ಇತ್ತೀಚಿನ ಸುದ್ದಿ
ಕೋಟೆಕಾರು ಸಹಕಾರಿ ಸಂಘ ಶಾಖೆಗೆ ಹಾಡಹಗಲೇ ನುಗ್ಗಿದ ಮುಸುಕುಧಾರಿ ತಂಡ: 10 ಕೋಟಿಗೂ ಅಧಿಕ ಮೌಲ್ಯದ ನಗ, ನಗದು ಲೂಟಿ
17/01/2025, 17:13
ಮಂಗಳೂರು(reporterkarnataka.com): ಬೀದರ್ ಘಟನೆ ಇನ್ನೂ ಹಸಿರಾಗಿರುವಾಗಲೇ
ಉಳ್ಳಾಲದ ಕೆ.ಸಿ. ರೋಡ್ ನಲ್ಲಿರುವ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ಶಾಖೆಗೆ ಹಾಡಹಗಲೇ ನುಗ್ಗಿದ ತಂಡವೊಂದು ಬಂದೂಕು ಮತ್ತು ತಲವಾರು ತೋರಿಸಿ ಸುಮಾರು 10 ಕೋಟಿ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದು ದರೋಡೆ ಮಾಡಿದ್ದಾರೆ.
5 ಮಂದಿಯ ತಂಡ ಮಾಸ್ಕ್ ಧರಿಸಿ ಆಗಮಿಸಿದ್ದರು. ಫಿಯೆಟ್ ಕಾರಿನಲ್ಲಿ ಬಂದ ದರೋಡೆಕೋರರು ಗನ್ ಮತ್ತು ತಲವಾರು ತೋರಿಸಿ ಸಹಕಾರಿ ಸಂಘದ ಸಿಬ್ಬಂದಿಗಳನ್ನು ಬೆದರಿಸಿ ನಗದು ಮತ್ತು ಚಿನ್ನಾಭರಣವನ್ನು ಗೋಣಿಯಲ್ಲಿ ತುಂಬಿಸಿ ಪರಾರಿಯಾಗಿದ್ದಾರೆ. ದರೋಡೆಕೋರರು ಮಂಗಳೂರಿನತ್ತ ಪರಾರಿಯಾಗಿದ್ದಾರೆ. ಕೋಟೆಕಾರು ಸಹಕಾರಿ ಸಂಘದಲ್ಲಿ ಈ ಹಿಂದೆಯೂ ಕಳ್ಳತನ ನಡೆದಿತ್ತು ಎನ್ನಲಾಗಿದೆ.
ಸ್ಥಳಕ್ಕೆ ವಿಧಾನಸಭೆ ಸ್ಪೀಕರ್ ಹಾಗೂ ಸ್ಥಳೀಯ ಶಾಸಕ ಯು.ಟಿ. ಖಾದರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.