ಇತ್ತೀಚಿನ ಸುದ್ದಿ
ಕೂಡ್ಲಿಗಿ ಪಟ್ಟಣ ಪಂಚಾಯಿತಿ ಸಿಬ್ಬಂದಿಗಳಿಂದ ಕೋವಿಡ್ ಜಾಗೃತಿ: ಮಾಸ್ಕ್ ಧರಿಸದವರಿಗೆ ದಂಡ
28/08/2021, 20:04
ವಿಜಯನಗರ(reporterkarnataka.com): ಜಿಲ್ಲೆಯ ಕೂಡ್ಲಿಗಿ ಪಟ್ಟಣ ಪಂಚಾಯಿತಿ ಸಿಬ್ಬಂದಿಗಳು ಮಾಸ್ಕ್ ಹಾಕದವರಿಗೆ ದಂಡ ವಿಧಿಸಿ ಸಾರ್ವಜನಿಕರಿಗೆ ಕೋವಿಡ್ ಸೋಂಕಿನ ಕುರಿತು ಜಾಗೃತಿ ಮೂಡಿಸಿದರು.
ಆಗಸ್ಟ್ 27ರಂದು ಪಟ್ಟಣದ ಮದಕರಿ ವೃತ್ತದಲ್ಲಿ ಪಪಂ ಅಧಿಕಾರಿ ಈರಮ್ಮ ನೇತೃತ್ವದಲ್ಲಿ,ಪಪಂ ಸಿಬ್ಬಂದಿ ಕೋವಿಡ್ ಸೋಂಕಿನ ಕುರಿತು ಜಾಗ್ರತೆ ಮೂಡಿಸಿದರು. ಮಾಸ್ಕ್ ಧರಿಸದೇ ನಿಯಮ ಮೀರಿ ರಸ್ತೆಯಲ್ಲಿ ಸಂಚರಿಸುವ ಪಾದಚಾರಿಗಳಿಗೆ ಹಾಗೂ ಬೈಕ್ ಸೇರಿದಂತೆ, ಇತರೆ ವಾಹನಗಳಲ್ಲಿ ತೆರಳುವವರಿಗೆ ನಿಗದಿತ ದಂಡ ವಿಧಿಸಲಾಯಿತು.ಈ ಸಂದರ್ಭದಲ್ಲಿ ಕೆಲ ನಾಗರೀಕರು ಮಾತನಾಡಿ ದಂಡ ವಿಧಿಸುವುದರೊಂದಿಗೆ, ಪಪಂ ದಂಡದ ರಸೀದಿಯೊಂದಿಗೆ ಮಾಸ್ಕ್ ವಿತರಿಸುವ ಮೂಲಕ ಜಾಗ್ರತೆ ಮೂಡಿಸಬಹುದಾಗಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ವಾಲ್ಮೀಕಿ ಯುವ ಮುಖಂಡ ಕಾರ್ಪೆಂಟರ್ ಮೂಗಣ್ಣ, ಪಪಂ ಸದಸ್ಯ ಶಿವಪ್ಪ ನಾಯಕ ಉಪಸ್ಥಿತರಿದ್ದರು.
ಪಪಂ ಸಿಬ್ಬಂದಿಗಳಾದ ಪೌರ ಕಾರ್ಮಿಕರಾದ ಮೇಸ್ತ್ರಿ ಪರಶುರಾಮಪ್ಪ, ರಮೇಶ, ರಾಜಾಭಕ್ಷಿ, ಮುನೀರ್, ಧನುಂಜಯ್, ಹನುಮಂತಪ್ಪ ಹಾಜರಿದ್ದರು.