ ಹೋರಾಟಕ್ಕೆ ಸ್ಪಂಧಿಸದಿದ್ದಲ್ಲಿ ಅಥವಾ ಹೋರಾಟಕ್ಕೆ ನ್ಯಾಯ ಒದಗಿಸದಿದ್ದಲ್ಲಿ, ಅಗತ್ಯ ಸಾಕ್ಷಿಗಳ ಸಮೇತ ಕಾನೂನು ಹೋರಾಟ ಮಾಡಲಾಗುವುದು ಮತ್ತು ಸಮಾನ ಮನಸ್ಕ ಸಂಘಟನೆಗಳ ಸಹಕಾರದೊಂದಿಗೆ ಪ್ರತಿ ಭಟನೆ ನಡೆಸಲಾಗುವುದೆಂದು, ಆಯೋಗದ ಮುಖಂಡರಾದ ಗುನ್ನಳ್ಳಿ ಶ್ರೀಧರ ಹಾಗೂ ಕೆಕೆ ಹಟ್ಟಿ ರಾಜು ಸ್ಪಷ್ಟಪಡಿಸಿದ್ದಾರೆ
*ದೊಡ್ಡವರ ಸಣ್ಣತನಕ್ಕೆ ಸಾಕ್ಷಿ.!?*- ಈ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ಕೈಬಿಡುವಂತೆ ಪೊಲೀಸ್ ಇಲಾಖೆಗೆ ಒತ್ತಡ ಹಾಕಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು