ಇತ್ತೀಚಿನ ಸುದ್ದಿ
ಕೊಟ್ಟಿಗೆಹಾರ ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿ ಅಡ್ಡಾದಿಡ್ಡಿ ವಾಹನಗಳ ನಿಲುಗಡೆ: ಸಂಚಾರಕ್ಕೆ ಕಿರಿ ಕಿರಿ
24/12/2022, 18:50

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಪಟ್ಟಣದ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿ ಅಡ್ಡಾದಿಡ್ಡಿ ಬೈಕ್ ಗಳು, ವಾಹನಗಳು ನಿಲ್ಲಿಸಿದ ಕಾರಣ ಟ್ರಾಫಿಕ್ ಸಮಸ್ಯೆ ಉಂಟಾಗಿದೆ. ಜನ ಸಾಮಾನ್ಯರು ದಾಟಿ ಹೋಗಲು ಹರಸಹಾಸ ಪಡುವಂತಾಗಿದೆ.
ಅಂಗಡಿ, ಹೋಟೆಲ್ ಗಳ ಮುಂಬಾಗದ ರಸ್ತೆಯ ಮಧ್ಯದಲ್ಲೇ ಅಡ್ಡಾದಿಡ್ಡಿ ವಾಹನಗಳ ನಿಲುಗಡೆ ಮಾಡಿ ಪ್ರವಾಸಿಗರು ತೆರಳುತ್ತಾರೆ. ರಸ್ತೆ ಮಾರ್ಗವಾಗಿ ಚಲಿಸುವ ಬಹುತೇಕ ವಾಹನಗಳು ಮುಂದೆ ಚಲಿಸಲು ಹರಸಹಾಸ ಪಡುವಂತಾಗಿದೆ.