12:54 PM Wednesday11 - December 2024
ಬ್ರೇಕಿಂಗ್ ನ್ಯೂಸ್
ಬೆಳಗಾವಿ ಸುವರ್ಣ ಸೌಧಕ್ಕೆ ಪಂಚಮಸಾಲಿ ಪ್ರತಿಭಟನಾಕಾರರಿಂದ ಮುತ್ತಿಗೆ ಯತ್ನ: ಪೊಲೀಸ್ ಲಾಠಿಚಾರ್ಜ್ ಗೆ… ಪಂಚಮಸಾಲಿ 2ಎ ಮೀಸಲಾತಿ ಕುರಿತು ಸುಪ್ರೀಂ ಕೋರ್ಟ್ ಆದೇಶ ಸದನದ ಮುಂದೆ ಮಂಡಿಸುವೆ:… ಮುರುಡೇಶ್ವರ: ಬಾಲಕಿಯರ ರಕ್ಷಿಸಲಾಗದೆ ಅಸಹಾಯಕರಾದ ಲೈಫ್ ಗಾರ್ಡ್; ಸಚಿವ ವೈದ್ಯರೇ ಏನು ಮಾಡುತ್ತಿದ್ದೀರಿ? ಕಾಫಿನಾಡಲ್ಲಿ ಅಪರೂಪದ ರಕ್ತ ಕನ್ನಡಿ ಹಾವು ಪತ್ತೆ: ಉರಗ ಸಂತತಿಯಲ್ಲೇ ಮೋಸ್ಟ್ ಡೇಂಜರಸ್… ಮಹಿಳೆಯರ, ಯುವತಿಯರ ಬಗ್ಗೆ ಅಸಭ್ಯ ಪದ, ಅಶ್ಲೀಲ ಚಿತ್ರ: ಕೊನೆಗೂ ಸೆರೆ ಸಿಕ್ಕ… ಬೆಳ್ತಂಗಡಿ: ಗೃಹಿಣಿಯ ಬೆದರಿಸಿ ಕತ್ತಿನಿಂದ ಕರಿಮಣಿ ಸರ ಎಳೆದು ಆರೋಪಿ ಪರಾರಿ ಬೆಳಗಾವಿ ಅಧಿವೇಶನ: ಜಲಜೀವನ ಮಿಷನ್ ಅನುಷ್ಠಾನ ಕುರಿತು ಸರಕಾರದ ಗಮನ ಸೆಳೆದ ಶಾಸಕ… ಬೆಳಗಾವಿ ಅಧಿವೇಶನ: ಸಂಸತ್ತಿಗೆ ಆಯ್ಕೆಯಾದ ಇಬ್ಬರು ಮಾಜಿ ಸಿಎಂಗಳಿಗೂ ಆಸನದ ವ್ಯವಸ್ಥೆ! ಶಾಸಕ ದರ್ಶನ್ ಧ್ರುವನಾರಾಯಣ್ ಗೆ ಸಚಿವ ಸ್ಥಾನ ನೀಡುವಂತೆ ದಲಿತ ಮುಖಂಡರ ಒತ್ತಾಯ ಗ್ಯಾಸ್ ಸ್ಫೋಟದಿಂದ ಗಾಯಗೊಂಡ ತಾಯಿ-ಮಕ್ಕಳಿಗೆ ಸೂಕ್ತ ಚಿಕಿತ್ಸೆಗೆ ಸ್ಪೀಕರ್ ಖಾದರ್ ಸೂಚನೆ

ಇತ್ತೀಚಿನ ಸುದ್ದಿ

ಕೊಪ್ಪ: ಆಟವಾಡುತ್ತಿದ್ದಾಗ ಬಾವಿಗೆ ಬಿದ್ದು ಇಬ್ಬರು ಮಕ್ಕಳ ದಾರುಣ ಸಾವು

11/12/2024, 12:25

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka@gmail.com

ಆಟವಾಡುತ್ತಿದ್ದಾಗ ಬಾವಿಗೆ ಬಿದ್ದು 2 ಮಕ್ಕಳು ಸಾವನ್ನಪ್ಪಿದ ದಾರುಣ ಘಟನೆ ಕೊಪ್ಪ ತಾಲೂಕಿನ ಅಮ್ಮಡಿ ಎಸ್ಟೇಟ್ ನಲ್ಲಿ ನಡೆದಿದೆ‌.
ಮೃತ್ಯಪಟ್ಟ ಮಕ್ಕಳನ್ನು ಸೀಮಾ (6) ಹಾಗೂ ರಾಧಿಕಾ (2) ಎಂದು ಗುರುತಿಸಲಾಗಿದೆ.


ಮಧ್ಯಪ್ರದೇಶ ಮೂಲದ ಸುನೀತಾ ಎಂಬುವರ ಮಕ್ಕಳು ಇವರಾಗಿದ್ದಾರೆ.ಕೂಲಿಗಾಗಿ ಮಧ್ಯಪ್ರದೇಶದಿಂದ ಬಂದು ತೋಟದ ಮನೆಯಲ್ಲಿದ್ದ ಕುಟುಂಬ ಇದಾಗಿದೆ.
ಮಕ್ಕಳನ್ನ ಮನೆಯಲ್ಲೇ ಬಿಟ್ಟು ತೋಟದ ಕೆಲಸಕ್ಕೆ ತಾಯಿ
ಹೋಗಿದ್ದರು. ಸಂಜೆ ಮನೆಗೆ ಬಂದಾಗ ಮಕ್ಕಳು ಇಲ್ಲದ್ದನ್ನ ಕಂಡು ತಾಯಿ ಕಣ್ಣೀರಿಟ್ಟರು.
ಕಾರ್ಮಿಕರು ಹುಡುಕಾಡಿದಾಗ ಬಾವಿಯಲ್ಲಿ ಮಕ್ಕಳ ಮೃತದೇಹ ಪತ್ತೆಯಾಗಿದೆ.
ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು