ಇತ್ತೀಚಿನ ಸುದ್ದಿ
ಕೊಪ್ಪ: ಭಾರೀ ಮಳೆಯಿಂದ ಬೆಳೆ ಹಾನಿ; ಸಾಲ ಮಾಡಿ ಕೃಷಿ ಮಾಡಿದ ರೈತ ಆತ್ಮಹತ್ಯೆಗೆ ಶರಣು
13/08/2022, 14:02
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಮಳೆಯಿಂದ ಬೆಳೆ ನಷ್ಟ ಉಂಟಾಗಿ ಮನನೊಂದು ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಪ್ಪ ತಾಲೂಕಿನ ಜಯಪುರ ಗ್ರಾಮದಲ್ಲಿ ನಡೆದಿದೆ.
ಗಣೇಶ್ (38) ಎಂಬವರು ಬೆಳೆಹಾನಿಯಿಂದ ನೊಂದು ಮೈಲುತುತ್ತು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಗಣೇಶ್ ಅವರು ಜಮೀನಿಗಾಗಿ ಬ್ಯಾಂಕಿನಿಂದ 2 ಲಕ್ಷ ಹಾಗೂ 45 ಸಾವಿರ ಕೈ ಸಾಲ ಮಾಡಿಕೊಂಡಿದ್ದರು.
ಭಾರೀ ಮಳೆಯಿಂದ ಅವರ ಅಡಿಕೆ, ಕಾಫಿ, ಮೆಣಸು ಬೆಳೆ ಹಾನಿಗೀಡಾಗಿದೆ.ಮಳೆಯಿಂದ ಬೆಳೆ ಹಾಳಾಯ್ತು, ಸಾಲ ತೀರಿಸುವುದು ಹೇಗೆಂದು ಕಂಗಾಲಾದ ರೈತ ಗಣೇಶ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಮೃತನ ತಂದೆ ಬಾಳೆಹೊನ್ನೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.