ಇತ್ತೀಚಿನ ಸುದ್ದಿ
ಕೃಷ್ಣರಾಜಪೇಟೆ: ಮರಡಿಲಿಂಗೇಶ್ವರ ಕ್ಷೇತ್ರದಲ್ಲಿ ಚಿಕ್ಕಯ್ಯ- ದೊಡ್ಡಯ್ಯ ಜೋಡಿ ರಥೋತ್ಸವದ ವೈಭವ
19/03/2022, 08:49
ಮಂಡ್ಯ(reporterkarnataka.com): ಕೃಷ್ಣರಾಜಪೇಟೆ ತಾಲ್ಲೂಕಿನ ಮರಡಿಲಿಂಗೇಶ್ವರ ಕ್ಷೇತ್ರದಲ್ಲಿ ಚಿಕ್ಕಯ್ಯ- ದೊಡ್ಡಯ್ಯ ಜೋಡಿರಥಗಳ ವೈಭವದ ಬ್ರಹ್ಮರಥೋತ್ಸವ ನಡೆಯಿತು. ಭಕ್ತಾದಿಗಳು ಜಯಘೋಷ ಮುಗಿಲು ಮುಟ್ಟಿ ಸಂಭ್ರಮಿಸಿತು.
ನಗರೂರು-ಮಾರ್ಗೋನಹಳ್ಳಿ ಅವಳಿ ಗ್ರಾಮಗಳ ಸಮೀಪದಲ್ಲಿರುವ ಹಾಲುಮತ ಕುರುಬ ಸಮಾಜದ ಆರಾಧ್ಯದೈವ ಮರಡಿಲಿಂಗೇಶ್ವರ ಕ್ಷೇತ್ರದಲ್ಲಿ ಚಿಕ್ಕಯ್ಯ-ದೊಡ್ಡಯ್ಯ ಜೋಡಿ ರಥದ ಸಂಭ್ರಮ ನಡೆಯಿತು.ಸಚಿವ ನಾರಾಯಣಗೌಡ ರಥೋತ್ಸವದಲ್ಲಿ ಭಾಗವಹಿಸಿದರು. ಕುರಿಗಳಿಂದ ಮರಡಿಲಿಂಗೇಶ್ವರ ದೇವಾಲಯದ ಸುತ್ತಲೂ ಮೂರು ಸುತ್ತು ಪ್ರದಕ್ಷಿಣೆ ಹಾಕಿ ಭಕ್ತಿಯ ಸಮರ್ಪಣೆ ಮಾಡಲಾಯಿತು.
ಉಘೇ ದೊಡ್ಡಯ್ಯ..ಉಘೇ ಚಿಕ್ಕಯ್ಯ…ಎಂದು ಜಯಘೋಷ ಮುಗಿಲು ಮುಟ್ಟಿತು.ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ್ದ 10 ಸಾವಿರಕ್ಕೂ ಹೆಚ್ಚಿನ ಭಕ್ತರು ಜೋಡಿ ರಥೋತ್ಸವದಲ್ಲಿ ಪಾಲ್ಗೊಂಡರು.
ಹಾಲುಮತ ಕುರುಬ ಸಮಾಜದ ಮುಖಂಡರು ಹಾಗೂ ಮರಡಿಲಿಂಗೇಶ್ವರ ಸ್ವಾಮಿಯ ಒಕ್ಕಲಿಗೆ ಸೇರಿದ ಹೆಗಡಿ ಕೆ.ಎನ್.ಕೃಷ್ಣ, ಮೂಡಾ ಮಾಜಿ ಅಧ್ಯಕ್ಷ ಕೆ.ಶ್ರೀನಿವಾಸ್, ಪುರಸಭೆ ಸದಸ್ಯ ಕೆ.ಶ್ರೀನಿವಾಸ್, ಎಪಿಎಂಸಿ ಮಾಜಿನಿರ್ದೇಶಕ ಕೆ.ವೇಣುಗೋಪಾಲ, ಕೆ.ಪುರುಷೋತ್ತಮ, ಮಾರ್ಗೋನಹಳ್ಳಿ ತಮ್ಮಯ್ಯ, ನಂಜೇಗೌಡ, ಆದಿಹಳ್ಳಿ ಮೀನಾಕ್ಷಿ, ಕಾರಿಗನಹಳ್ಳಿ ಕುಮಾರ್ ಮತ್ತಿತರರು ರಥೋತ್ಸವದಲ್ಲಿ ಭಾಗವಹಿಸಿದ್ದರು.