6:42 PM Saturday13 - December 2025
ಬ್ರೇಕಿಂಗ್ ನ್ಯೂಸ್
ಮಡಿಕೇರಿ ಆಂಟಿ ಹನಿಟ್ರ್ಯಾಪ್ ಗೆ ಸಿಕ್ಕಿಬಿದ್ದ ಮಂಡ್ಯದ ಯುವಕ: ರಾತ್ರಿಯಿಡೀ ಗೂಸಾ; ಹಣ್ಣಕ್ಕೆ… ಮಡಿಕೇರಿಯಲ್ಲಿ ಆಂಧ್ರದ ನಕಲಿ ಪೊಲೀಸರ ಓಡಾಟ: ಪ್ರಕರಣ ದಾಖಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಿಭಜನೆಗೆ ಕ್ರಮ: ವಿಧಾನ ಸಭೆಯಲ್ಲಿ ಸಚಿವ ಬಿ.ಎಸ್.ಸುರೇಶ್ ದ್ವೇಷ ಭಾಷಣಕ್ಕೆ 10 ವರ್ಷ ಜೈಲು ಶಾಸನ ಕಾಂಗ್ರೆಸ್ ನ ಕ್ರೂರ ಸಂಪ್ರದಾಯದ… ಚಿಕ್ಕಮಗಳೂರಿನಲ್ಲಿ ಪಿಪಿಪಿ ಮಾದರಿಯಲ್ಲಿ ಸ್ಪೈಸ್ ಪಾರ್ಕ್ ಅಭಿವೃದ್ಧಿ: ವಿಧಾನ ಪರಿಷತ್ ನಲ್ಲಿ ಸರಕಾರ… ಕೆಪಿಟಿಸಿಎಲ್: 448 ಕಿರಿಯ ಸ್ಟೇಷನ್ ಪರಿಚಾರಕ ಮತ್ತು ಕಿರಿಯ ಪವರ್‌ಮ್ಯಾನ್‌ಗಳ ನೇಮಕ ಭಾರತದಲ್ಲಿ ಎಫ್ ಡಿಐ ಹೆಚ್ಚಳ: ಪ್ರಧಾನಿ ಮೋದಿಗೆ ಸಂಸದ ಬಸವರಾಜ ಬೊಮ್ಮಾಯಿ ಅಭಿನಂದನೆ ಮೈಸೂರು ಅರಮನೆ ಮುಖ್ಯ ದ್ವಾರದ ಮೇಲ್ಚಾವಣಿ ಕುಸಿತ: ವರಾಹ ಗೇಟ್ ಬಳಿ ಬ್ಯಾರಿಕೇಡ್… ಶಾಲೆಗಳ ಮೂಲಸೌಕರ್ಯಕ್ಕೆ ಕ್ರಮ; ಮಕ್ಕಳ ಶೂ-ಸಾಕ್ಸ್ ಅನುದಾನ ಪೂರ್ಣ ಬಿಡುಗಡೆ: ಸಚಿವ ಮಧು… ಹಂತ ಹಂತವಾಗಿ ಖಾಲಿ ಹುದ್ದೆಗಳ ಭರ್ತಿ: ಬೆಳಗಾವಿ ಅಧಿವೇಶನದಲ್ಲಿ ಮುಖ್ಯಮಂತ್ರಿ ಭರವಸೆ

ಇತ್ತೀಚಿನ ಸುದ್ದಿ

ಕೊಪ್ಪ ಸರ್ಕಲ್ ನಲ್ಲಿ ಬಲಿಗಾಗಿ ಕಾಯುತ್ತಿದೆ ಮೃತ್ಯುಕೂಪ!; ಇನ್ನಾದರೂ ಸ್ಥಳೀಯಾಡಳಿತ ಎಚ್ಚೆತ್ತುಕೊಳ್ಳಲಿ

27/07/2024, 00:08

ರಶ್ಮಿ ಶ್ರೀಕಾಂತ್ ನಾಯಕ್ ತೀರ್ಥಹಳ್ಳಿ ಶಿವಮೊಗ್ಗ

info.reporterkarnataka@gmail.com

ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿ 169 ರ ಕೊಪ್ಪ ಸರ್ಕಲ್ ನಲ್ಲಿ ಭಾರಿ ಗಾತ್ರದ ಹೊಂಡ ಗುಂಡಿಯೊಂದು ರಸ್ತೆ ಮಧ್ಯದಲ್ಲಿ ಬಾಯಿ ತೆರದು ಅಪಾಯಕ್ಕೆ ಅಹ್ವಾನ ನೀಡುತ್ತಿದೆ.


ಹೊಂಡದಲ್ಲಿ ಮಳೆಯ ನೀರು ತುಂಬಿ ರಸ್ತೆ ಪಕ್ಕದಲ್ಲಿ ಓಡಾಟ ನಡೆಸುವ ಜನರಿಗೆ ವಾಹನಗಳ ಓಡಾಟದಿಂದ ಮಳೆ ನೀರು ಸಿಂಪಡಣೆ ಆಗುತ್ತಿದೆ. ಕೊಳಚೆ ನೀರು ಜನರಿಗೆ ಎರಚುತ್ತಿರುವುದರಿಂದ ಮಳೆಗಾಲದಲ್ಲಿ ಇದೊಂದು ಹೊಸ ಭಾಗ್ಯ ಎಂದು ಗೊಣಗುತ್ತಾ ಓಡಾಡುತ್ತಿದ್ದಾರೆ. ಒಂದು ತಿಂಗಳಿಗೂ ಹೆಚ್ಚು ದಿನದಿಂದ ಈ ಹೊಂಡ ಬಾಯಿ ತೆರೆದು ಕೊಳಚೆ ನೀರು ತುಂಬಿಕೊಂಡು ಪ್ರತಿನಿತ್ಯ ಓಡಾಟ ನಡೆಸುವ ಜನರಿಗೆ ಸಮಸ್ಯೆ ಆಗುತ್ತಿದ್ದರು ಒಂದು ಬುಟ್ಟಿ ಮಣ್ಣು ಹಾಕಿ ಸುಮ್ಮನಾಗಿದ್ದರು. ಈಗ ಮತ್ತೆ ಬಾಯಿ ತೆರೆದಿದ್ದು ಇದುವರೆಗೂ ಅದನ್ನು ಮುಚ್ಚಬೇಕು ಎಂದು ಯಾರು ಕೂಡ ನೋಡಿಲ್ಲ.
ಅದೇ ರಸ್ತೆಯಲ್ಲಿ ಅಧಿಕಾರಿಗಳನ್ನು ಸೇರಿ ಸ್ಥಳೀಯ ಜನಪ್ರತಿನಿಧಿಗಳು ಓಡಾಟ ನಡೆಸುತ್ತಾರೆ. ಆದರೆ ಇಲ್ಲಿಯವರೆಗೂ ಅವರ ಕಣ್ಣಿಗೆ ಈ ಬೃಹತ್ ಆಕಾರದ ಹೊಂಡ ಬಿದ್ದಿರುವುದು ಕಾಣದೇ ಇರುವುದು ವಿಷಾದನಿಯ.
ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಗಮನಿಸಿ ಹೊಂಡ ಮುಚ್ಚಿಸಿ ಯಾವುದೇ ಕೊಳಚೆ ನೀರು ಹಾರದಂತೆ ಜನರಿಗೆ ಓಡಾಟ ನಡೆಸಲು ಅವಕಾಶ ಮಾಡಿಕೊಡುತ್ತಾರ? ಎಂದು ಕಾದು ನೋಡಬೇಕಿದೆ.

ಇತ್ತೀಚಿನ ಸುದ್ದಿ

ಜಾಹೀರಾತು