ಇತ್ತೀಚಿನ ಸುದ್ದಿ
ಕೊಟ್ಟಿಗೆಹಾರ ಶ್ರೀ ಸೀತಾರಾಮ ದೇವಸ್ಥಾನಕ್ಕೆ ಸೋಲಾರ್ ಲೈಟ್ ಕೊಡುಗೆ
18/11/2023, 17:58

ಮಂಗಳೂರು(reporterkarnataka.com): ಕೊಟ್ಟಿಗೆಹಾರದ ಪವಿತ್ರ ಹಾಗೂ ಧಾರ್ಮಿಕ ಕ್ಷೇತ್ರ ಶ್ರೀ ಸೀತಾರಾಮ ದೇವಸ್ಥಾನಕ್ಕೆ ಜಿಲ್ಲೆಯ ಪ್ರತಿಷ್ಠಿತ ರೆಸಾರ್ಟ್ ಗಳಲ್ಲಿ ಒಂದಾದ ರಿವರ್ ವಿಸ್ಟ್ ಮಾಲಿಕರಾದ ಶ್ರೀಜಿತ್ ಅವರು ಸೋಲಾರ್ ಲೈಟ್ ಗಳನ್ನು ಕೊಡಿಗೆಯಾಗಿ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಹಲವಾರು ದಿನಗಳಿಂದ ಈ ಕ್ಷೇತ್ರಕ್ಕೆ ಸೋಲಾರ್ ಲೈಟ್ ಅನ್ನು ನೀಡಬೇಕೆಂದು ನಿರ್ಧರಿಸಿದೆ. ಆದರೆ ಇಂದು ಕಾಲ ಕೂಡಿಬಂದಿದೆ. ಈ ಕ್ಷೇತ್ರಕ್ಕೆ ಸಾವಿರಾರು ಭಕ್ತಾದಿಗಳು ಬರುವುದರಿಂದ ಇದರ ಉಪಯೋಗವನ್ನು ಪಡೆದುಕೊಳ್ಳಬೇಕೆಂದು ಅವರು ಹೇಳಿದರು.
ಧರ್ಮಸ್ಥಳ ಪಾದಯಾತ್ರೆ ಸಮಯದಲ್ಲಿ ಸಾವಿರಾರು ಭಕ್ತಾದಿಗಳು ಇಲ್ಲಿ ಸೇರುವುದರಿಂದ ಸೋಲಾರ್ ಲೈಟ್ ಉಪಯೋಗಕ್ಕೆ ಬರುತ್ತದೆ ಎಂದರು.
ಈ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕರಾದ ಕಾರಂತ್, ದೇವಸ್ಥಾನದ ಮುಖ್ಯಸ್ಥರಾದ ನರೇಂದ್ರ ಗೌಡ, ವೇಣುಗೋಪಾಲ
ಪೈ, ಅಶ್ವಥ್ , ಸಾಗರ್ ಮೊದಲಾದವರು ಉಪಸ್ಥಿತರಿದ್ದರು.