3:52 AM Sunday15 - February 2026
ಬ್ರೇಕಿಂಗ್ ನ್ಯೂಸ್
ಟಿ20 ವಿಶ್ವಕಪ್: ಪಾಕಿಸ್ತಾನ ವಿರುದ್ದ ಭಾರತಕ್ಕೆ 61 ರನ್ ಜಯ; ಸೂಪರ್ 8… ರಾಜ್ಯದಲ್ಲಿ 2030ರ ವರೆಗೆ ಹಂತ ಹಂತವಾಗಿ ಪೊಲೀಸ್ ವಸತಿಗೃಹ ನಿರ್ಮಾಣ: ಗೃಹ ಸಚಿವ… ಅಮೆರಿಕ ಜೊತೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ: ರೈತರು ತೋಳಿಗೆ ಕಪ್ಪುಪಟ್ಟಿ ಕಟ್ಟಿ… ನಿಯಂತ್ರಣ ತಪ್ಪಿದ ಕೆಎಸ್‌ಆರ್‌ಟಿಸಿ ಬಸ್; ಮೈಸೂರಿನಲ್ಲಿ ಸರಣಿ ಅಪಘಾತ; ಟ್ರಾಫಿಕ್ ಜಾಮ್ ಕೊಡಗಿನಲ್ಲಿ ಸೂಪರ್ ಸ್ಟಾರ್ ರಜನಿಕಾಂತ್: ಮಡಿಕೇರಿ ಸಮೀಪ ರೆಸಾರ್ಟ್ ಉದ್ಘಾಟನೆ ಸೋಮವಾರಪೇಟೆ: ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ; ಸವಾರ ಸ್ಥಳದಲ್ಲೇ ಸಾವು,… ನಟ ದರ್ಶನ್ ಬಿಡುಗಡೆಗೆ ಪ್ರಾರ್ಥಿಸಿ ಅಭಿಮಾನಿಯಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ: 100 ಕಿಮೀ. ನಡಿಗೆ Kodagu | ಮಡಿಕೇರಿ ನಗರಸಭೆ: ಬಯಲು ಪ್ರದೇಶದಲ್ಲಿ ಮಲ ಮೂತ್ರ ವಿಸರ್ಜನೆ ನಿಷೇಧ ಒಟಿಪಿ ಸೋರಿಕೆ: ವಂಚನೆ ತಡೆಗಟ್ಟಲು ಏರ್‌ ಟೆಲ್‌ ನಿಂದ ಹೊಸ ಎಐ ಚಾಲಿತ… ಮಾಜಿ ಪ್ರಧಾನಿ ಎಚ್ಡಿಡಿ ಮಧ್ಯಪ್ರವೇಶ: ಕಾಫಿ ತೋಟಗಳ ಆನ್-ಲೈನ್ ಹರಾಜು ತಕ್ಷಣವೇ ಸ್ಥತಿತಗೊಳಿಸುವಂತೆ…

ಇತ್ತೀಚಿನ ಸುದ್ದಿ

ಕೊಟ್ಟಿಗೆಹಾರ: ಬಿಡಾಡಿ ದನಗಳ ಹಾವಳಿ: ಸಂಚಾರಕ್ಕೆ ತೊಂದರೆ

08/08/2024, 19:20

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka@gmail.com

ಬಣಕಲ್, ಕೊಟ್ಟಿಗೆಹಾರ ಪಟ್ಟಣಗಳಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದ್ದು,ಸವಾರರು, ವರ್ತಕರು ತೊಂದರೆ ಅನುಭವಿಸುವಂತಾಗಿದೆ. ಬಣಕಲ್, ಕೊಟ್ಟಿಗೆಹಾರ ಸುತ್ತಮುತ್ತ 50ಕ್ಕೂ ಅಧಿಕ ಬಿಡಾಡಿ ದನಗಳು ಬಸ್ ನಿಲ್ದಾಣ, ರಸ್ತೆ, ಅಂಗಡಿಗಳ ಮುಂದೆ ಮುಂತಾದ ಕಡೆಗಳಲ್ಲಿ ಬೇಕಾಬಿಟ್ಟಿ ಓಡಾಡಿಕೊಂಡಿರುತ್ತವೆ. ಹಗಲು ವೇಳೆಯಲ್ಲಿ ರಸ್ತೆಯಲ್ಲಿ ಸಾಲುಗಟ್ಟಿ ಮಲಗುವ ಬಿಡಾಡಿ ದನಗಳು ರಾತ್ರಿಯಿದ್ದಂತೆ ಆಟೋ ನಿಲ್ದಾಣ, ಅಂಗಡಿ ಮುಂಗಟ್ಟುಗಳ ಮುಂದೆ ಸಗಣಿ, ಗಂಜಲವನ್ನು ಹಾಕಿ ಪರಿಸರ ಕಲುಷಿತಗೊಳಿಸುತ್ತವೆ. ವರ್ತಕರಿಗಂತೂ ಬೆಳಿಗ್ಗೆ ಅಂಗಡಿ ತೆರೆಯಲು ದನಗಳ ಗಂಜಲ, ಸಗಣಿ ಎತ್ತುವುದೇ ದಿನ ನಿತ್ಯದ ಕಾಯಕವಾಗಿದೆ. ಇಲ್ಲಿ ಮಲಗುವ ದನಗಳಿಗೆ ಮಾಲೀಕರಿದ್ದು ಕೂಡ ಅವುಗಳನ್ನೇ ಕಟ್ಟಿ ಹಾಕದೇ ಬಿಡುವುದರಿಂದ ಇವು ಬಿಡಾಡಿ ದನಗಳಂತೆ ಆಗಿವೆ. ದನಗಳನ್ನು ಮಾಲೀಕರು ಕಟ್ಟುವ ಬಗ್ಗೆ ಗ್ರಾಮ ಪಂಚಾಯಿತಿ, ಪೊಲೀಸರು ಹಲವು ಬಾರಿ ಸಭೆಗಳನ್ನು ನಡೆಸಿ ಸೂಚಿಸಿದ್ದರೂ ಯಾವುದೇ ಪ್ರಯೋಜನವಾಗದೇ ದನಗಳ ಕಾಟ ತೀರಾ ಹೆಚ್ಚಾಗಿದೆ. ಇದಲ್ಲದೇ ವಾಹನ ಸಂಚರಿಸುವ ವೇಳೆ ದನಗಳು ಗುಂಪಾಗಿ ರಸ್ತೆಯಲ್ಲಿ ಮಲಗಿ ಅನೇಕ ಅಪಘಾತಗಳು ಸಂಭವಿಸುತ್ತಿವೆ. ವಾಹನಗಳು ಬರುವಾಗ ದನಗಳು ಆ ಕಡೆ ಓಡಾಡುವುದರಿಂದ ವಾಹನಗಳಿಗೆ ಅವು ತಾಗಿ ವಾಹನಕ್ಕೂ ಹಾನಿಯಾಗುತ್ತಿದೆ. ಸಂಬಂಧಿಸಿದ ಅಧಿಕಾರಿಗಳು ಇನ್ನಾದರೂ ದನಗಳ ಮಾಲೀಕರನ್ನು ಪತ್ತೆ ಸೂಕ್ತ ಹಚ್ಚಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಬಿಡಾಡಿ ದನಗಳ ಕಿವಿಗಳಿಗೆ ಗುರುತು ಹಚ್ಚಲು ಪಶು ವೈದ್ಯ ಇಲಾಖೆಯವರು ಬಿಲ್ಲೆಗಳನ್ನು ಹಾಕಿದ್ದಾರೆ. ಅದರಲ್ಲಿ ಮಾಲೀಕರ ವಿವರ ಇರುತ್ತದೆ. ಇದರಿಂದ ಬಿಡಾಡಿ ದನಗಳ ಮಾಲೀಕರ ಗುರುತು ಪತ್ತೆಯಾಗುತ್ತದೆ. ಈ ಬಗ್ಗೆ ಅಧಿಕಾರಿಗಳು ಕ್ರಮ ವಹಿಸಬೇಕು'.

—ಬಿ.ಸಿ. ಪ್ರವೀಣ್, ಮುಖಂಡರು, ಬಣಕಲ್.

ಇತ್ತೀಚಿನ ಸುದ್ದಿ

ಜಾಹೀರಾತು