ಇತ್ತೀಚಿನ ಸುದ್ದಿ
ಕೊಪ್ಪ ದಯಂಬಳ್ಳಿಯಲ್ಲಿ ರಣಭೀಕರ ಮಳೆ: ಭತ್ತದ ಬೆಳೆ ನೀರುಪಾಲು; ವರ್ಷದ ತುತ್ತು ಕಳೆದುಕೊಂಡ ರೈತರು ಕಂಗಾಲು
01/09/2022, 22:12
ಶಶಿ ಬೆತ್ತದಕೊಳಲು ಕೊಪ್ಪ ಚಿಕ್ಕಮಗಳೂರು
info.reporterkarnatak.com
ಜಿಲ್ಲೆಯಲ್ಲಿ ಸುರಿದ ರಣಭೀಕರ ಮಳೆಗೆ ಕೊಪ್ಪ ತಾಲೂಕಿನ ದಯಂಬಳ್ಳಿ ಗ್ರಾಮದಲ್ಲಿ ಹತ್ತಾರು ಎಕರೆ ಭತ್ತದ ಬೆಳೆ ನಾಶವಾಗಿದೆ. ಕೇವಲ 2 ತಾಸಿನಲ್ಲಿ 9 ಇಂಚು ಮಳೆ ಸುರಿದಿದೆ.
ಜಯಪುರ, ಬಾಳೆಮನೆ, ಮಕ್ಕಿಕೊಪ್ಪ ಸುತ್ತಮುತ್ತಲಿನ ಪ್ರದೇಶದಲ್ಲಿ ಭಾರೀ ಮಳೆಯಾಗಿದೆ. ಬುಧವಾರ ಸಂಜೆ ಸುರಿದ ಈ ರಣಭೀಕರ ಮಳೆಗೆ ಕಾಫಿನಾಡಿಗರು ತತ್ತರಿಸಿ ಹೋಗಿದ್ದಾರೆ. ಭಾರಿ ಮಳೆಯಿಂದ ಭತ್ತದ ಗದ್ದೆ ಸಂಪೂರ್ಣ ಮುಳುಗಿ ಹೋಗಿದೆ. ಗದ್ದೆಯ ಮೇಲೆ ಭಾರೀ ಪ್ರಮಾಣದಲ್ಲಿ ಮರಳು ಶೇಖರವಾಗಿದೆ. ವರ್ಷದ ಕೂಳನ್ನು ಕಳೆದುಕೊಂಡ ರೈತರು ಕಂಗಾಲಾಗಿದ್ದಾರೆ.