ಇತ್ತೀಚಿನ ಸುದ್ದಿ
ಕುಡಿತದ ಮತ್ತಿನಲ್ಲಿ ಸರಕಾರಿ ಬಸ್ ಮೇಲೆ ಮದ್ಯದ ಬಾಟಲಿ ಎಸೆತ; ಚಾಲಕನಿಗೆ ಹಿಗ್ಗಾಮುಗ್ಗ ಥಳಿತ: 4 ಮಂದಿ ಪುಂಡರ ಬಂಧನ
08/07/2023, 12:08

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಎಣ್ಣೆಯ ಮತ್ತಿನಲ್ಲಿದ್ದ ನಾಲ್ವರು ಯುವಕರು ಕೆಎಸ್ಸಾರ್ಟಿಸಿ ಬಸ್ ಮೇಲೆ ಖಾಲಿ ಮಧ್ಯದ ಬಾಟಲಿ ಎಸೆದು ಬಸ್ ಚಾಲಕನ ಮೇಲೆ ಹಲ್ಲೆ ನಡೆಸಿದ ಘಟನೆ ಬೀರೂರು ಸಮೀಪದ ಹೋರಿತಿಮ್ಮನಹಳ್ಳಿ ಗೇಟ್ ಬಳಿ ನಡೆದಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.
ಬಂಧಿತರನ್ನು ಕುಡಿದ ಮತ್ತಿನಲ್ಲಿ ಕಿರಣ್, ಸತೀಶ್, ಸಚಿನ್ ಹಾಗೂ ಸುಪ್ರೀತ್ ಎಂದು ಗುರುತಿಸಲಾಗಿದೆ.
ಪುಂಡರ ದಾಂಧಲೆಯಿಂದ ಬಸ್ಸಿನ ಮುಂಭಾಗದ ಗ್ಲಾಸ್ ಪುಡಿಯಾಗಿದೆ. ಚಾಲಕ ಗಾಯಗೊಂಡಿದ್ದಾರೆ.
ಕಡೂರಿನಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ಸರ್ಕಾರಿ ಬಸ್ ಮೇಲೆ ಚಲಿಸುತ್ತಿದ್ದ ಕಾರಿನಿಂದ ಬಸ್ಸಿನ ಮುಂಭಾಗದ ಗ್ಲಾಸಿಗೆ ಯುವಕರ ತಂಡ ಮದ್ಯದ ಬಾಟಲಿ ಎಸೆದಿತ್ತು. ಇದನ್ನು ಪ್ರಶ್ನಿಸಿದ ಚಾಲಕ ಸತೀಶ್ ಅವರಿಗೆ ಯುವಕರು ಹಿಗ್ಗಾಮುಗ್ಗಾ ಥಳಿಸಿದ್ದರು.
ಹಲ್ಲೆಗೊಳಗಾದ ಡ್ರೈವರ್ ಸತೀಶ್ ಅವರನ್ನು ಬೀರೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೀರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.