5:14 PM Saturday30 - November 2024
ಬ್ರೇಕಿಂಗ್ ನ್ಯೂಸ್
ಕುಡಿಯುವ ನೀರಿಲ್ಲ, ಬೆಳಕಿಲ್ಲ, ನಿಯಮಾನುಸಾರ ಆಸರೆ ಮನೆ ಹಂಚಿಕೆಯಾಗಿಲ್ಲ: ನಾಗಬೇನಾಳ ಗ್ರಾಮ ಸಭೆ… ಬೆಂಗಳೂರಿನಲ್ಲಿ ಮುಳಿಯ ಜ್ಯುವೆಲ್ಸ್ ನಿಂದ ಕನ್ನಡ ಕಾರ್ಯಕ್ರಮ: ವಿವಿಧ ನೃತ್ಯ ಸ್ಪರ್ಧೆ ಮೂಡಿಗೆರೆ: ಬಗ್ಗಸಗೋಡು ಗ್ರಾಮದಲ್ಲಿ ನಾಯಿ ದಾಳಿಯಿಂದ 5ರ ಹರೆಯದ ಬಾಲಕಿಗೆ ಗಾಯ ಹೆಚ್ಚುತ್ತಿರುವ ಗರ್ಭಿಣಿಯರ, ಬಾಣಂತಿಯರ ಸಾವು ಪ್ರಕರಣ: ಬಳ್ಳಾರಿ ವಿಮ್ಸ್‌ ಆಸ್ಪತ್ರೆಗೆ ಸರಕಾರದಿಂದ ಸರ್ಜರಿ!! ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ, ಗರ್ಭಿಣಿಯರ ಸಾವು: ತನಿಖೆಗೆ ಅಗ್ರಹಿಸಿ ಜನವಾದಿ ಮಹಿಳಾ ಸಂಘಟನೆ… ಲಂಡನ್ ವಾಲ್ವ್ಸ್ 2024 ರಲ್ಲಿ ಮಿಂಚಿದ ಭಾರತ: ಹೃದಯ ಕವಾಟ ಆವಿಷ್ಕಾರ ‘ಮೈವಾಲ್… ಹುಣಸಗಿ: ವಿದ್ಯಾರ್ಥಿಗಳಿಂದ ಕೆಎಸ್ಸಾರ್ಟಿಸಿ ಬಸ್ ತಡೆದು ಪ್ರತಿಭಟನೆ; ಸಾರ್ವಜನಿಕರ ಸಾಥ್ ಅಡಿಕೆ ಬೆಳೆಗಾರರ ಸಮಸ್ಯೆ: ಕರಾವಳಿ ಸಂಸದರಿಂದ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್… ಡಿ.8ರಂದು ಉರ್ವ ಪೊಂಪೈ ಮಾತೆಯ ಪುಣ್ಯಕ್ಷೇತ್ರದ ವಾರ್ಷಿಕ ಹಬ್ಬ: ಬಿಷಪ್ ಡಾ. ಪೀಟರ್… ಕರ್ತವ್ಯಲೋಪ: ಚಿಕ್ಕಮಗಳೂರು ನಗರ ಠಾಣೆ ಇನ್ಸ್ ಪೆಕ್ಟರ್ ರೇಣುಕಾ ಪ್ರಸಾದ್ ಅಮಾನತು

ಇತ್ತೀಚಿನ ಸುದ್ದಿ

ಕೃಷಿ ರಾಸಾಯನಿಕಗಳು ಜೀವ ವೈವಿಧ್ಯಕ್ಕೆ ಮಾರಕವಾಗದಿರಲಿ: ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ

30/11/2024, 16:46

ಗಣೇಶ್ ಇನಾಂದಾರ ಬಳ್ಳಾರಿ

info.reporterkarnataka@gmal.com

ಕೃಷಿ ಪರಿಕರಗಳ ಮಾರಾಟಗಾರರ ಜವಾಬ್ದಾರಿ ಹೆಚ್ಚಿಸಲು ಈ ಕಾರ್ಯಕ್ರಮ ಮಾಡಲಾಗಿದೆ. ಇದರ ಸದುಪಯೋಗ ಆಗಬೇಕು ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.
ಭಾರತ ಸರ್ಕಾರ, ಮ್ಯಾನೇಜ್ ಹೈದರಾಬಾದ್, ಕೃಷಿ ವಿಶ್ವವಿದ್ಯಾಲಯ ಧಾರವಾಡ ಮತ್ತು ರಾಯಚೂರು, ಕೃಷಿ ಇಲಾಖೆ – ಕೃಷಿ ತಂತ್ರಜ್ಞರ ಸಂಸ್ಥೆ ಬಳ್ಳಾರಿ ಇವರ ಸಹಯೋಗದಲ್ಲಿ ಬಳ್ಳಾರಿ ನಗರದ ಖಾಸಗಿ ಹೊಟೇಲ್’ನಲ್ಲಿ ಏರ್ಪಡಿಸಿದ್ದ (ಕೃಷಿ ವಿಸ್ತರಣಾ ಸೇವೆ) ಕೃಷಿ ಪರಿಕರಗಳ ಮಾರಾಟಗಾರರಿಗಾಗಿ ಡಿಪ್ಲೋಮಾ ಪ್ರಮಾಣ ಪತ್ರಗಳ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನೀವು ಕೃಷಿಕರಿಗೆ ಒದಗಿಸುವ ರಾಸಾಯನಿಕ, ಗೊಬ್ಬರ ಅವರ ಬದುಕನ್ನೇ ನಿರ್ಧರಿಸುತ್ತದೆ, ನೀವು ನೀಡುವ ಯಾವುದೇ ವಸ್ತುಗಳು ಕೃಷಿ ಮಾತ್ರವಲ್ಲ, ಇಡೀ ಪರಿಸರದ ಮೇಲೆ ಪರಿಸರ ಬೀರುತ್ತದೆ, ಹೀಗಾಗಿ ನಿಮ್ಮ ಕೆಲಸ ಜವಾಬ್ದಾರಿಯುತವಾದದ್ದು ಎಂದರು.
ರೈತರಿಗೆ ಬೆಳೆ ಚೆನ್ನಾಗಿ ಬಂದರೆ ಮಾತ್ರ ನಿಮಗೆ ಹಣ ಸಿಗುತ್ತದೆ, ಇಲ್ಲದಿದ್ದರೆ ಕಷ್ಟ, ರೈತರಿಗಿಂತ ಸಂಕಷ್ಟದ ಕೆಲಸ ನಿಮ್ಮದು, ನೀವು ಉತ್ತಮ ರಾಸಾಯನಿಕ ನೀಡಿದಾಗ ಉತ್ತಮ ಬೆಳೆ ಬರುತ್ತದೆ, ಅದರಿಂದ ಜನರ ಆರೋಗ್ಯ ಕಾಪಾಡಲು ಸಾಧ್ಯ ಎಂದು ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.
ರಾಸಾಯನಿಕಗಳು ಜೀವ ವೈವಿಧ್ಯ, ಜೀವ ಸಂಕುಲವನ್ನು ಹಾಳು ಮಾಡಬಾರದು ಎಂದು ಹೇಳಿದ ಅವರು, ಮನುಷ್ಯ ಬದುಕಬೇಕು ಅದರ ಜೊತೆಗೆ ಎಲ್ಲ ಜೀವಿಗಳು ಕೂಡ ಉಳಿಯಬೇಕು ಎಂದರು.
ಕೃಷಿ ಪರಿಕರಗಳ ಮಾರಾಟಗಾರರ ಕೆಲಸ ಬುದ್ಧಿವಂತರ ಕೆಲಸ, ಜನರ ನಡುವೆ ಇರುವ, ಜನರ ಮನವೊಲಿಸುವ ಕೌಶಲ್ಯ ಇದ್ದವರು ಈ ಕೆಲಸ ಮಾಡಲು ಸಾಧ್ಯ ವಿನಃ ಕೇವಲ ಅತಿ ಹೆಚ್ಚು ಅಂಕ ಗಳಿಸುವರಿಗೆ ಕಷ್ಟಕರವಾದುದು ಎಂದರು.
ಡಿಪ್ಲೋಮಾ ಪ್ರಮಾಣ ಪತ್ರಗಳನ್ನು ವಿತರಿಸಿದರು.
ಈ ವೇಳೆ ಡಾ.ಜಾಧವ ಎಸ್.ಎನ್, ಡಾ.ಬಿ.ಡಿ.ಬಿರಾದಾರ, ಸೋಮಸುಂದರ ಕೆ.ಎಂ, ಮಂಜುನಾಥ ಎನ್, ಡಾ.ರವಿಶಂಕರ್ ಜಿ, ಡಾ.ಗೋವಿಂಪ್ಪ ಎಂ.ಆರ್, ದಯಾನಂದ ಎಂ ಸೇರಿದಂತೆ ಮೊದಲಾದವರು ಹಾಜರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು