8:47 PM Sunday26 - January 2025
ಬ್ರೇಕಿಂಗ್ ನ್ಯೂಸ್
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಬದುಕು ಸ್ಫೂರ್ತಿದಾಯಕ: ಮುಖ್ಯಮಂತ್ರಿ ಸಿದ್ದರಾಮಯ್ಯ ಭಾರತದಲ್ಲಿ ಪ್ರಜಾಪ್ರಭುತ್ವ ಗಟ್ಟಿಯಾಗಿ ಉಳಿಯಲು ಅಂಬೇಡ್ಕರ್ ಕೊಟ್ಟಿರುವ ಸಂವಿಧಾನ ಕಾರಣ: ಮಾಜಿ ಸಿಎಂ… ಕಲ್ಲು ಗಣಿಗಾರಿಕೆ: ಡೈನಮೈಟ್ ಸ್ಫೋಟಕ್ಕೆ ಹಲವು ಮನೆಗಳಿಗೆ ಹಾನಿ; 6 ಸೆಕೆಂಡ್ ಕಂಪಿಸಿದ… ಚಾರ್ಮಾಡಿ ಘಾಟಿ ಕಾಡ್ಗಿಚ್ಚು: ಅಗ್ನಿಶಾಮಕ‌ ದಳ, ಅರಣ್ಯ ಇಲಾಖೆ ಸಿಬ್ಬಂದಿ ಶ್ರಮದಿಂದ ಬೆಂಕಿ… ಮೈಕ್ರೋ ಫೈನಾನ್ಸ್‌ ನಿಯಂತ್ರಣಕ್ಕೆ ಸುಗ್ರೀವಾಜ್ಞೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಐತಿಹಾಸಿಕ ಸುತ್ತೂರು ಜಾತ್ರಾ ಮಹೋತ್ಸಕ್ಕೆ ಸುತ್ತೂರು ಶ್ರೀಗಳು ಚಾಲನೆ; ಮಹಾ ದಾಸೋಹಕ್ಕೆ ಕ್ಷಣಗಣನೆ ಕುವೆಂಪು ಆಶಯಕ್ಕೆ ಕೊಳ್ಳಿ: ಕುಪ್ಪಳಿಯಲ್ಲಿ ಅದ್ದೂರಿ ಮಂತ್ರ ಮಾಂಗಲ್ಯ; ಸಿನಿಮಾ ತಾರೆಯರಿಗಾಗಿ ರಂಗು… ಮನೆ ಸೀಝ್ ಮಾಡಿ ಬಾಣಂತಿ- ಮಗುವನ್ನು ಹೊರಹಾಕಿದ ಖಾಸಗಿ ಫೈನಾನ್ಸ್: ಬೀಗ ತೆರವುಗೊಳಿಸಿದ… ಗೃಹಲಕ್ಷ್ಮೀ ಮೂಲಕ ಮಹಿಳೆಯರ ಸಬಲೀಕರಣ, ಮೈಕ್ರೋ ಫೈನಾನ್ಸ್ ಮೂಲಕ ಜೀವಹರಣ: ಕೇಂದ್ರ ಸಚಿವ… 7-8 ವರ್ಷ ಕಳೆದರೂ ಹಸ್ತಾಂತರವಾಗದ ಶಾಲಾ ಕೊಠಡಿ: ಮಾಹಿತಿ ಇಲ್ಲವೆಂದ ಬಿಇಒ; ಶಿಕ್ಷಣ…

ಇತ್ತೀಚಿನ ಸುದ್ದಿ

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಬದುಕು ಸ್ಫೂರ್ತಿದಾಯಕ: ಮುಖ್ಯಮಂತ್ರಿ ಸಿದ್ದರಾಮಯ್ಯ

26/01/2025, 15:06

ಬೆಂಗಳೂರು(reporterkarnataka.com): ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಬದುಕು ಸ್ಫೂರ್ತಿದಾಯಕವಾಗಿದ್ದು, ಅವರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಗೌರವ ಸಲ್ಲಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.


ಅವರು ಇಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ 194ನೇ ಸ್ಮರಣೋತ್ಸವ ಅಂಗವಾಗಿ ರಾಯಣ್ಣನವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ಕಿತ್ತೂರು ರಾಣಿಚೆನ್ನಮ್ಮನವರ ಬಲಗೈಬಂಟನಾಗಿ ಹೋರಾಡಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರು ಅಪ್ರತಿಮ ದೇಶಭಕ್ತರಾಗಿದ್ದರು. ಬ್ರಿಟೀಷರ ವಿರುದ್ಧ ಸೆಣೆಸಲು ಗೆರಿಲ್ಲಾ ಯುದ್ಧತಂತ್ರಗಾರಿಕೆಯನ್ನು ಬಳಸಿದ್ದರು. ಭಾರತದ ಶ್ರೇಷ್ಠ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಸಂಗೊಳ್ಳಿ ರಾಯಣ್ಣನವರು ಕನ್ನಡ ನಾಡು ನುಡಿ ನೆಲ ಜಲಗಳಿಗೆ ಅತೀವ ಗೌರವ ನೀಡುವ ಅವರ ಬದುಕು ನಮಗೆಲ್ಲ ಸ್ಫೂರ್ತಿ ಎಂದರು.

ಇತ್ತೀಚಿನ ಸುದ್ದಿ

ಜಾಹೀರಾತು