ಇತ್ತೀಚಿನ ಸುದ್ದಿ
ಕೋಟೆಕಾರ್ ಉಚ್ಚಿಲ ಬಳಿ ಬಸ್ಸಿಗೆ ಸ್ಕೂಟರ್ ಡಿಕ್ಕಿ: ದಂಪತಿಗೆ ಗಾಯ; ಆಸ್ಪತ್ರೆಗೆ ದಾಖಲು
01/09/2023, 21:58

ಮಂಗಳೂರು(reporterkarnataka.com):ನಗರದ ಹೊರವಲಯದ ಕೋಟೆಕಾರ್ ಉಚ್ಚಿಲ ಬಳಿ ಸಿಟಿ ಬಸ್ಸಿಗೆ ಸ್ಕೂಟರ್ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ನಲ್ಲಿ ಪ್ರಯಾಣಿಸುತ್ತಿದ್ದ ದಂಪತಿ ಗಾಯಗೊಂಡಿದ್ದಾರೆ.
ಸ್ಟೇಟ್ ಬ್ಯಾಂಕ್ ನಿಂದ ತಲಪಾಡಿ ಕಡೆಗೆ ಹೋಗುವ ರೂಟ್ ನಂಬರ್ 42 ಭಗವತಿ ಬಸ್ ಸ್ಕೂಟರ್ ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಕೋಟೆಕಾರ್ ಉಚ್ಚಿಲ ಬಳಿ ಬಸೊಂದು ಸರ್ವಿಸ್ ರೋಡ್ ನಲ್ಲಿರುವ ಬಸ್ ಸ್ಟಾಂಡ್ ನಲ್ಲಿ ನಿಲ್ಲಿಸೋ ಬದಲು ಹೈವೇಯಲ್ಲಿಯೇ ಬಸ್ ಸ್ಟಾಪ್ ನೀಡಿದರ ಪರಿಣಾಮ ಹಿಂದಿನಿಂದ ಬರುತ್ತಿದ್ದ ದ್ವಿಚಕ್ರ ವಾಹನ ಡಿಕ್ಕಿ ಹೊಡೆದಿದೆ.
ಗಾಯಳು ದಂಪತಿಯನ್ನು ದೇರಳಕಟ್ಟೆ ಯೆನೆಪೋಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಂಕನಾಡಿ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
..