3:40 AM Friday27 - March 2026
ಬ್ರೇಕಿಂಗ್ ನ್ಯೂಸ್
ಕೇಂದ್ರ ಸರಕಾರವನ್ನು ಟೀಕೆ ಮಾಡುವುದರಲ್ಲೇ 3 ವರ್ಷಗಳ ಕಾಲಹರಣ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ… ಕೈ ನಾಯಕರ ಸಂಧಾನ ಯಶಸ್ವಿ: ದಾವಣಗೆರೆ ದಕ್ಷಿಣ ಬಂಡಾಯ ಅಭ್ಯರ್ಥಿ ಪೈಲ್ವಾನ್ ಸ್ಪರ್ಧೆಯಿಂದ… ಚಿಕ್ಕಮಗಳೂರು: ಬಿಸಿಲ ಧಗೆಗೆ ಹೊತ್ತಿ ಉರಿಯುತ್ತಿರುವ ಮೀಸಲು ಅರಣ್ಯ; ಅಪಾಯದಲ್ಲಿ ಜೀವ ಸಂಕುಲ 1ನೇ ತರಗತಿ ದಾಖಲಾತಿ ವಯೋಮಿತಿಯಲ್ಲಿ 60 ದಿನಗಳ ಸಡಿಲಿಕೆ: ಸಚಿವ ಮಧು ಬಂಗಾರಪ್ಪ… ತುಮಕೂರು | ಮಧ್ಯರಾತ್ರಿ ಕುಡುಕ ಪುಂಡರ ಅಟ್ಟಹಾಸ: 10ಕ್ಕೂ ಅಧಿಕ ವಾಹನಗಳ ಗ್ಲಾಸ್… ರಾಜ್ಯ ಸರ್ಕಾರಕ್ಕೆ ಪ್ರತಿಷ್ಠೆಯಾದ ಉಪ ಚುನಾವಣೆ: ಪೈಲ್ವಾನ್ ಮನವೊಲಿಸಲು ಜಮೀರ್‌ಗೆ ಮುಖ್ಯಮಂತ್ರಿ ಸೂಚನೆ ಮಾಜಿ ಶಾಸಕರ ಪುತ್ರನ ಕೊಲೆ ಪ್ರಕರಣ: ಮಹಿಳೆ ಸೇರಿ ಮೂವರು ಪೊಲೀಸ್ ವಶಕ್ಕೆ ಹೈಕಮಾಂಡ್ ಹೇಳಿದಾಗ ಡಿಕೆಶಿ ಸಿಎಂ: ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಫೋಟಕ ಹೇಳಿಕೆ ಕಾಂಗ್ರೆಸ್ ಮೋಸ ಮಾಡಿದೆ; ನಾಮಪತ್ರ ಹಿಂತೆಗೆಯುವ ಮಾತೇ ಇಲ್ಲ: ತೊಡೆ ತಟ್ಟಿದ ಪೈಲ್ವಾನ್‌ ದಾವಣಗೆರೆ ದಕ್ಷಿಣ: ಬಿಜೆಪಿ ಅಭ್ಯರ್ಥಿಯ ಪತ್ನಿಗೆ ಮುಸ್ಲಿಂ ಮಹಿಳೆಯರಿಂದ ಭವ್ಯ ಸ್ವಾಗತ, ಉಡಿ…

ಇತ್ತೀಚಿನ ಸುದ್ದಿ

ಕೊಪ್ಪಳ: ಬಾಡಿಗೆ ಮನೆಯಲ್ಲಿ ತಾಯಿ, ಮಗಳು, ಮೊಮ್ಮಗನ ತ್ರಿವಳಿ ಶವ ಪತ್ತೆ; ಕೊಲೆ ಶಂಕೆ

28/05/2024, 15:24

ಕೊಪ್ಪಳ(reporterkarnataka.com): ಒಂದೇ ಕುಟುಂಬಕ್ಕೆ ಸೇರಿದ ಮೂವರು ಅನುಮಾನಾಸ್ಪದವಾಗಿ ಸಾವನ್ಬಪ್ಪಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ. ಕೊಪ್ಪಳ ತಾಲೂಕಿನ ಮುನಿರಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಸಾವನ್ನಪ್ಪಿದವರನ್ನು ಹೊಸಲಿಂಗಾಪುರದ ರಾಜೇಶ್ವರಿ(50), ವಸಂತಾ(28) ಹಾಗೂ ವಸಂತಾ ಅವರ ಪುತ್ರ ಸಾಯಿಧರ್ಮ ತೇಜ್(5) ಎಂದು ಗುರುತಿಸಲಾಗಿದೆ.
ವಸಂತಾ ಅವರಿಗೆ ಆಂಧ್ರ ಪ್ರದೇಶದ ನಂದ್ಯಾಲ ಗ್ರಾಮದ ಯುವಕನ ಜತೆ ಮದುವೆ ಮಾಡಲಾಗಿತ್ತು. ಗಂಡನಿಂದ ದೂರವಾದ ವಸಂತಾ ಕಳೆದ ಎರಡು ವರ್ಷಗಳಿಂದ ಹೊಸಲಿಂಗಾಪುರದಲ್ಲಿ ಬಾಡಿಗೆ ಮನೆ ಮಾಡಿ ತಾಯಿ ಹಾಗೂ ಮಗನ ಜತೆ ವಾಸವಾಗಿದ್ದರು. ಸೋಮವಾರ ರಾತ್ರಿ ರಾಜೇಶ್ವರಿ ಅವರಿಗೆ ಇನ್ನೊಬ್ಬಳು ಮಗಳು ಮೊಬೈಲ್ ಕರೆ ಮಾಡಿದ್ದಳು. ಆದರೆ ಇತ್ತ ಕಡೆ ರಾಜೇಶ್ವರಿ ಅವರು ಕರೆ ಸ್ವೀಕರಿಸಿಲ್ಲ. ಹಾಗಾಗಿ ಮಂಗಳವಾರ ಬೆಳಗ್ಗೆ ಮಗಳು ಬಂದು ನೋಡುವಾಗ ಮೂವರು ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ.
ರಾಜೇಶ್ವರಿ ಹಾಗೂ ಸಾಯಿಧರ್ಮ ತೇಜ್ ಅವರ ಶವ ಬೆಡ್ ರೂಮ್ ನಲ್ಲಿ ಹಾಗೂ ವಸಂತ ಅವರ ಶವ ಕಿಚನ್ ನಲ್ಲಿ ಪತ್ತೆಯಾಗಿದೆ. ಇದೊಂದು ಕೊಲೆ ಕೃತ್ಯವಿರಬೇಕೆಂದು ಶಂಕಿಸಲಾಗಿದೆ. ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು