ಇತ್ತೀಚಿನ ಸುದ್ದಿ
ಕ್ರಾಂತಿಕಾರಿ ಕವಿ ಗದ್ದರ್ ಇನ್ನಿಲ್ಲ: ಅನಾರೋಗ್ಯದಿಂದ ಹೈದರಾಬಾದ್ ಅಸ್ಪತ್ರೆಯಲ್ಲಿ ಸಾವು
06/08/2023, 22:19
ಹೈದರಾಬಾದ್(reporterkarnataka.com): ಕ್ರಾಂತಿಕಾರಿ ಕವಿ, ಗಾಯಕ ಗದ್ದರ್ ಎಂದೇ ಖ್ಯಾತರಾಗಿದ್ದ ಗುಮ್ಮಡಿ ವಿಠಲ ರಾವ್(77) ಅನಾರೋಗ್ಯದಿಂದ ಭಾನುವಾರ ನಿಧನರಾದರು.
ಹೈದರಾಬಾದ್ ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗದ್ದರ್ ಅವರಿಗೆ ಇತ್ತೀಚೆಗೆ ಬೈಪಾಸ್ ಸರ್ಜರಿ ನಡೆದಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.
ಗದ್ದರ್ ಅವರು ತನ್ನ ಕ್ರಾಂತಿಕಾರಿ ಹಾಡುಗಳಿಂದ ಖ್ಯಾತಿ ಪಡೆದಿದ್ದರು. ಗದ್ದರ್ ಕಾರ್ಯಕ್ರಮಕ್ಕೆ ಲಕ್ಷಾಂತರ ಜನ ಸೇರುತ್ತಿದ್ದರು. ಗದ್ದರ್ ಅವರು ಶೋಷಣೆ, ಅನ್ಯಾಯದ ವಿರುದ್ಧ ಸದಾ ಹೋರಾಡುತ್ತಿದ್ದರು. ಮಂಗಳೂರು ಸೇರಿದಂತೆ ಕರ್ನಾಟಕ ಹಲವೆಡೆ ಪ್ರತಿಭಟನೆಯಲ್ಲೂ ಭಾಗವಹಿಸಿದ್ದರು. ನಕ್ಸಲ್ ಆರೋಪದ ಮೇಲೆ ಸಾಕೇತ್ ರಾಜನ್ ಹತ್ಯೆ ನಡೆದಾಗ ರಾಜ್ಯದಲ್ಲಿ ಅವರು ಪ್ರತಿಭಟನೆ ನಡೆದಿದ್ದರು. ನಕ್ಸಲ್ ಪರ ಎಂಬ ಆರೋಪ ಅವರ ಮೇಲಿತ್ತು. ಗದ್ದರ್ ಅವರ ಅಂತಿಮ ದರ್ಶನ ಪಡೆಯಲು ಹೈದರಾಬಾದ್ ನ ಭೂದೇವಿ ನಗರದ ಅವರ ನಿವಾಸದ ಮುಂದೆ ಭಾರೀ ಸಂಖ್ಯೆಯಲ್ಲಿ ಅವರ ಅಭಿಮಾನಿಗಳು ನೆರೆದಿದ್ದಾರೆ.