ಇತ್ತೀಚಿನ ಸುದ್ದಿ
ಕ್ರಮಬದ್ಧವಾದ ಜೀವನ ಶೈಲಿ ಮಧುಮೇಹವನ್ನು ತಡೆಗಟ್ಟ ಬಹುದು: ಡಾ. ನಜೀರ್ ಅಹಮದ್
16/11/2022, 12:22
ಪುತ್ತೂರು(reporterkarnataka.com): ಸಂತ ಫಿಲೋಮಿನಾ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕ, ಕಲ್ಲಾರೆಯ ಡಯಾಬಿಟಿಸ್ ಸಂಸ್ಥೆ ಹಾಗೂ ಫಾದರ್ ಪತ್ರಾವೋ ಆಸ್ಪತ್ರೆ ಗಳ ಸಂಯುಕ್ತ ಆಶ್ರಯದಲ್ಲಿ ಮಧುಮೇಹ ದಿನದ ಅಂಗವಾಗಿ ಮಧುಮೇಹದ ಬಗ್ಗೆ ಅರಿವು ಮೂಡಿರುವ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಡಯಾಬಿಟಿಸ್ ಸೆಂಟರ್‌ನ ವೈದ್ಯ ನಜೀರ್ ಅಹ್ಮದ್ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಮಧುಮೇಹ ಕಾಯಿಲೆಗೊಳಗಾಗುವವರ ಸಂಖ್ಯೆಯು ಗಣನೀಯವಾಗಿ ಹೆಚ್ಚಾಗಿದೆ. ಅಸಮರ್ಪಕ ಜೀವನಶೈಲಿ, ಮಾನಸಿಕ ಒತ್ತಡ ಹಾಗೂ ಅಸಂತುಲಿತ ಆಹಾರ ಮುಂತಾದ ಕಾರಣಗಳಿಂದ ಹೆಚ್ಚಾಗಿ ಡಯಾಬಿಟಿಸ್ ಕಂಡು ಬರುತ್ತದೆ. ಕ್ರಮಬದ್ಧ ಜೀವನ ಶೈಲಿ, ನಿಯಮಿತವಾದ ವ್ಯಾಯಾಮ ಮಧುಮೇಹವನ್ನು ನಿಯಂತ್ರಿಸಲು ಸಹಕಾರಿ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ವಂ.ಡಾ. ಅಂತೋನಿ ಪ್ರಕಾಶ್ ಮೊಂತೆರೊ ಮಾತನಾಡಿ, ಪ್ರತಿಯೊಬ್ಬ
ವ್ಯಕ್ತಿಗೂ ಡಯಾಬಿಟನ ಬಗ್ಗೆ ಅರಿವು ಇರಬೇಕು. ನಿಯಮಿತವಾಗಿ ತಪಾಸಣೆಗೊಳಪಟ್ಟರೆ ಡಯಾಬಿಟಿಸ್ ಬರುವ ಸಾಧ್ಯತೆಗಳನ್ನು ಕಡಿಮೆ ಮಾಡಬಹುದು. ಅಗತ್ಯ ಮುಂಜಾಗರುಕತಾ ಕ್ರಮಗಳನ್ನು ಕೈಗೊಳ್ಳಿ ಎಂದು ಹೇಳಿದರು.
ಕಾಲೇಜಿನ ಉಪಪ್ರಾಂಶುಪಾಲ, ಆಂತರಿಕ ಗುಣಮಟ್ಟ ಭರವಸೆ ಕೋಶದ ಸಂಯೋಜಕ ಡಾ. ಎ.ಪಿ. ರಾಧಾಕೃಷ್ಣ ಉಪಸ್ಥಿತರಿದ್ದರು.
ಪ್ರೇಮ್ ಮತ್ತು ಬಳಗ ಪ್ರಾರ್ಥಿಸಿದರು, ಡಾ.ಮಾಲಿನಿ ಸ್ವಾಗತಿಸಿ, ನಿರೂಪಿಸಿದರು. ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ಸಂಚಾಲಕ ಡಾ. ಡಿಂಪಲ್ ಫೆರ್ನಾಂಡಿಸ್ ವಂದಿಸಿದರು. ಭಾ | ಪತ್ರಾವೋ ಆಸ್ಪತ್ರೆಯ ವತಿಯಿಂದ ವಿದ್ಯಾರ್ಥಿಗಳ ಹಾಗೂ ಕಾಲೇಜು ಸಿಬ್ಬಂದಿಗಳ ಆರೋಗ್ಯ ತಪಾಣಿಯನ್ನು ಮಾಡಲಾಯಿತು. ನಂತರ ಡಾ. ನಜೀರ್ ಅಹ್ಮದ್ ರವರು ಸಮಾಲೋಚನೆ ನಡೆಸಿದರು.