ಇತ್ತೀಚಿನ ಸುದ್ದಿ
ಕೊರಿಯಾದಲ್ಲಿ 25ನೇ ಅಂತಾರಾಷ್ಟ್ರೀಯ ಜಾಂಬೂರಿ: ವಾಮಂಜೂರಿನ ರೆಚೆಲ್ ಅನಿಶಾ ಕ್ರಾಸ್ತಾ ಭಾರತದ ಪ್ರತಿನಿಧಿ
21/07/2023, 19:30
ಮಂಗಳೂರು(reporterkarnataka.com):ವಾಮಂಜೂರು ನಿವಾಸಿ ರೆಚೆಲ್ ಅನಿಶಾ ಕ್ರಾಸ್ತಾ, ಆಗಸ್ಟ್ 1 ರಿಂದ 12ರ ವರೆಗೆ ಸೌತ್ ಕೊರಿಯಾದಲ್ಲಿ ನಡೆಯಲಿರುವ 25ನೇ ಅಂತಾರಾಷ್ಟ್ರೀಯ ಜಾಂಬೂರಿಯಲ್ಲಿ ಭಾರತ ದೇಶವನ್ನು ಪ್ರತಿನಿಧಿಸಿ ಭಾಗವಹಿಸಲಿದ್ದಾಳೆ.
2020-21ನೇ ಸಾಲಿನಲ್ಲಿ ಸ್ಕೌಟ್ಸ್ ಗೈಡ್ಸ್ ರಾಜ್ಯ ಪುರಸ್ಕಾರವನ್ನು ಪಡೆದಿರುವ ರೆಚೆಲ್ ಕ್ರಾಸ್ತಾ ಪ್ರಸ್ತುತ ಸಂತ ಅಲೋಶಿಯಸ್ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ. ವಾಮಂಜೂರಿನ ರೋಶನ್ ಹಾಗೂ ಲವೀನಾ ಕ್ರಾಸ್ತಾ ದಂಪತಿಯ ಪುತ್ರಿ.