ಇತ್ತೀಚಿನ ಸುದ್ದಿ
ಕೊರಗಜ್ಜ ಮೂಲಸ್ಥಾನ ಕುತ್ತಾರಿಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಭೇಟಿ: ಚಕ್ಕುಲಿ, ವೀಳ್ಯದೆಲೆ ಸಮರ್ಪಣೆ
10/12/2022, 19:03

ಮಂಗಳೂರು(reporterarnataka.com): ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಶನಿವಾರ ಕುಟುಂಬ ಸಮೇತ ಕುತ್ತಾರಿನ ಕೊರಗಜ್ಜ ಮೂಲ ಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಹ್ಯಾಟ್ರಿಕ್ ಹೀರೋ, ಇದೊಂದು ಯಾವುದೇ ಆಡಂಬರವಿಲ್ಲದ ದೈವೀಶಕ್ತಿಯ ಸ್ಥಳ. ಈ ಸ್ಥಳದ ಮಹಿಮೆಯನ್ನು ಗೆಳೆಯರೊಂದಿಗೆ ಅರಿತು ಕೊಂಡೆ. ಇಲ್ಲಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದು ತುಂಬಾ ಖುಷಿ ನೀಡಿದೆ ಎಂದರು.
ವೇದ ಸಿನಿಮಾದ ಪ್ರಚಾರ ನಿಮಿತ್ತ ಚಿತ್ರತಂಡದ ಜತೆ ಮಂಗಳೂರಿಗೆ ಆಗಮಿಸಿದ್ದೇನೆ. ಮೊದಲ ಬಾರಿಗೆ ಕೊರಗಜ್ಜನ ಸನ್ನಿಧಾನಕ್ಕೆ ಆಗಮಿಸಿದ್ದೇನೆ. ಇದೊಂದು ವಿಶೇಷ ಕ್ಷೇತ್ರವಾಗಿದ್ದು, ಭಕ್ತಿಯಿಂದ ನಮಿಸಿದ್ದೇನೆ. ಕೊರಗಜ್ಜನಿಗೆ ಚಕ್ಕುಲಿ ಮತ್ತು ವೀಳ್ಯದೆಲೆ ಅರ್ಪಿಸಿದ್ದೇನೆ ಎಂದು ಶಿವರಾಜ್ ಕುಮಾರ್ ನುಡಿದರು.