ಇತ್ತೀಚಿನ ಸುದ್ದಿ
ಕುಡಿಯುವ ನೀರಿಗೆ ತತ್ಪಾರ: ಬತ್ತಿದ ಕೃಷ್ಣಾ ನದಿಗೆ ಮಹಾರಾಷ್ಟ್ರದಿಂದ 2 ಟಿಎಂಸಿ ನೀರು ಬಿಡಲು ಆಗ್ರಹ
22/06/2023, 16:14
ರಾಹುಲ್ ಅಥಣಿ ಬೆಳಗಾವಿ
info.reporterkarnataka@gmail.com
ಅಥಣಿ ತಾಲೂಕಿನ ಜೀವ ನದಿಯಾದ ಕೃಷ್ಣಾ ನದಿ ಬತ್ತಿ ಹೋಗಿದ್ದರಿಂದ ದಿನೇ ದಿನೇ ನೀರಿನ ಕೊರತೆ ಉಂಟಾಗುತ್ತಿದೆ. ಆದ್ದರಿಂದ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ನೀರಾವರಿ ಸಚಿವರು ಇತ್ತ ಕಡೆ ಸ್ವಲ್ಪ ಗಮನಹರಿಸಿ ಶೀಘ್ರವೇ ಕೃಷ್ಣಾ ನದಿಗೆ ಮಹಾರಾಷ್ಟ್ರದಿಂದ ಎರಡು ಟಿಎಂಸಿ ನೀರು ಬಿಡಿಸಬೇಕೆಂದು ರಾಜ್ಯ ರೈತ ಸಂಘ ಮನವಿ ಮಾಡಿದೆ.
ಕೃಷ್ಣ ನದಿಯಿಂದ ಉತ್ತರ ಭಾಗದ ಸುಮಾರು ಗ್ರಾಮಗಳಿಗೆ ಕುಡಿಯುವ ನೀರಿನ ಪೂರೈಕೆ ತೊಂದರೆಯಾಗುತ್ತಿದೆ. ನೂರಾರು ಹೆಕ್ಟರ್ ನಷ್ಟು ಕಬ್ಬು ಈಗಾಗಲೇ ನಾಶವಾಗಿದೆ. ದನಕರುಗಳು ನೀರಿಲ್ಲದೆ ದಿನಕ್ಕೆ ಪರದಾಡುವಂತಾಗಿದೆ. ಈ ತೊಂದರೆಯನ್ನು ಅರಿತು ತಾಲೂಕಿಗೆ ಕುಡಿಯುವ ನೀರನ್ನು ಪೂರೈಸಬೇಕೆಂದು ರಾಜ್ಯ ರೈತ ಸಂಘ ತಾಲೂಕು ಅಧ್ಯಕ್ಷರಾದ ಮಹದೇವ್ ಮಡಿವಾಳ ಒತ್ತಾಯಿಸಿದರು.